ಯುರೋಪ್‌ ಮತ್ತು ಜಪಾನ್‌ ಬಾಹ್ಯಾಕಾಶ ಸಂಸ್ಥೆಗಳಿಂದ ನೌಕೆ ಉಡಾವಣೆ.

0
588

ಸೂರ್ಯನಿಗೆ ಅತಿ ಸಮೀಪದ ಬುಧ ಗ್ರಹದ ಅಧ್ಯಯನಕ್ಕೆ ಯುರೋಪ್‌ ಮತ್ತು ಜಪಾನ್‌ ಬಾಹ್ಯಾಕಾಶ ಸಂಸ್ಥೆಗಳು ಮುಂದಾಗಿದ್ದು, ಈ ಸಂಬಂಧ ಶನಿವಾರ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿವೆ. ‘ಏರಿಯಾನ್‌ –5’ ಎಂಬ ರಾಕೆಟ್‌ ಈ ನೌಕೆಯನ್ನು ಉಡಾವಣೆ ಮಾಡಿದ್ದು, ಎರಡು ಶೋಧಕಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಮುಂದಿನ ಏಳು ವರ್ಷಗಳವರೆಗೆ ಈ ನೌಕೆಯು ಬುಧ ಗ್ರಹದ ಅಧ್ಯಯನ ನಡೆಸಲಿದೆ.

ಬಾಹ್ಯಾಕಾಶ ನೌಕೆಗೆ ಇಟಲಿಯ ವಿಜ್ಞಾನಿ ಗ್ಯುಸೆಪ್ಪೆ ಬೇಪಿ ಕೊಲಂಬೊ ಸ್ಮರಣಾರ್ಥ ‘ಬೇಪಿ’ ಎಂದು ಹೆಸರಿಡಲಾಗಿದೆ. 1.5 ಬಿಲಿಯನ್‌ ಡಾಲರ್‌ (₹10,800 ಕೋಟಿ) ವೆಚ್ಚದಲ್ಲಿ ಈ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.

ಬುಧ ಗ್ರಹದ ತೀವ್ರ ತಾಪಮಾನ, ಸೂರ್ಯನಿಂದ ಅದು ಪಡೆದುಕೊಳ್ಳುತ್ತಿರುವ ಶಕ್ತಿ, ಸೌರ ವಿಕಿರಣವನ್ನು ಅದು ತಡೆದುಕೊಳ್ಳುವ  ಕುರಿತು 2025ರ ಡಿಸೆಂಬರ್‌ವರೆಗೆ ಈ ನೌಕೆಯು ಅಧ್ಯಯನ ನಡೆಯಲಿದೆ. ಈಗ ಉಡಾವಣೆಯಾಗಿರುವ ಬೇಪಿ ಮತ್ತು ಮಿಯೊ ಎಂಬ ಎರಡು ಶೋಧಕಗಳು ಸ್ವತಂತ್ರವಾಗಿ ಬುಧದ ಮೇಲ್ಮೈ ಅಧ್ಯಯನ ನಡೆಸಲಿವೆ. 430 ಡಿಗ್ರಿ ತಾಪಮಾನ ತಡೆಯುವ ನಿಟ್ಟಿನಲ್ಲಿ
ಈ ಶೋಧಕಗಳನ್ನು ವಿನ್ಯಾಸಗೊಳಿಸಲಾಗಿದೆ.