ರಕ್ತ ಹೆಪ್ಪುಗಟ್ಟಿಸುವ ಹಿಮದಲ್ಲೂ ಸೈನಿಕರ ಯೋಗಾಚರಣೆ

0
22

ಪ್ರಪಂಚದಾದ್ಯಂತ ಲಕ್ಷಾಂತರ ಮಂದಿಗೆ ಪ್ರೇರಣೆಯಾಗುವಂತೆ ಭಾರತೀಯ ಸಶಸ್ತ್ರ ಸೇನಾಪಡೆಯ ಸದಸ್ಯರು ರಕ್ತವನ್ನೇ ಹೆಪ್ಪುಗಟ್ಟಿಸುವಂತಹ ಹಿಮಗಡ್ಡೆಗಳ ನಡುವೆ ಯೋಗ ಮಾಡಿ 4 ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು.

ಲಡಾಖ್‌: ಪ್ರಪಂಚದಾದ್ಯಂತ ಲಕ್ಷಾಂತರ ಮಂದಿಗೆ ಪ್ರೇರಣೆಯಾಗುವಂತೆ ಭಾರತೀಯ ಸಶಸ್ತ್ರ ಸೇನಾಪಡೆಯ ಸದಸ್ಯರು ರಕ್ತವನ್ನೇ ಹೆಪ್ಪುಗಟ್ಟಿಸುವಂತಹ ಹಿಮಗಡ್ಡೆಗಳ ನಡುವೆ ಯೋಗ ಮಾಡಿ 4 ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು.

ಈ ಕುರಿತು ಆಯುಷ್‌ ಸಚಿವಾಲಯವು ಮರುಭೂಮಿ, ನದಿ ಮತ್ತು ನೌಕಾ ಹಡಗುಗಳಲ್ಲಿ ಸಶಸ್ತ್ರ ಪಡೆಗಳ ಸೈನಿಕರು ಯೋಗಾಸನ ಮಾಡುತ್ತಿರುವ ಪೋಟೊಗಳನ್ನು ಟ್ವೀಟ್‌ ಮಾಡಿದೆ.

ಇಂಡೋ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಹಿಮವೀರ್‌ ಪಡೆ ಸಮುದ್ರ ಮಟ್ಟದಿಂದ ಬರೋಬ್ಬರಿ 18,000 ಅಡಿ ಎತ್ತರವಿರುವ ಲಡಾಖ್‌ನ ತಂಪು ಭೂಮಿಯಲ್ಲಿ ಸೂರ್ಯ ನಮಸ್ಕಾರವನ್ನು ಮಾಡಿದ್ದಾರೆ.

ಇದರೊಂದಿಗೆ ಅರುಣಾಲ ಪ್ರದೇಶದ ಲೋಹಿತ್ ಪುರದಲ್ಲಿರುವ ಇಂಡೋ-ಟಿಬೆಟ್ ಗಡಿಯಲ್ಲಿನ ದಿಗರು ನದಿಯಲ್ಲಿ ಐಟಿಬಿಪಿಯ ಹಲವಾರು ಯೋಧರು ನದಿ ಯೋಗ ಪ್ರದರ್ಶನ ಮಾಡಿದರು.

ಈಶಾನ್ಯ ಭಾರತದ ನೌಕಾ ಪಡೆಯ ಐಎನ್ಎಸ್ ಜ್ಯೋತಿ ಸಿಬ್ಬಂದಿ ಕೂಡ ವಿಶಾಖಪಟ್ಟಣದ ಬಂಗಾಳ ಕೊಲ್ಲಿಯಲ್ಲಿ ಯೋಗ ದಿನಾಚರಣೆ ಅಂಗವಾಗಿ ಯೋಗ ಪ್ರದರ್ಶನ ನೀಡಿದರು. ಈಶಾನ್ಯ ನೌಕಾ ಪಡೆಯ ಜಲಾಂತರ್ಗಾಮಿ ಸಿಬ್ಬಂದಿಯು ಯೋಗಾಚರಣೆಯಲ್ಲಿ ಭಾಗವಹಿಸಿದ್ದರು