ರಾಜ್ಯವಾರು ತಲಾ ನಿವ್ವಳ ಆಂತರಿಕ ಉತ್ಪಾದನೆಯಲ್ಲಿ ಕರ್ನಾಟಕ ನಂ.1

0
950

ರಾಜ್ಯದ ತಲಾ ನಿವ್ವಳ ಆಂತರಿಕ ಉತ್ಪಾದನೆಯಲ್ಲಿ(ಎನ್‌ಎಸ್‌ಡಿಪಿ) ಕರ್ನಾಟಕವು 2017-18ರಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ.

ಹೊಸದಿಲ್ಲಿ : ರಾಜ್ಯದ ತಲಾ ನಿವ್ವಳ ಆಂತರಿಕ ಉತ್ಪಾದನೆಯಲ್ಲಿ(ಎನ್‌ಎಸ್‌ಡಿಪಿ) ಕರ್ನಾಟಕವು 2017-18ರಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. 
ಈ ಅವಧಿಯಲ್ಲಿ ರಾಜ್ಯ ಸರಾಸರಿ 1,81,788 ರೂ.ಗಳಷ್ಟು ತಲಾ ನಿವ್ವಳ ಆಂತರಿಕ ಉತ್ಪಾದನೆ  ದಾಖಲಿಸಿದೆ. 
ತೆಲಂಗಾಣ 2ನೇ ಸ್ಥಾನದಲ್ಲಿದ್ದು, 1,81,034 ರೂ., ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದ್ದು 1,80,596 ರೂ. ದಾಖಲಿಸಿದೆ. ತಲಾ ಆದಾಯದ ಪೈಕಿ ಹೊಸದಿಲ್ಲಿ ಮೊದಲ ಸ್ಥಾನದಲ್ಲಿದ್ದು 3,29,093 ರೂ. ತಲಾ ಆದಾಯ ಹೊಂದಿದೆ ಎಂದು ವರದಿ ನೀಡಿದೆ. 

ತಲಾ ಆದಾಯದಲ್ಲಿ ಬಿಹಾರ ಹಿಂದುಳಿದಿದ್ದು, 38,860 ರೂ. ಗಳಷ್ಟಿದೆ ಎಂದು ಹಣಕಾಸು ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ.