ರಣಜಿ ಟೂರ್ನಿಯಲ್ಲಿ 34 ತಂಡಗಳ ಆಟ

0
221

ದೇಶಿ ಕ್ರಿಕೆಟ್‌ನ ‘ರಾಜ’ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಬುಧವಾರ ಚಾಲನೆ ದೊರೆಯಲಿದೆ. ಈ ಬಾರಿ ಒಟ್ಟು 34 ತಂಡಗಳು ಕಣಕ್ಕಿಳಿಯಲಿವೆ. ಒಟ್ಟು ಎಂಟು ಹೊಸ ತಂಡಗಳು ಈ ಬಾರಿ ಟೂರ್ನಿಯಲ್ಲಿ ಅರ್ಹತೆ ಪಡೆದುಕೊಂಡಿವೆ.

ಪುಣೆ: ದೇಶಿ ಕ್ರಿಕೆಟ್‌ನ ‘ರಾಜ’ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಬುಧವಾರ ಚಾಲನೆ ದೊರೆಯಲಿದೆ. ಈ ಬಾರಿ ಒಟ್ಟು 34 ತಂಡಗಳು ಕಣಕ್ಕಿಳಿಯಲಿವೆ. ಒಟ್ಟು ಎಂಟು ಹೊಸ ತಂಡಗಳು ಈ ಬಾರಿ ಟೂರ್ನಿಯಲ್ಲಿ ಅರ್ಹತೆ ಪಡೆದುಕೊಂಡಿವೆ.

ಬಿಹಾರ ತಂಡವು ದಶಕದ ನಂತರ ಮರಳಿದೆ. ನಾಲ್ಕು ಗುಂಪುಗಳಲ್ಲಿ (ಎ,ಬಿ,ಸಿ,ಡಿ) ಪಂದ್ಯಗಳು ಆಯೋಜನೆ ಗೊಳ್ಳಲಿವೆ. ಹಾಲಿ ಚಾಂಪಿಯನ್ ವಿದರ್ಭ ಮತ್ತು ಕರ್ನಾಟಕ ತಂಡಗಳು ‘ಎ’ ಗುಂಪಿನಲ್ಲಿ ಆಡಲಿವೆ. ಲೀಗ್ ಹಂತದಲ್ಲಿ ‘ಎ’ ಮತ್ತು ‘ಬಿ’ ಗುಂಪುಗಳ ಜಂಟಿ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ ಐದು ಸ್ಥಾನ ಪಡೆಯುವ ತಂಡಗಳು ಎಂಟರ ಘಟ್ಟಕ್ಕೆ ಪ್ರವೇಶಿಸಲಿವೆ. ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಎರಡು ಮತ್ತು ‘ಡಿ’ ಗುಂಪಿನಿಂದ ಒಂದು  ತಂಡವು ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆಯಲಿವೆ.

ಈಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿಯೂ ಇದೇ ಪದ್ಧತಿ ಅನುಸರಿಸಲಾಗಿತ್ತು. ಅದರಲ್ಲಿ  ಚಾಂಪಿಯನ್ ಆಗಿದ್ದ ಮುಂಬೈ ತಂಡವು ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಕರ್ನಾಟಕ ತಂಡವು ಮೊದಲ ಸುತ್ತಿನಲ್ಲಿ ಕಣಕ್ಕೆ ಇಳಿಯುತ್ತಿಲ್ಲ. ನವೆಂಬರ್ 12ರಂದು ನಾಗಪುರದಲ್ಲಿ ವಿದರ್ಭ ತಂಡವನ್ನು ಎದುರಿಸುವ ಮೂಲಕ ಈ ಬಾರಿಯ ಅಭಿಯಾನ ಆರಂಭಿಸಲಿದೆ.

ವಿದರ್ಭ–ಮಹಾರಾಷ್ಟ್ರ ಮುಖಾಮುಖಿ: ‘ಹಾಲಿ ಚಾಂಪಿಯನ್’ ವಿದರ್ಭ ತಂಡವು ಎಲೀಟ್ ‘ಎ’ ಗುಂಪಿನಲ್ಲಿ ಮಹಾರಾಷ್ಟ್ರದ ಎದುರು ಮೊದಲ ಪಂದ್ಯ ಆಡಲಿದೆ. ಪುಣೆಯಲ್ಲಿ ಹಣಾಹಣಿ ನಡೆಯಲಿದೆ.

ಈಚೆಗೆ ಭಾರತ ‘ಎ’ ತಂಡದಲ್ಲಿ ಮಿಂಚಿದ್ದ ಅಂಕಿತ್ ಭಾವ್ನೆ ಮಹಾ ರಾಷ್ಟ್ರದ ನಾಯಕತ್ವ ವಹಿಸಿದ್ದಾರೆ.  ವಿದರ್ಭಕ್ಕೆ ಫೈಜ್ ಫಜಲ್ ನಾಯಕತ್ವ ವಹಿಸಿದ್ದಾರೆ. ಕನ್ನಡಿಗ ಗಣೇಶ್ ಸತೀಶ್, ಅನುಭವಿ ಆಟಗಾರ ವಾಸೀಂ ಜಾಫರ್, ಯುವ ಬೌಲರ್ ರಜನೀಶ್ ಗುರುಬಾನಿ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಅನುಭವಿ ಉಮೇಶ್ ಯಾದವ್ ಅವರು ಭಾರತ ತಂಡದಲ್ಲಿ ಆಡುತ್ತಿದ್ದಾರೆ.

ಮಹಾರಾಷ್ಟ್ರ ತಂಡವು ತನ್ನ ತವರಿ ನಲ್ಲಿ  ಜಯದ ಆರಂಭ ಮಾಡುವ ಕನಸು ಕಾಣುತ್ತಿದೆ. ತಂಡಕ್ಕೆ ಆಲ್‌ರೌಂಡರ್ ಕೇದಾರ್ ಜಾಧವ್ ಅವರು ಲಭ್ಯರಿಲ್ಲ. ಆದರೆ, ಋತುರಾಜ್ ಗಾಯಕವಾಡ, ರೋಃಹಿತ್ ಮೋಟ್ವಾನಿ, ರಾಹುಲ್ ತ್ರಿಪಾಠಿ  ಉತ್ತಮ ಲಯದಲ್ಲಿದ್ದಾರೆ.

ತಂಡಗಳು ಇಂತಿವೆ: ವಿದರ್ಭ: ಫೈಜ್ ಫಜಲ್ (ನಾಯಕ), ವಸೀಂ ಜಾಫರ್, ಸಂಜಯ್ ರಾಮಸ್ವಾಮಿ, ಅಪೂರ್ವ್ ವಾಂಖೆಡೆ, ಗಣೇಶ್ ಸತೀಶ್, ಅಕ್ಷಯ್ ಕರ್ಣೇವರ್, ಅಥರ್ವ ತೈಡೆ, ಅಕ್ಷಯ್ ವಾಡಕರ್ (ವಿಕೆಟ್‌ಕೀಪರ್), ರಜನೀಶ್ ಗುರುಬಾನಿ, ಲಲಿತ್ ಯಾದವ್, ಆದಿತ್ಯ ಸರವಟೆ, ಆದಿತ್ಯ ಠಾಕ್ರೆ, ಶ್ರೀಕಾಂತ್ ವಾಘ್, ಅಕ್ಷಯ್ ವಾಖರೆ, ಸಿದ್ಧೇಶ್ ವಾಥ್; ಮಹಾರಾಷ್ಟ್ರ: ಅಂಕಿತ್ ಭಾವ್ನೆ (ನಾಯಕ), ೃತುರಾಜ್ ಗಾಯಕ ವಾಡ, ಜೈ ಪಾಂಡೆ, ರಾಹುಲ್ ತ್ರಿಪಾಠಿ, ರೋಹಿತ್ ಮೋಟ್ವಾನಿ (ವಿಕೆಟ್‌ ಕೀಪರ್), ನೌಷಾದ್ ಶೇಖ್, ಚಿರಾಗ್ ಖುರಾನಾ, ಸತ್ಯಜೀತ್ ಬಚಾವ್, ನಿಕಿತ್ ಧುಮಾಲ್, ಸಮದ್ ಫಲ್ಲಾ, ಅನುಪಮ್ ಸಂಕ್ಲೇಚಾ ಸ್ವಪ್ನಿಲ್ ಗುಗಳೆ, ಹರ್ಷದ್ ಖಡಿವಾಲೆ, ಮುಖೇಶ್ ಚೌಧರಿ.