ರಾಜ್ಯದಲ್ಲಿ 24*7 ವಾಯು ಗುಣಮಟ್ಟ ತಪಾಸಣಾ ಕೇಂದ್ರಗಳ ಸ್ಥಾಪನೆ

0
16

ಮೈಸೂರು ಸೇರಿದಂತೆ ನೆರೆ ಹೊರೆಯ ಜಿಲ್ಲೆಗಳಲ್ಲಿ ವಾಯು ಗುಣಮಟ್ಟ ತಪಾಸಣಾ ಕೇಂದ್ರಗಳು ಶೀಘ್ರದಲ್ಲೇ ಸ್ಥಾಪನೆಯಾಗಲಿವೆ. ರಾಜ್ಯದ 29 ಸ್ಥಳಗಳಲ್ಲಿ ಸುಮಾರು ಒಂದೂವರೆ ಕೋಟಿ ರು ವೆಚ್ಚದಲ್ಲಿ ಈ ಕೇಂದ್ರಗಳ ಸ್ಥಾಪನೆಯಾಗಲಿದೆ.

ಮೈಸೂರು, ಚಾಮರಾಜನಗರ, ಮಡಿಕೇರಿ, ಹಾಸನ ಜಿಲ್ಲೆಗಳಲ್ಲಿ ಕೇಂದ್ರಗಳ ಸ್ಥಾಪನೆಗಾಗಿ ಈಗಾಗಲೆ ನಿವೇಶನಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ 8 ಸ್ಥಳಗಳಲ್ಲಿ ಸ್ಥಾಪನೆ ಮಾಡಲಾಗುವುದು, ಬೆಂಗಳೂರು ಜಿಲ್ಲೆ ಒಂದರಲ್ಲೇ 5 ಕೇಂದ್ರಗಳ ನಿರ್ಮಾಣವಾಗಲಿದೆ. 
 
ಎರಡನೇ ಹಂತದಲ್ಲಿ 13 ಹಾಗೂ ಮೂರನೇ ಹಂತದಲ್ಲಿ 13 ಕೇಂದ್ರಳು ಸ್ಥಾಪನೆಯಾಗಲಿವೆ. ಮುಂದಿನ ಹಂತಗಳಲ್ಲಿ ಮಂಡ್ಯ, ತುಮಕೂರು, ಬಳ್ಳಾರಿ, ಚಿತ್ರದುರ್ಗದಲ್ಲಿ  ಸ್ಥಾಪನೆ ಮಾಡುವ ಯೋಜನೆಯಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಬಿ.ಎಂ ಪ್ರಕಾಶ್ ತಿಳಿಸಿದ್ದಾರೆ.
 
ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಬಳಿಯಿರುವ ಹವಾಮಾನ ಇಲಾಖೆಯ ಮಳೆ ಮಾನದಂಡ ಕಚೇರಿ ಬಳಿ ಸ್ಥಾಪಿಸಲಾಗುವುದು. 
 
ಬೆಂಗಳೂರು -ಹಾಸನ ರಸ್ತೆಯಲ್ಲಿರುವ ಹಾಸನದಲ್ಲಿ ಸರ್ಕಾರಿ ಎಂಜಿನೀಯರಿಂಗ್ ಕಾಲೇಜು ಕ್ಯಾಂಪಸ್ ಬಳಿ, ಮಡಿಕೇರಿಯ ಆಯುಷ್ ಆಸ್ಪತ್ರೆ ಬಳಿ, ಸ್ಥಾಪನೆ ಮಾಡಲಾಗುವುದು ಎಂದು ಹೇಳಿದ್ದಾರೆ. 
 
ತಜ್ಞರ ಸಮಿತಿಯ ಸದಸ್ಯರಾಗಿರುವ ಪ್ರಕಾಶ್  ಎಲ್ಲಾ ಪ್ರಾಧಿಕಾರಿಗಳು ತಾವು ಗುರುತಿಸುವ ಸ್ಥಳದಲ್ಲಿ ನಿವೇಶನ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.  ಬೇರೆ ಜಿಲ್ಲೆಗಳನ್ನು ಹೊರತು ಪಡಿಸಿ, ಮೈಸೂರಿನಲ್ಲಿ ಎರಡನೇ ಹಂತದಲ್ಲಿ  ಈ ಕೇಂದ್ರ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.
 
ವಾಯು ಮಾಲಿನ್ಯ ಮಟ್ಟವನ್ನು ಮೇಲ್ವಿಚಾರಣಾ ಮಾಡುವ ಉದ್ದೇಶದಿಂದ ಈ ಕೇಂದ್ರಗಳ ಸ್ಥಾಪನೆಯಾಗುತ್ತಿದ್ದು, ದಿನದ 24 ಗಂಟೆಗಳಲ್ಲಿಯೂ ಹವಾಮಾನ ಸಂಬಂಧಿತ ದತ್ತಾಂಶಗಳ ಬಗ್ಗೆ ಮಾಹಿತಿ ಮಾಡಲಾಗುತ್ತದೆ.