ರಾಜಸ್ಥಾನದಲ್ಲಿ “ಬಿಪಿಎಲ್‌” ಕುಟುಂಬದ ಮಹಿಳೆಯರಿಗೆ ಉಚಿತ ಮೊಬೈಲ್‌

0
670

ಈ ವರ್ಷಾಂತ್ಯಕ್ಕೆ ಚುನಾವಣೆಗೆ ಸಿದ್ಧವಾಗುತ್ತಿರುವ ರಾಜಸ್ಥಾನದಲ್ಲಿ ಮತ ಸೆಳೆಯಲು ರಾಜಕೀಯ ಪಕ್ಷಗಳು ನಿಧಾನವಾಗಿ ಕಸರತ್ತು ಆರಂಭಿಸಿವೆ. ಆಡಳಿತಾರೂಢ ಬಿಜೆಪಿಯು ಬಿಮ್‌ಷಾ ಯೋಜನೆಯಡಿ ಬಡಕುಟುಂಬದ ಮಹಿಳೆಯರಿಗೆ ಉಚಿತ ಮೊಬೈಲ್‌ ಫೋನ್‌ ವಿತರಿಸಲು ಸಿದ್ಧತೆ ನಡೆಸಿದೆ.

ಜೈಪುರ: ಈ ವರ್ಷಾಂತ್ಯಕ್ಕೆ ಚುನಾವಣೆಗೆ ಸಿದ್ಧವಾಗುತ್ತಿರುವ ರಾಜಸ್ಥಾನದಲ್ಲಿ ಮತ ಸೆಳೆಯಲು ರಾಜಕೀಯ ಪಕ್ಷಗಳು ನಿಧಾನವಾಗಿ ಕಸರತ್ತು ಆರಂಭಿಸಿವೆ. ಆಡಳಿತಾರೂಢ ಬಿಜೆಪಿಯು ಬಿಮ್‌ಷಾ ಯೋಜನೆಯಡಿ ಬಡಕುಟುಂಬದ ಮಹಿಳೆಯರಿಗೆ ಉಚಿತ ಮೊಬೈಲ್‌ ಫೋನ್‌ ವಿತರಿಸಲು ಸಿದ್ಧತೆ ನಡೆಸಿದೆ. 

ಸರಕಾರದ ಕಲ್ಯಾಣ ಯೋಜನೆಗಳ ಸಬ್ಸಿಡಿ ಹಾಗೂ ಸಬ್ಸಿಡಿಯೇತರ ಲಾಭವನ್ನು ಪಾರದರ್ಶಕ ಮಾದರಿಯಲ್ಲಿ ಫಲಾನುಭವಿಗಳ ಖಾತೆಗೆ ವರ್ಗಾಯಿಸುವ ಉದ್ದೇಶವನ್ನು ಬಿಮ್‌ಷಾ ಹೊಂದಿದ್ದು, ಈ ನಿಟ್ಟಿನಲ್ಲಿ ಉಚಿತ ಮೊಬೈಲ್‌ಗಳು ಜನರಿಗೆ ನೆರವಾಗಲಿದೆ ಎಂದು ಸರಕಾರ ಹೇಳಿದೆ. ಉಚಿತ ಮೊಬೈಲ್‌ ವಿತರಣೆಯು ಚುನಾವಣೆ ದೃಷ್ಟಿಯಿಂದಲೂ ಬಿಜೆಪಿಗೆ ನೆರವಾಗಲಿದೆ ಎನ್ನಲಾಗುತ್ತಿದೆ. ಇದರ ಜತೆಗ 5000 ಗ್ರಾಮ ಪಂಚಾಯಿತಿಗಳಿಗೆ ಉಚಿತ ವೈಫೈ ಸೌಕರ್ಯ ಒದಗಿಸಲಿದ್ದು, ಸೆಪ್ಟೆಂಬರ್‌ 1ರಿಂದ ಇದಕ್ಕೆ ಚಾಲನೆ ದೊರೆತಿದೆ.