ರಷ್ಯಾ ಮತ್ತು ಭಾರತ ಯುದ್ಧ ನೌಕೆ ನಿರ್ಮಾಣಕ್ಕೆ ಒಪ್ಪಂದ

0
529

ಫಿರಂಗಿ ಸಜ್ಜಿತ ಎರಡು ಯುದ್ಧ ನೌಕೆಗಳನ್ನು ನಿರ್ವಿುಸಲು ರಷ್ಯಾ ಮತ್ತು ಭಾರತ ಒಪ್ಪಂದ ಮಾಡಿಕೊಂಡಿವೆ. 3,571 ಕೋಟಿ ರೂ. (500 ಮಿಲಿಯನ್ ಡಾಲರ್) ವೆಚ್ಚದ ಈ ನೌಕೆ ಗೋವಾದಲ್ಲಿ ನಿರ್ಮಾಣವಾಗಲಿದೆ.

ನವದೆಹಲಿ: ಫಿರಂಗಿ ಸಜ್ಜಿತ ಎರಡು ಯುದ್ಧ ನೌಕೆಗಳನ್ನು ನಿರ್ವಿುಸಲು ರಷ್ಯಾ ಮತ್ತು ಭಾರತ ಒಪ್ಪಂದ ಮಾಡಿಕೊಂಡಿವೆ. 3,571 ಕೋಟಿ ರೂ. (500 ಮಿಲಿಯನ್ ಡಾಲರ್) ವೆಚ್ಚದ ಈ ನೌಕೆ ಗೋವಾದಲ್ಲಿ ನಿರ್ಮಾಣವಾಗಲಿದೆ.

ರಷ್ಯಾದ ಸರ್ಕಾರಿ ಸ್ವಾಮ್ಯದ ಶಸ್ತ್ರ ರಫ್ತುದಾರ ಸಂಸ್ಥೆ ರೋಸೊಬೊರೊನ್ ಎಕ್ಸ್​ಪೋರ್ಟ್ ಮತ್ತು ಗೋವಾದ ಶಿಪ್​ಯಾರ್ಡ್ ಲಿಮಿಟೆಡ್ (ಜಿಎಸ್​ಎಲ್) ಮಧ್ಯೆ ನವದೆಹಲಿಯಲ್ಲಿ ಈ ಒಡಂಬಡಿಕೆಯಾಗಿದೆ. ಗ್ರಿಗೊರೋವಿಚ್-ಕ್ಲಾಸ್ ‘ಪ್ರಾಜೆಕ್ಟ್ 1135.6’ ಹೆಸರಿನ ಈ ನೌಕೆ ನಿರ್ಮಾಣಕ್ಕೆ ರೋಸೊಬೊರೊನ್ ಎಕ್ಸ್​ಪೋರ್ಟ್ ಸಂಸ್ಥೆ ತಾಂತ್ರಿಕ ನೆರವು ನೀಡಲಿದೆ.

3,571 ಕೋಟಿ ರೂ. ವೆಚ್ಚದಲ್ಲಿ ನೌಕೆ ನಿರ್ಮಾಣಕ್ಕೆ ಬಳಸುವ ವಸ್ತುಗಳು, ವಿನ್ಯಾಸ, ರಷ್ಯಾದ ವಿಶೇಷ ನೆರವು ಒಳಗೊಂಡಿದೆ. ದೇಶಿಯ ಅಂಶಗಳಿಗೆ ಪ್ರತ್ಯೇಕ ತಗುಲಲಿದೆ. ಈ ವೆಚ್ಚ ಎಷ್ಟು ಎಂಬುದನ್ನು ಇನ್ನಷ್ಟೆ ಲೆಕ್ಕಹಾಕಬೇಕಿದೆ. ಮೊದಲ ನೌಕೆಯು 2026ಕ್ಕೆ ಮತ್ತು ಎರಡನೇ ನೌಕೆ 2027ಕ್ಕೆ ಸಿದ್ಧವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತ ನೌಕಾ ಪಡೆಯಲ್ಲಿ ಈಗ ಆರು ಇದೇ ಮಾದರಿಯ ನೌಕೆಗಳು ಇವೆ.

ಗ್ರಿಗೊರೋವಿಚ್-ಕ್ಲಾಸ್ ನೌಕೆ ವಿಶೇಷ

ಗ್ರಿಗೊರೋವಿಚ್-ಕ್ಲಾಸ್ ಸರಣಿಯ ಯುದ್ಧ ನೌಕೆಗಳಲ್ಲಿ ಅತ್ಯುತ್ತಮವಾದ ಶಸ್ತ್ರ ಮತ್ತು ಸೆನ್ಸಾರ್​ಗಳಿವೆ. ಈಗ ಹೊಸದಾಗಿ ನಿರ್ವಣವಾಗುವ ನೌಕೆಗಳಲ್ಲಿ ಈ ವ್ಯವಸ್ಥೆ ಮತ್ತಷ್ಟು ಸುಧಾರಣೆಯಾಗಲಿವೆ. ಹೊಸ ನೌಕೆಯಲ್ಲಿ ಉಕ್ರೇನ್ ನಿರ್ವಣದ ಅನಿಲ ಟರ್ಬನ್ ಇಂಜಿನ್​ಗಳು ಇರಲಿವೆ.

2023ರಲ್ಲಿ ಭಾರತಕ್ಕೆ

-ಠಿ; 7,142 ಕೋಟಿ (1 ಬಿಲಿಯನ್ ಡಾಲರ್) ವೆಚ್ಚದ ಎರಡು ಸಮರ ನೌಕೆ ಪೂರೈಕೆಗೆ ಕೆಲವು ವಾರಗಳ ಹಿಂದೆ ಭಾರತ- ರಷ್ಯಾ ಒಪ್ಪಂದ ಮಾಡಿಕೊಂಡಿವೆ. ನೌಕೆಗಳು ರಷ್ಯಾದ ಕ್ಯಾಲಿನಿಂಗ್ರಾಡ್ ಯಾಂತರ್ ಶಿಪ್​ಯಾರ್ಡ್​ನಲ್ಲಿ ನಿರ್ವಣವಾಗಲಿದ್ದು, 2022-23 ಹೊತ್ತಿಗೆ ಭಾರತದ ನೌಕಾಪಡೆಗೆ ಸೇರುವ ಸಾಧ್ಯತೆ ಇದೆ. ಒಂದೂವರೆ ತಿಂಗಳ ಹಿಂದೆ ರಷ್ಯಾದ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ‘ಎಸ್-400 ಟ್ರಯಂಫ್’ ಖರೀದಿಗೆ ಭಾರತ- ರಷ್ಯಾ ಸಹಿ ಹಾಕಿವೆ. ಇದು -ಠಿ; 39 ಸಾವಿರ ಕೋಟಿ ಬೃಹತ್ ಒಪ್ಪಂದವಾಗಿದೆ. ರಷ್ಯಾ ಜತೆ ಮಿಲಿಟರಿ ವ್ಯವಹಾರ ಇರಿಸಿಕೊಂಡಿರುವ ದೇಶಗಳಿಗೆ ನಿರ್ಬಂಧ ವಿಧಿಸಲಾಗುವುದು ಎಂಬ ಅಮೆರಿಕದ ಎಚ್ಚರಿಕೆಯನ್ನು ಲೆಕ್ಕಿಸದೆ ಭಾರತ ಎಸ್-400 ಟ್ರಯಂಫ್ ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು.