ಮ್ಯಾಡ್ರಿಡ್‌ ಟೆನಿಸ್ ಟೂರ್ನಿ : ಅಲೆಕ್ಸಾಂಡರ್‌ ಜ್ವೆರೆವ್‌ಗೆ ‍ಪ್ರಶಸ್ತಿ

0
26

ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಅವರು ಮ್ಯಾಡ್ರಿಡ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಮ್ಯಾಡ್ರಿಡ್‌ : ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಅವರು ಮ್ಯಾಡ್ರಿಡ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಜ್ವೆರೆವ್‌ 6–4, 6–4ರ ನೇರ ಸೆಟ್‌ಗಳಿಂದ ಡಾಮಿನಿಕ್‌ ಥೀಮ್‌ ಅವರನ್ನು ಸೋಲಿಸಿದರು.

ಕ್ವಾರ್ಟರ್‌ ‍ಫೈನಲ್‌ನಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ಗೆ ಆಘಾತ ನೀಡಿದ್ದ ಜ್ವೆರೆವ್, ಪ್ರಶಸ್ತಿ ಸುತ್ತಿನ ಹೋರಾಟದ ಮೊದಲ ಸೆಟ್‌ನಲ್ಲಿ ಮಿಂಚಿನ ಆಟ ಆಡಿ 2–0ರ ಮುನ್ನಡೆ ಗಳಿಸಿದರು. ನಂತರ ಛಲದಿಂದ ಹೋರಾಡಿದ ಥೀಮ್‌ ಹಿನ್ನಡೆಯನ್ನು 4–5ಕ್ಕೆ ತಗ್ಗಿಸಿಕೊಂಡರು. 10ನೇ ಗೇಮ್‌ನಲ್ಲಿ ಸರ್ವ್‌ ಕಾಪಾಡಿಕೊಂಡ ಜ್ವೆರೆವ್‌ ಸೆಟ್‌ ತಮ್ಮದಾಗಿಸಿಕೊಂಡರು.

ಎರಡನೇ ಸೆಟ್‌ನಲ್ಲೂ ಜ್ವೆರೆವ್‌ ಅಬ್ಬರಿಸಿದರು. ಮೊದಲ ಮೂರು ಗೇಮ್‌ಗಳಲ್ಲಿ ಪ್ರಾಬಲ್ಯ ಮೆರೆದ ಅವರು 3–0ರ ಮುನ್ನಡೆ ಗಳಿಸಿದರು. ನಂತರ ಥೀಮ್‌ ತಿರುಗೇಟು ನೀಡಿ ಹಿನ್ನಡೆ ತಗ್ಗಿಸಿಕೊಂಡರು. ಇದರಿಂದ ವಿಚಲಿತರಾಗದ ಜ್ವೆರೆವ್‌, ಕ್ರಾಸ್‌ಕೋರ್ಟ್‌ ಮತ್ತು ಬೇಸ್‌ಲೈನ್‌ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.