“ರಹಸ್ಯ ಕಾರ್ಯಾಚರಣೆಗೆ” ಚೀನಾದ ಯುದ್ಧ ವಿಮಾನ ಕಾರ್ಯಾರಂಭ

0
21

ದೇಶೀಯವಾಗಿ ಅಭಿವೃದ್ಧಿಪಡಿಸಿದ ಬಹು ವಿಧ ಕಾರ್ಯಾಚರಣೆಯ ಜೆ–10ಸಿ ಯುದ್ಧ ವಿಮಾನ 2018 ಏಪ್ರೀಲ್ 17 ರ ಸೋಮವಾರದಿಂದ ಕಾರ್ಯಾರಂಭ ಮಾಡಿದೆ ಎಂದು ಚೀನಾದ ವಾಯುಪಡೆ ಹೇಳಿದೆ.

ಬೀಜಿಂಗ್‌: ದೇಶೀಯವಾಗಿ ಅಭಿವೃದ್ಧಿಪಡಿಸಿದ ಬಹು ವಿಧ ಕಾರ್ಯಾಚರಣೆಯ ಜೆ–10ಸಿ ಯುದ್ಧ ವಿಮಾನ 2018  ಏಪ್ರೀಲ್ 17 ರ ಸೋಮವಾರದಿಂದ ಕಾರ್ಯಾರಂಭ ಮಾಡಿದೆ ಎಂದು ಚೀನಾದ ವಾಯುಪಡೆ ಹೇಳಿದೆ.

ಈ ಸೂಪರ್‌ಸಾನಿಕ್‌ ಯುದ್ಧ ವಿಮಾನವನ್ನು ರಹಸ್ಯ ಕಾರ್ಯಾಚರಣೆಗಳಿಗೆ ಬಳಸಬಹುದು. ಭೂಮಿ ಮತ್ತು ಸಮುದ್ರದಲ್ಲಿನ ಗುರಿಯನ್ನು ಧ್ವಂಸಗೊಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ರಹಸ್ಯ ಕಾರ್ಯಾಚರಣೆಗೆ ಬಳಸುವ ಅತ್ಯಾಧುನಿಕ ಜೆ–20 ಯುದ್ಧ ವಿಮಾನವನ್ನು ಫೆಬ್ರುವರಿ ತಿಂಗಳಿನಲ್ಲಿ ಚೀನಾದ ವಾಯುಪಡೆಯ ಸೇವೆಗೆ ಸೇರ್ಪಡೆಗೊಳಿಸಲಾಗಿತ್ತು. ಜೆ–20 ನಾಲ್ಕನೇ ತಲೆಮಾರಿನ ಮಧ್ಯಮ ಮತ್ತು ದೂರ ವ್ಯಾಪ್ತಿಯ ಯುದ್ಧ ವಿಮಾನವಾಗಿದೆ.

ಹೊಸ ಯುದ್ಧ ವಿಮಾನಗಳು ವಾಯುಪಡೆಗೆ ಇನ್ನಷ್ಟು ಬಲ ತುಂಬಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.