ರಘು ಕಾರ್ನಾಡ್‌ ಕೃತಿಗೆ “ವಿಂಡ್ಹಮ್‌ ಕ್ಯಾಂಬೆಲ್ ಪ್ರಶಸ್ತಿ”

0
599

ಪತ್ರಕರ್ತ ಹಾಗೂ ಲೇಖಕ ರಘು ಕಾರ್ನಾಡ್ ಅವರ ‘ಫಾರ್ದೆಸ್ಟ್ ಫೀಲ್ಡ್: ಆ್ಯನ್ ಇಂಡಿಯನ್ ಸ್ಟೋರಿ ಆಫ್ ದಿ ಸೆಕೆಂಡ್ ವರ್ಲ್ಡ್ ವಾರ್’ ಕೃತಿ, ಯೇಲ್ ವಿಶ್ವವಿದ್ಯಾಲಯ ನೀಡುವ ಈ ವರ್ಷದ ಪ್ರತಿಷ್ಠಿತ ವಿಂಡ್ಹಮ್‌ ಕ್ಯಾಂಬೆಲ್ ಪ್ರಶಸ್ತಿಗೆ ಭಾಜನವಾಗಿದೆ.

ನವದೆಹಲಿ: ಪತ್ರಕರ್ತ ಹಾಗೂ ಲೇಖಕ ರಘು ಕಾರ್ನಾಡ್ ಅವರ ‘ಫಾರ್ದೆಸ್ಟ್ ಫೀಲ್ಡ್: ಆ್ಯನ್ ಇಂಡಿಯನ್ ಸ್ಟೋರಿ ಆಫ್ ದಿ ಸೆಕೆಂಡ್ ವರ್ಲ್ಡ್ ವಾರ್’ ಕೃತಿ, ಯೇಲ್ ವಿಶ್ವವಿದ್ಯಾಲಯ ನೀಡುವ 2019 ನೇ ವರ್ಷದ ಪ್ರತಿಷ್ಠಿತ ವಿಂಡ್ಹಮ್‌ ಕ್ಯಾಂಬೆಲ್ ಪ್ರಶಸ್ತಿಗೆ ಭಾಜನವಾಗಿದೆ. 

ರಘು ಸೇರಿ ವಿಶ್ವದಾದ್ಯಂತ ಒಟ್ಟು 8 ಲೇಖಕರು ಈ ಬಾರಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರತಿ ಲೇಖಕರಿಗೆ ತಲಾ 1.14 ಕೋಟಿ ಬಹುಮಾನ ನೀಡಲಾಗುತ್ತದೆ. 

2015ರಲ್ಲಿ ಪ್ರಕಟವಾದ ಈ ಕೃತಿಯಲ್ಲಿ, 2ನೇ ಜಾಗತಿಕ ಯುದ್ಧದ ವೇಳೆ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ಒಂದೇ ಕುಟುಂಬದ ಮೂವರ ಕಥೆ ಕಟ್ಟಿಕೊಡಲಾಗಿದೆ. 

‘ಕಾಲ್ಪನಿಕತೆ ಹಾಗೂ ವಿಚಲಿತಗೊಳಿಸುವ ರಾಷ್ಟ್ರೀಯ ಮತ್ತು ವಸಾಹತುಶಾಹಿ ಇತಿಹಾಸದೊಂದಿಗೆ ಪುರಾತತ್ವ ಸಂಶೋಧನೆಯನ್ನು ಸೇರಿಸಿ ರಚಿಸಿರುವ ಈ ಕೃತಿ ಮರೆಯಲಾಗದ ಶ್ರೇಷ್ಠಮಟ್ಟದ್ದು’ ಎಂದು ಪ್ರಶಸ್ತಿ ಸಮಿತಿ ಲೇಖಕರನ್ನು ಪ್ರಶಂಸಿಸಿದೆ.