ರಷ್ಯಾದ “ಮೌಂಟ್ ಎಲ್ಬ್ರಸ್‌” ಏರಿದ ಕೊಡಗಿನ ಯುವತಿ “ಭವಾನಿ”

0
408

ಅದು ರಷ್ಯಾದ ಅತಿ ಎತ್ತರದ ಮೌಂಟ್ ಎಲ್ಬ್ರಸ್ ಪರ್ವತ. ಅದರ ತುತ್ತ ತುದಿಗೆ ಏರುವ ಮೂಲಕ ಪರ್ವತಾರೋಹಣದಲ್ಲಿ ಕೊಡಗಿನ ಯುವತಿ ಸಾಧನೆ ಮಾಡಿದ್ದಾರೆ.

ನಾಪೋಕ್ಲು (ಕೊಡಗು ಜಿಲ್ಲೆ): ಅದು ರಷ್ಯಾದ ಅತಿ ಎತ್ತರದ ಮೌಂಟ್ ಎಲ್ಬ್ರಸ್ ಪರ್ವತ. ಅದರ ತುತ್ತ ತುದಿಗೆ ಏರುವ ಮೂಲಕ ಪರ್ವತಾರೋಹಣದಲ್ಲಿ ಕೊಡಗಿನ ಯುವತಿ ಸಾಧನೆ ಮಾಡಿದ್ದಾರೆ. 

ಸಮೀಪದ ಪೇರೂರು ಗ್ರಾಮದ ತೆಕ್ಕಡ ನಂಜುಂಡ–ಪಾರ್ವತಿ ದಂಪತಿ ಪುತ್ರಿ ಭವಾನಿ ಅವರು 5,642 ಮೀಟರ್ ಎತ್ತರದ ಪರ್ವತವನ್ನೇರಿದವರು.

ನಿರಂತರವಾಗಿ 8 ಗಂಟೆ ನಡೆದು ಹಿಮಮಿಶ್ರಿತ ಈ ಪರ್ವತದ ತುತ್ತ ತುದಿಯಲ್ಲಿ ತ್ರಿವರ್ಣ ಧ್ವಜ ಹಾರಿಸುವಲ್ಲಿ ಯಶಸ್ವಿ ಆಗಿದ್ದಾರೆ. ಈ ಪರ್ವತವನ್ನು ಅತಿವೇಗವಾಗಿ ಏರಿದ ಭಾರತದ ಯುವತಿ ಕೂಡ. ಪರ್ವತಾರೋಹಣ ತಂಡದಲ್ಲಿ ವಿದೇಶದ ಮೂವರಿದ್ದರು. ಭಾರತ ಪ್ರತಿನಿಧಿಸಿದ್ದ ಭವಾನಿ ಮೊದಲು ಗುರಿ ತಲುಪಿದ್ದಾರೆ.

‘ಪ್ರಸ್ತುತ ಹಿಮಾಲಯದ ಮೌಂಟೇನಿಯರಿಂಗ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಬೋಧಕರಾಗಿ ಭವಾನಿ ಕೆಲಸ ಮಾಡುತ್ತಿದ್ದಾರೆ. ಪರ್ವತಾರೋಹಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರು ಈಜು, ಕುದುರೆ ಸವಾರಿ, ರಕ್ಷಣಾ ಕ್ಷೇತ್ರದಲ್ಲೂ ಆಸಕ್ತಿ ಹೊಂದಿದ್ದಾರೆ’ ಎಂದು ಪೋಷಕರು ಹೇಳುತ್ತಾರೆ. 

ಮುಂದಿನ ದಿನಗಳಲ್ಲಿ ಮೌಂಟ್ ಎವರೆಸ್ಟ್‌ ಏರುವ ಹಂಬಲ ಇದೆ. ತಯಾರಿ, ತರಬೇತಿ ಪಡೆಯುತ್ತಿರುವೆ.

                                         – ಭವಾನಿ, ಪರ್ವತಾರೋಹಿ