ಯುನಿಸೆಫ್‌ ಪ್ರಚಾರ ರಾಯಭಾರಿಯಾಗಿ ತ್ರಿಶಾ ಆಯ್ಕೆ

0
52

ಬಹುಭಾಷಾ ನಟಿ, ಕೃಷ್ಣ ಸುಂದರಿ ತ್ರಿಶಾ ಕೃಷ್ಣನ್‌ ಅವರು ಯುನಿಸೆಫ್‌ (UNICEF) ಪ್ರಚಾರ ರಾಯಭಾರಿಯಾಗಿ ಸೋಮವಾರ ಆಯ್ಕೆಯಾಗಿದ್ದು, ಯುನಿಸೆಫ್‌ ಪ್ರಚಾರ ರಾಯಭಾರಿಯಾದ ದಕ್ಷಿಣ ಭಾರತದ ಮೊದಲ ಸೆಲೆಬ್ರಿಟಿ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.

ದಕ್ಷಿಣ ಭಾರತದ ಖ್ಯಾತಿ ನಟ ತ್ರಿಶಾ ಅವರು ಮಕ್ಕಳ ಮೇಲಿನ ದೌರ್ಜನ್ಯ, ಮಕ್ಕಳಲ್ಲಿನ ಅಪೌಷ್ಟಿಕತೆ, ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿ ಸೇರಿದಂತೆ ಮಕ್ಕಳ ಹುಕ್ಕುಗಳ ರಕ್ಷಣೆಗಾಗಿ ಶ್ರಮಿಸಲಿದ್ದಾರೆ ಎಂದು ಯುನಿಸೆಫ್‌ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.
 
‘ಯುನಿಸೆಫ್’ ವಿಶ್ವಸಂಸ್ಥೆಯ ಒಂದು ಅಂಗವಾಗಿದ್ದು, ಅಭಿವೃದ್ಧಿಶೀಲ ದೇಶಗಳಲ್ಲಿನ ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಪ್ರತಿಷ್ಠಿತ ಯು.ಎನ್‌ ಸಂಸ್ಥೆಯ ಪ್ರಚಾರ ರಾಯಭಾರಿಯಾಗಿ ತ್ರಿಶಾ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯೇ ಸರಿ. ಯುನಿಸೆಫ್‌ ಸದಸ್ಯರು ಹೇಳುವಂತೆ  ಹಾಗೂ ಮಕ್ಕಳ ಮೇಲಿನ ದೌರ್ಜನ್ಯದಂತಹ ಜ್ವಲಂತ ಸಮಸ್ಯೆಗಳನ್ನು ಹೊಡೆದೋಡಿಸಲು ತ್ರಿಶಾ ಬೆಂಬಲಿಸಲಿದ್ದಾರೆ. ಪ್ರಮುಖವಾಗಿ ತಮಿಳುನಾಡು ಮತ್ತು ಕೇರಳ ರಾಜ್ಯದ ಮಕ್ಕಳ ಅಭಿವೃದ್ಧಿಗಾಗಿ ಸಹಕರಿಸಲಿದ್ದಾರೆ ತ್ರಿಶಾ.
 
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ತ್ರಿಶಾ, ‘ನನಗೆ ದೊರೆತ ಈ ಮಾನ್ಯತೆ ನಿಜಕ್ಕೂ ಖುಷಿ ತಂದಿದೆ. ತಮಿಳುನಾಡು ಹಾಗೂ ಕೇರಳದ ಮಕ್ಕಳ ಆರೋಗ್ಯ, ಶಿಕ್ಷಣ ಹಾಗೂ ರಕ್ಷಣೆಗೆ ಸದಾ ಬದ್ಧಳಾಗಿರುತ್ತೇನೆ. ಜ್ವಲಂತ ಸಮಸ್ಯೆಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ, ಆರೋಗ್ಯಯುತ ಸಮಾಜಕ್ಕಾಗಿ ಕೈ ಜೋಡಿಸುವೆ’ ಎಂದಿದ್ದಾರೆ.
 
ಇದೇ ವೇಳೆ 50 ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳ ಜತೆ ಸಂವಾದ ನಡೆಸಿದ ತ್ರಿಶಾ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಅಂಶಗಳನ್ನು ಚರ್ಚಿಸಿದರು. ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಯನ್ನು ಹೊಡೆದೋಡಿಸಲು ಶಿಕ್ಷಣ ಪರಿಣಾಮಕಾರಿ ಅಸ್ತ್ರ ಎಂದು ತ್ರಿಶಾ ಅಭಿಪ್ರಾಯಪಟ್ಟರು.