ಯುನೆಸ್ಕೋ ಕ್ರಿಯಾಶೀಲ ನಗರಗಳ ಪಟ್ಟಿಗೆ ಚೆನ್ನೈ

0
27

ಯುನೆಸ್ಕೋದಿಂದ ತಯಾರಿಸಲಾದ 64 ಕ್ರಿಯಾಶೀಲ ನಗರಗಳ ಪಟ್ಟಿಯಲ್ಲಿ ಸಂಗೀತ ವಿಭಾಗದಲ್ಲಿ ಚೆನ್ನೈ ಸ್ಥಾನ ಗಿಟ್ಟಿಸಿಕೊಂಡಿದೆ. ಪ್ರಧಾನಿ ಮೋದಿ ” ಭಾರತಕ್ಕೆ ಇದು ಹೆಮ್ಮೆಯ ಕ್ಷಣ ” ಎಂದು ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಚೆನ್ನೈನ ಕೊಡುಗೆಯು ನಮ್ಮ ಶ್ರೀಮಂತ ಸಂಸ್ಕೃತಿಗೆ ನೀಡಿದ ಕೊಡುಗೆಯಾಗಿದ್ದು, ಇದೊಂದು ಹೆಮ್ಮೆಯ ಸಂಗತಿಯಾಗಿದೆ ಎಂದು ಪ್ರಧಾನಿ ಹೊಗಳಿದ್ದಾರೆ.

ಕಾರ್ನಾಟಿಕ್ ಶೈಲಿ ಸಂಗೀತಕ್ಕೆ ಚೆನ್ನೈ ನಗರದ ವಿದ್ವಾಂಸರು ನೀಡುತ್ತಾ ಬಂದಿರುವ ಕೊಡುಗೆಯನ್ನು ಪರಿಗಣಿಸಿ ಚೆನ್ನೈಗೆ ಈ ಮಾನ್ಯತೆ ಸಿಕ್ಕಿದೆ.

ಕಳೆದ ತಿಂಗಳಷ್ಟೇ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ವಿಭಾಗ ಕ್ರಿಯಾಶೀಲ ನಗರಗಳ ಪಟ್ಟಿಯನ್ನು ತಯಾರಿಸಿದ್ದು, ಅದರಲ್ಲಿನ 64 ನಗರಗಳು ಸ್ಥಾನ ಪಡೆದಿದ್ದವು. ಆ ಪೈಕಿ ವಿವಿಧ ಕ್ಷೇತ್ರಗಳಿಗೆ ನೀಡಲಾಗುತ್ತಿರುವ ಕೊಡುಗೆಯನ್ನು ಪರಿಗಣಿಸಿ ಚೆನ್ನೈಗೆ ಸಂಗೀತ ದಿಗ್ಗಜರ ನಗರ ಎಂದು ಶ್ಲಾಘಿಸಲಾಗಿದೆ.

ಅಲ್ಲದೆ ಕೇಂದ್ರ ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಶುಭ ಕೋರಿದ್ದಾರೆ.

ಇನ್ನು ಯುನೆಸ್ಕೋ ಪಟ್ಟಿ ಮಾಡಿರುವ 64 ನಗರಗಳ ಪಟ್ಟಿಯಲ್ಲಿ ಈಜಿಪ್ಟ್, ಸೌತ್ ಆಫ್ರಿಕಾ, ಇಂಗ್ಲೆಂಡ್ ಮತ್ತು ಇಟಲಿಯ ನಗರಗಳು ಇವೆ.