ಯುಜಿಸಿ, ಎಐಸಿಟಿಇ ಹಾಗೂ ಐಸಿಎಆರ್‌ ವೇತನ ಶ್ರೇಣಿ ಪಡೆಯುತ್ತಿರುವ ಬೋಧಕ ಸಿಬ್ಬಂದಿಗೆ ತುಟ್ಟಿಭತ್ಯೆ ಹೆಚ್ಚಳ

0
312

2006ರ ಪರಿಷ್ಕೃತ ಯುಜಿಸಿ, ಎಐಸಿಟಿಇ ಹಾಗೂ ಐಸಿಎಆರ್‌ ವೇತನ ಶ್ರೇಣಿ ಪಡೆಯುತ್ತಿರುವ ಬೋಧಕ ಸಿಬ್ಬಂದಿ ಹಾಗೂ ಎನ್‌ಜೆಪಿಸಿ ವೇತನ ಶ್ರೇಣಿಯಲ್ಲಿರುವ ನ್ಯಾಯಾಂಗ ಅಧಿಕಾರಿಗಳಿಗೆ ಹಾಲಿ ಲಭ್ಯವಿರುವ ತುಟ್ಟಿ ಭತ್ಯೆ ದರವನ್ನು ಮೂಲ ವೇತನದ ಶೇ 142ರಿಂದ ಶೇ 148ಕ್ಕೆ ಹೆಚ್ಚಿಸಲಾಗಿದೆ. ಇದು 2018ರ ಜುಲೈ 1ರಿಂದಲೇ ಜಾರಿಗೆ ಬರಲಿದೆ.

ಬೆಂಗಳೂರು: 2006ರ ಪರಿಷ್ಕೃತ ಯುಜಿಸಿ, ಎಐಸಿಟಿಇ ಹಾಗೂ ಐಸಿಎಆರ್‌ ವೇತನ ಶ್ರೇಣಿ ಪಡೆಯುತ್ತಿರುವ ಬೋಧಕ ಸಿಬ್ಬಂದಿ ಹಾಗೂ ಎನ್‌ಜೆಪಿಸಿ ವೇತನ ಶ್ರೇಣಿಯಲ್ಲಿರುವ ನ್ಯಾಯಾಂಗ ಅಧಿಕಾರಿಗಳಿಗೆ ಹಾಲಿ ಲಭ್ಯವಿರುವ ತುಟ್ಟಿ ಭತ್ಯೆ ದರವನ್ನು ಮೂಲ ವೇತನದ ಶೇ 142ರಿಂದ ಶೇ 148ಕ್ಕೆ ಹೆಚ್ಚಿಸಲಾಗಿದೆ. ಇದು 2018ರ ಜುಲೈ 1ರಿಂದಲೇ ಜಾರಿಗೆ ಬರಲಿದೆ.

ಎನ್‌ಜೆಪಿಸಿ (ನಾನ್‌ ಗವರ್ನ್‌ಮೆಂಟ್‌ ಪೆನ್ಶನ್‌ ಸ್ಕೀಮ್‌) ನಿವೃತ್ತಿ ವೇತನದಾರರು/ ಕುಟುಂಬ ನಿವೃತ್ತಿ ವೇತನದಾರರಿಗೆ ಹಾಲಿ ಲಭ್ಯವಿರುವ ತುಟ್ಟಿ ಭತ್ಯೆ ದರವನ್ನು ಕೂಡ ಮೂಲ ನಿವೃತ್ತಿ ವೇತನ/ ಕುಟುಂಬ ನಿವೃತ್ತಿ ವೇತನದ ಶೇ.142ರಿಂದ 148ಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ ಮಂಜೂರಾಗಿರುವ ತುಟ್ಟಿಭತ್ಯೆಯನ್ನು ಮುಂದಿನ ಆದೇಶ ಹೊರಡಿಸುವವರಿಗೆ ನಗದು ರೂಪದಲ್ಲಿ ಪಾವತಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.