ಯುಪಿಎಸ್‌ಸಿ ಫಲಿತಾಂಶ ಪ್ರಕಟ: ಕನಿಷ್ಕ್ ಟಾಪರ್, 23 ಕನ್ನಡಿಗರ ಆಯ್ಕೆ

0
676

ಯುಪಿಎಸ್​ಸಿ ಸಿವಿಲ್ ಸರ್ವೀಸ್ ಪರೀಕ್ಷೆಯ ಅಂತಿಮ ಫಲಿತಾಂಶದಲ್ಲಿ ಕನಿಷ್ಕ್ ಕಟಾರಿಯ ಮೊದಲ ರ್ಯಾಂಕ್ ಪಡೆದಿದ್ದು, ಅಕ್ಷತ್ ಜೈನ್ ಮತ್ತು ಜುನೇದ್ ಅಹ್ಮದ್ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ. ಸೃಷ್ಟಿ ಜಯಂತ್ ದೇಶ್​ವುುಖ್ ಮಹಿಳೆಯರಲ್ಲಿ ಮೊದಲ ಸ್ಥಾನದಲ್ಲಿದ್ದು, ಅಖಿಲ ಭಾರತ ಮಟ್ಟದಲ್ಲಿ 5ನೇ ರ್ಯಾಂಕ್ ಪಡೆದಿದ್ದಾರೆ.

ನವದೆಹಲಿ: ಯುಪಿಎಸ್​ಸಿ ಸಿವಿಲ್ ಸರ್ವೀಸ್ ಪರೀಕ್ಷೆಯ ಅಂತಿಮ ಫಲಿತಾಂಶದಲ್ಲಿ ಕನಿಷ್ಕ್ ಕಟಾರಿಯ ಮೊದಲ ರ್ಯಾಂಕ್ ಪಡೆದಿದ್ದು, ಅಕ್ಷತ್ ಜೈನ್ ಮತ್ತು ಜುನೇದ್ ಅಹ್ಮದ್ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ. ಸೃಷ್ಟಿ ಜಯಂತ್ ದೇಶ್​ವುುಖ್ ಮಹಿಳೆಯರಲ್ಲಿ ಮೊದಲ ಸ್ಥಾನದಲ್ಲಿದ್ದು, ಅಖಿಲ ಭಾರತ ಮಟ್ಟದಲ್ಲಿ 5ನೇ ರ್ಯಾಂಕ್ ಪಡೆದಿದ್ದಾರೆ.

ಯುಪಿಎಸ್​ಸಿ ಪರೀಕ್ಷೆಗಳ ಮೂಲಕ ಒಟ್ಟು 759 ಜನರನ್ನು (577 ಪುರುಷರು, 182 ಮಹಿಳೆಯರು) ಆಯ್ಕೆ ಮಾಡಲಾಗಿದ್ದು, ಇವರನ್ನು ಐಎಎಸ್, ಐಪಿಎಸ್, ಐಎಫ್​ಎಸ್ ಮುಂತಾದ ಸೇವೆಗಳಿಗೆ ನಿಯೋಜಿಸಲಾಗುತ್ತದೆ. ಮೊದಲ ರ್ಯಾಂಕ್ ಪಡೆದಿರುವ ಕನಿಷ್ಕ್ ಕಟಾರಿಯ ಎಸ್ಸಿ ಕೆಟಗರಿಗೆ ಸೇರಿದವರಾಗಿದ್ದು, ಐಐಟಿ ಬಾಂಬೆಯಿಂದ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ವಿಷಯದಲ್ಲಿ ಬಿಟೆಕ್ ಪದವಿ ಪಡೆದಿರುತ್ತಾರೆ.

ಟಾಪ್ 10 ರ‍್ಯಾಂಕ್‌

1. ಕನಿಷ್ಕ್ ಕಟಾರಿಯ
2. ಅಕ್ಷತ್ ಜೈನ್
3. ಜುನೇದ್ ಅಹ್ಮದ್
4. ಶ್ರೇಯಸ್ ಕುಮಾರ್
5. ಸೃಷ್ಟಿ ಜಯಂತ್ ದೇಶ್​ವುುಖ್
6. ಶುಭಂ ಗುಪ್ತ
7. ಕರ್ನಾಟಿ ವರುಣ್ ರೆಡ್ಡಿ
8. ವೈಶಾಲಿ ಸಿಂಗ್
9. ಗುಂಜನ್ ದ್ವಿವೇದಿ
10. ತನ್ಮಯ್ ವಸಿಷ್ಠ ಶರ್ಮ

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) 2019ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕ ರಾಜ್ಯದಿಂದ ಅಂದಾಜು 23 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ರ‍್ಯಾಂಕ್‌ ವಿಜೇತರು ಮತ್ತು ಪಡೆದ ರ‍್ಯಾಂಕ್‌ : ಎನ್. ಲಕ್ಷ್ಮಿ (45), ಎಸ್. ಆಕಾಶ್‌ (78), ಕೃತಿಕಾ(100), ಎಚ್‌.ಆರ್‌ ಕೌಶಿಕ್‌ (240), ಎಚ್‌.ಬಿ. ವಿವೇಕ್‌ (257),ನಿವೇದಿತಾ(303), ಗಿರೀಶ್‌ ಧರ್ಮರಾಜ್‌ ಕಲಗೊಂಡ(307), ಮಿರ್ಜಾ ಕದರ್‌ ಬೇಗ್‌ (336),ಯು.ಪಿ ತೇಜಸ್  (338), ಬಿ.ಜೆ. ಹರ್ಷವರ್ಧನ್ (352), ಪಕೀರೇಶ್ ಕಲ್ಲಪ್ಪ ಬಾದಾಮಿ (372). ಡಾ. ನಾಗಾರ್ಜುನ ಗೌಡ (418), ಬಿ.ವಿ ಅಶ್ವಿಜಾ (423), ಆರ್‌.ಮಂಜುನಾಥ್(495), ಎಸ್‌.ಬೃಂದಾ(496), ಹೇಮಂತ್‌(612), ಎಂ.ಕೆ ಶೃತಿ (637), ವೆಂಕಟರಾಮ್‌(694), ಸಂತೋಷ್‌ ಎಚ್‌(753), ಎಸ್‌. ಅಶೋಕ್ ಕುಮಾರ್‌ (711), ಎನ್‌. ರಾಘವೇಂದ್ರ(739) ಮತ್ತು ಶಶಿಕಿರಣ್‌(754) ರ್‍ಯಾಂಕ್‌ ಪಡೆದ ಅಭ್ಯರ್ಥಿಗಳು. ಈ 24ಮಂದಿಯಲ್ಲಿ 17 ಮಂದಿ ರ‍್ಯಾಂಕ್‌ ವಿಜೇತರು ಡಾ.ರಾಜ್‌ಕುಮಾರ್‌ ಐಎಎಸ್‌ ಅಕಾಡೆ ಮಿಯಲ್ಲಿ ತರಬೇತಿ ಪಡೆದಿದ್ದಾರೆ, ಸ್ಪರ್ಧಾಮಿತ್ರ ಅಕಾಡೆಮಿಯಿಂದ 6 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.

ಲಕ್ಷ್ಮಿ ಎನ್.: ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ 1 ವರ್ಷ ಐಟಿ ಕಂಪನಿಯಲ್ಲಿ ಕೆಲಸ ಮಾಡಿ ಎರಡನೇ ಬಾರಿಗೆ ಐಎಫ್​ಎಸ್ ಆಗಿದ್ದ ಲಕ್ಷ್ಮಿ, ಈ ವರ್ಷ 45ನೇ ರ್ಯಾಂಕ್ ಗಳಿಸುವ ಮೂಲಕ ಐಎಎಸ್ ಕನಸು ನನಸಾಗಿಸಿಕೊಂಡಿದ್ದಾರೆ. ಪ್ರತಿ ನಿತ್ಯ 8-9 ಗಂಟೆಗಳ ಕಾಲ ವ್ಯಾಸಂಗ ಮಾಡುತ್ತಿದ್ದ ಇವರು ಐಎಎಸ್ ಆಗಲೇಬೇಕು ಎಂಬ ಗುರಿಯಿಂದ ಮೂರನೇ ಪ್ರಯತ್ನ ಮಾಡಿ ಯಶಸ್ವಿ ಆಗಿದ್ದಾರೆ. ‘ನನ್ನ ಕನಸು ನನಸಾಗಿದೆ. ಇಂಜಿನಿಯರಿಂಗ್ ಕೌಶಲವನ್ನು ಬಳಸಿ ಇ-ಆಡಳಿತದಲ್ಲಿ ಮತ್ತಷ್ಟು ಬದಲಾವಣೆ ತರುವ ಕನಸಿದೆ’ ಎಂದು ಲಕ್ಷಿ್ಮ ಸಂತಸ ಹಂಚಿಕೊಂಡರು.

ಆಕಾಶ್: ವೃತ್ತಿಯಲ್ಲಿ ವೈದ್ಯರಾದ ಆಕಾಶ್ ಕೆಎಎಸ್ ಉತ್ತೀರ್ಣರಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ‘ಇದು ನನ್ನ 6ನೇ ಪ್ರಯತ್ನವಾಗಿತ್ತು. ಟಾಪ್ 10ರೊಳೆಗೆ ರ್ಯಾಂಕ್ ಬರುತ್ತದೆ ಎಂದುಕೊಂಡಿದ್ದೆ. ಆದರೂ ಈ ರ್ಯಾಂಕ್ ಬಂದಿರುವುದಕ್ಕೆ ಖುಷಿಯಾಗುತ್ತಿದೆ. ಪ್ರತಿನಿತ್ಯ 10-12 ಗಂಟೆ ವ್ಯಾಸಂಗ ಮಾಡಲೇಬೇಕಾಗುತ್ತದೆ. ವೃತ್ತಿಯಲ್ಲಿ ವೈದ್ಯನಾಗಿರುವುದರಿಂದ ಆರೋಗ್ಯದಲ್ಲಿ ಹೆಚ್ಚಿನ ಆಸಕ್ತಿ ಇದೆ. ನಾನು ವ್ಯಾಸಂಗ ಮಾಡಲು ಆರಂಭಿಸಿದ್ದೇ ಐಎಎಸ್ ಆಗಬೇಕು’ ಎಂದು ಆಕಾಶ್ ತಿಳಿಸಿದರು.

ಕೃತಿಕಾ: ಮೈಸೂರಿನಲ್ಲಿ ಇಂಜಿನಿಯರಿಂಗ್ ಮಾಡಿ ಐಆರ್​ಎಸ್ ಉತ್ತೀರ್ಣರಾಗಿ ತರಬೇತಿಯಲ್ಲಿರುವ ಕೃತಿಕಾ ಯುಪಿಎಸ್​ಸಿನಲ್ಲಿ 100ನೇ ರ್ಯಾಂಕ್ ಗಳಿಸಿದ್ದಾರೆ. ಯಾವುದೇ ಕೋಚಿಂಗ್ ಕ್ಲಾಸ್​ಗೆ ಹೋಗದೆ ಮನೆಯಲ್ಲೇ ವ್ಯಾಸಂಗ ಮಾಡಿ ಸತತ 6ನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ‘ನಾನು ಪ್ರತಿನಿತ್ಯ 7-8ಗಂಟೆ ಸಮಯ ವ್ಯಾಸಂಗ ಮಾಡುತ್ತಿದ್ದೆ. 5ನೇ ಪ್ರಯತ್ನದಲ್ಲಿ ಐಆರ್​ಎಸ್ ಆಗಿ ಉತ್ತೀರ್ಣಗೊಂಡೆ. ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ’ ಎಂದು ಕೃತಿಕಾ ಹೇಳಿದರು.

ಕೃಷಿಕನ ಮಗ ಗಿರೀಶ್​ಗೆ 307ನೇ ರ‍್ಯಾಂಕ್‌ ಗರಿ

ವಿಜಯಪುರ: ಅಪ್ಪಟ ಗ್ರಾಮೀಣ ಪ್ರತಿಭೆ ಕೃಷಿಕನ ಮಗನೊಬ್ಬ ಯುಪಿಎಸ್​ಸಿ ಪರೀಕ್ಷೆಯಲ್ಲಿ 307ನೇ ರ‍್ಯಾಂಕ್‌ ಪಡೆದು ಬರದ ನಾಡಿನ ಶೈಕ್ಷಣಿಕ ಬರ ನೀಗಿಸಿದ್ದಾನೆ.ತಾಲೂಕಿನ ನಾಗಠಾಣ ಗ್ರಾಮದ ಧರ್ಮರಾಯ ಕಲಗೊಂಡ ಅವರ ಪುತ್ರ ಗಿರೀಶ ಯುಪಿಎಸ್​ಸಿ ಪರೀಕ್ಷೆಯಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಸದರಿ ರ್ಯಾಂಕ್ ಪ್ರಕಾರ ಆದಾಯ ತೆರಿಗೆ ಇಲಾಖೆ ಇಲ್ಲವೆ ಕಸ್ಟಮ್್ಸ ಇಲಾಖೆ ಹುದ್ದೆ ಅಲಂಕರಿಸಬಹುದು.ಇನ್ನೂ ಎರಡು ಅವಕಾಶಗಳಿದ್ದು, ಐಎಎಸ್ ಇಲ್ಲವೆ ಐಪಿಎಸ್ ಮಾಡಿಯೇ ತೀರುವುದಾಗಿ ಗಿರೀಶ ಹೇಳಿದ್ದಾರೆ.

ನಮ್ಮ ಪಾಲಿಗೆ ನಿಜವಾದ ಯುಗಾದಿ ಹಬ್ಬ ಇದು. 3 ವರ್ಷ ಕಠಿಣ ಪರಿಶ್ರಮ ಹಾಕಿದ್ದ ಗಿರೀಶ ಒಳ್ಳೇ ಸುದ್ದಿ ಕೊಟ್ಟಿದ್ದಾನೆ. ಕ್ಯಾಂಪಸ್​ನಲ್ಲಿ ಸಿಕ್ಕ ಕೆಲಸ ಬಿಟ್ಟಾಗ ಆತಂಕ ವಾಗಿತ್ತು. ಕೃಷಿ ಕುಟುಂಬವಾದರೂ ನಮ್ಮದು ಶಿಕ್ಷಣ ಪ್ರೇಮಿ ಕುಟುಂಬ. ಅವನು ಇನ್ನುಳಿದವರಿಗೆ ಸ್ಪೂರ್ತಿಯಾಗಿದ್ದು ಸಂತಸ ತಂದಿದೆ.

| ಧರ್ಮರಾಯ ಕಲಗೊಂಡ ಗಿರೀಶನ ತಂದೆ

ಪ್ರಯತ್ನ ಫಲ ನೀಡಿದೆ

ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿರುವ ಆಕಾಶ್ 78ನೇ ರ‍್ಯಾಂಕ್‌ ಸಂಪಾದಿಸಿದ್ದಾರೆ. ‘ಇದು ನನ್ನ 6ನೇ ಪ್ರಯತ್ನವಾಗಿದೆ. 3ನೇ ಬಾರಿಗೆ ಸಂದರ್ಶನ ನೀಡಿದ್ದೆ. ಈ ವರ್ಷ ಪಾಸ್ ಆಗುತ್ತೇನೆ ಎಂಬ ಆತ್ಮವಿಶ್ವಾಸ ಇತ್ತು. ಟಾಪ್ 10ರೊಳಗೆ ಬರುತ್ತೇನೆ ಎಂದುಕೊಂಡಿದ್ದೆ. ಆದರೂ 78ನೇ ರ್ಯಾಂಕ್ ಬಂದಿರುವುದಕ್ಕೆ ಖುಷಿಯಾಗುತ್ತಿದೆ ಎಂದಿದ್ದಾರೆ.

ನನಸಾದ ಲಕ್ಮ್ಮೀ ಐಎಎಸ್ ಕನಸು

ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ ಒಂದು ವರ್ಷ ಐಟಿ ಕಂಪನಿಯಲ್ಲಿ ಕೆಲಸ ಮಾಡಿ ಎರಡನೇ ಬಾರಿಗೆ ಐಎಫ್​ಎಸ್ ಆಗಿದ್ದ ಲಕ್ಷಿ್ಮೕ ಈ ವರ್ಷ 45ನೇ ರ‍್ಯಾಂಕ್‌ ಗಳಿಸಿದ್ದಾರೆ. ಪ್ರತಿ ನಿತ್ಯ 8-9 ಗಂಟೆ ಓದುತ್ತಿದ್ದ ಇವರು ಮೂರನೇ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ನನ್ನ ಕನಸು ನನಸಾಗಿದೆ. ಇಂಜಿನಿಯರಿಂಗ್ ಕೌಶಲ ಉಪಯೋಗಿಸುವ ಮೂಲಕ ಇ-ಆಡಳಿತದಲ್ಲಿ ಮತ್ತಷ್ಟು ಬದಲಾವಣೆ ತರುವ ಕನಸು ಇದೆ. ಯಾವುದೇ ರಾಜ್ಯದಲ್ಲೂ ಕೆಲಸ ಮಾಡಲು ನಾನು ಸಿದ್ಧಳಿದ್ದೇನೆ ಎಂದು ಲಕ್ಷಿ್ಮೕ ಹೇಳಿದ್ದಾರೆ. ಇವರು ಐಎಫ್​ಎಸ್ ಆಗಿದ್ದಾಗ ವಿಜಯವಾಣಿ ಸಂದರ್ಶನ ಮಾಡಿತ್ತು. ಆಗ ಐಎಎಸ್ ಪಾಸಾಗುವ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು.

ಹುಬ್ಬಳ್ಳಿಯ ರಾಹುಲ್ ರಾಜ್ಯಕ್ಕೇ ಪ್ರಥಮ

 ಹುಬ್ಬಳ್ಳಿ ಹುಡುಗ ರಾಹುಲ್ ಸಂಕನೂರ ಪ್ರಸಕ್ತ ಸಾಲಿನ ಯುಪಿಎಸ್​ಸಿ ಪರೀಕ್ಷೆಯಲ್ಲಿ 17ನೇ ರ‍್ಯಾಂಕ್‌ ಗಳಿಸಿದ್ದು, ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ.

28ರ ವಯಸ್ಸಿನ ರಾಹುಲ್ 5ನೇ ಪ್ರಯತ್ನದಲ್ಲಿ ಯುಪಿಎಸ್​ಸಿ ಪಾಸಾಗಿದ್ದು, ಐಎಎಸ್ ಅಧಿಕಾರಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಆಶಯ ಹೊಂದಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರ ಕಿರಿಯ ಸಹೋದರ ಶರಣಪ್ಪ ಅವರ ಪುತ್ರ ರಾಹುಲ್. ಶರಣಪ್ಪ ಸಂಕನೂರ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ನಿವೃತ್ತಿ ಹೊಂದಿದ್ದಾರೆ. ತಾಯಿ ಸವಿತಾ ಗೃಹಿಣಿ. ಅಣ್ಣ ದೀಪಕ್ ಕೆಎಲ್​ಇ ಸಂಸ್ಥೆಯ ಕಾಲೇಜಿನಲ್ಲಿ ಗ್ರಂಥಪಾಲಕ. ಹುಕ್ಕೇರಿ ಮತ್ತು ಖಾನಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿರುವ ರಾಹುಲ್, ಮೈಸೂರಿನ ರಾಮಕೃಷ್ಣ ವಿದ್ಯಾಶ್ರಮದಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದಾರೆ. ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇ ಆಂಡ್ ಸಿ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ನಿತ್ಯ 10-12 ತಾಸು ಓದುತ್ತಿದ್ದೆ. ದಿನಪತ್ರಿಕೆ, ಮ್ಯಾಗಜಿನ್, ಬಜೆಟ್ ಪ್ರತಿಗಳ ಮೇಲೆ ಕಣ್ಣು ಹಾಯಿಸುತ್ತಿದ್ದೆ ಎಂದು ರಾಹುಲ್ ‘ವಿಜಯವಾಣಿ’ ಜತೆ ಸಂತಸ ಹಂಚಿಕೊಂಡರು.

12 ತಾಸು ಓದುತ್ತಿದ್ದೆ

ಪ್ರತಿನಿತ್ಯ 10-12 ತಾಸು ಓದುತ್ತಿದ್ದೆ. ದಿನಪತ್ರಿಕೆ, ಮ್ಯಾಗಜಿನ್, ಬಜೆಟ್ ಪ್ರತಿಗಳ ಮೇಲೆ ಕಣ್ಣು ಹಾಯಿಸುತ್ತಿದ್ದೆ.ಓದಬೇಕೆಂಬ ಕಾರಣದಿಂದ ಸ್ನೇಹಿತರ ಭೇಟಿ, ನಿದ್ರೆ ಮಾಡುವುದನ್ನು ತಪ್ಪಿಸುತ್ತಿರಲಿಲ್ಲ ಎಂದು ರಾಹುಲ್ ತಮ್ಮ ಹಿಂದಿನ ದಿನಗಳನ್ನು ವಿಜಯವಾಣಿ ಜತೆ ಹಂಚಿಕೊಂಡರು.

4 ಬಾರಿ ವಿಫಲನಾದಾಗ ತಂದೆ-ತಾಯಿ ಹತಾಶ ನಾಗದಂತೆ ಧೈರ್ಯ ತುಂಬಿದರು. ಯುಪಿಎಸ್​ಸಿ ಪಾಸಾಗದಿದ್ದರೂ ಪರವಾಗಿಲ್ಲ. ಇಂಜಿನಿಯರಿಂಗ್ ಕೆಲಸ ಇದ್ದೇ ಇದೆ. ಪ್ರಯತ್ನ ಬಿಡಬೇಡ ಎಂದು ಸ್ಪೂರ್ತಿ ತುಂಬಿದರು.

| ರಾಹುಲ್ ಸಂಕನೂರ 17ನೇ ರ‍್ಯಾಂಕ್‌ ವಿಜೇತ