ಯುನಿಸೆಫ್‌ನ ಮೊದಲ ಯುವ ರಾಯಭಾರಿಯಾಗಿ ಹಿಮಾದಾಸ್ ನೇಮಕ

0
53

ಏಷ್ಯನ್ ಕ್ರೀಡಾ ಕೂಟದ ಚಿನ್ನದ ಪದಕ ವಿಜೇತೆ ಹಿಮಾದಾಸ್ ಅವರನ್ನು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್)ಯ ಭಾರತದ ಮೊದಲ ಯುವ ರಾಯಭಾರಿಯಾಗಿ ನೇಮಿಸಲಾಗಿದೆ.

ನವದೆಹಲಿ: ಏಷ್ಯನ್ ಕ್ರೀಡಾ ಕೂಟದ ಚಿನ್ನದ ಪದಕ ವಿಜೇತೆ ಹಿಮಾದಾಸ್ ಅವರನ್ನು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್)ಯ ಭಾರತದ ಮೊದಲ ಯುವ ರಾಯಭಾರಿಯಾಗಿ ನೇಮಿಸಲಾಗಿದೆ. 
 
ಯುನಿಸೆಫ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇದನ್ನು ಪ್ರಕಟಿಸಿದೆ.

 
‘ಹಿಮಾದಾಸ್‌ಗೆ ಅಭಿನಂದನೆಗಳು ವಿಶ್ವ ಮಕ್ಕಳ ದಿನದ ಭಾಗವಾಗಿ ಏಷ್ಯನ್ ಕ್ರೀಡಾಕೂಟದ ಪದಕ ವಿಜೇತೆ ಹಿಮಾದಾಸ್‌ ಭಾರತದ ಮೊದಲ ಯುವ ರಾಯಭಾರಿಯಾಗಿದ್ದಾರೆ.’ ಎಂದು ಯುನಿಸೆಫ್‌ ಟ್ವೀಟ್‌ ಮಾಡಿದೆ. 
 
ಹಿಮಾದಾಸ್‌ ಅವರು ರಾಯಭಾರಿ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ. ಈ ಮೂಲಕ ಮಕ್ಕಳಿಗೆ ಸ್ಫೂರ್ತಿಯಾಗಲಿದ್ದಾರೆ ಎಂದು ವಿಶ್ವಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ. 
 
‘ಯುನಿಸೆಫ್ ಭಾರತದ ಯುವ ರಾಯಭಾರಿಯಾಗಿ ಆಯ್ಕೆಯಾಗಿರುವುದಕ್ಕೆ ನನಗೆ ಹೆಮ್ಮೆಯೆನಿಸುತ್ತದೆ. ಮಕ್ಕಳು ತಮ್ಮ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಅವರನ್ನು ಉತ್ತೇಜಿಸಲು ಇದು ತಮಗೆ ಅತ್ಯುತ್ತಮ ಅವಕಾಶ ಎಂದು ನಾನು ಭಾವಿಸುತ್ತೇನೆ’ ಎಂದು ಹಿಮಾ ದಾಸ್ ಹೇಳಿದ್ದಾರೆ.
 
2018 ರ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳಾ 4 x 400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಹಿಮಾದಾಸ್‌ ಚಿನ್ನದ ಪದಕ ಗೆದ್ದಿದ್ದರು.
 
ಮಹಿಳೆಯರ 400 ಮೀ ಓಟದ ಸ್ಪರ್ಧೆಯಲ್ಲಿ 50.59 ಸೆಕೆಂಡುಗಳಲ್ಲಿ ಬೆಳ್ಳಿ ಪದಕವನ್ನೂ ಅವರು ತಮ್ಮದಾಗಿಸಿಕೊಂಡಿದ್ದರು.