ಮ್ಯಾಕ್ರನ್‌ ಕಪ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ : ದೀಪಕ್‌ ಸಿಂಗ್‌ ಗೆ ಚಿನ್ನ

0
322

ಭಾರತದ ದೀಪಕ್‌ ಸಿಂಗ್‌, ಇರಾನ್‌ನ ಚಾಬಹ ರ್‌ನಲ್ಲಿ ನಡೆದ ಮ್ಯಾಕ್ರನ್‌ ಕಪ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ 49 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಒಂದು ಚಿನ್ನ ಹಾಗೂ ಐದು ಬೆಳ್ಳಿ ಪದಕಗಳು ಭಾರತದ ಪಾಲಾಗಿವೆ.

ನವದೆಹಲಿ (ಪಿಟಿಐ): ಭಾರತದ ದೀಪಕ್‌ ಸಿಂಗ್‌, ಇರಾನ್‌ನ ಚಾಬಹ ರ್‌ನಲ್ಲಿ ನಡೆದ ಮ್ಯಾಕ್ರನ್‌ ಕಪ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ 49 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಒಂದು ಚಿನ್ನ ಹಾಗೂ ಐದು ಬೆಳ್ಳಿ ಪದಕಗಳು ಭಾರತದ ಪಾಲಾಗಿವೆ. 

ಫೆಬ್ರುವರಿ 27 ರ ಬುಧವಾರ ತಡರಾತ್ರಿ ನಡೆದ ಫೈನಲ್‌ ಬೌಟ್‌ನಲ್ಲಿ ದೀಪಕ್‌  ಅವರು ಜಾಫರ್‌ ನಾಸೀರ್ ಅವರನ್ನು ಸೋಲಿಸಿ ದರು.  ಪಿ ಲಲಿತ ಪ್ರಸಾದ್‌ (52 ಕೆ.ಜಿ), ಮನೀಷ್‌ ಕೌಶಿಕ್‌ (60ಕೆ.ಜಿ), ದುರ್ಯೋಧನ್‌ ಸಿಂಗ್‌ ನೇಗಿ (69ಕೆ.ಜಿ), ಸಂಜೀತ್‌ (91 ಕೆ.ಜಿ) ಮತ್ತು ಸತೀಶ್‌ ಕುಮಾರ್‌ (91ಕೆ.ಜಿ+) ವಿಭಾ ಗದಲ್ಲಿ ಬೆಳ್ಳಿ ಪದಕ ಜಯಿಸಿದರು. 

ಮನೀಷ್‌, 52 ಕೆ.ಜಿ ವಿಭಾಗದಲ್ಲಿ ಡೇನಿಯಲ್‌ ಶಾ ಭಕ್ಷ್‌ ಎದುರು, ಸತೀಶ್‌ ಕುಮಾರ್‌ ಮೊಹಮ್ಮದ್‌ ಮ್ಲಿಯಾಸ್‌ ಎದುರು ಸೋತರು. ಭಾರತೀಯ ಓಪನ್‌ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಸಂಜೀತ್‌ 91 ಕೆ.ಜಿ ವಿಭಾಗದಲ್ಲಿ ಎಲ್ಡಿನ್‌ ಗೌಸೌನ್‌ ಎದುರು ಫೈನಲ್‌ ಬೌಟ್‌ನಲ್ಲಿ ಪರಾಭವಗೊಂಡರು. 52 ಕೆ.ಜಿ ವಿಭಾಗದಲ್ಲಿ ಒಮಿದ್‌ ಸಫಾ ಅಹ್ಮದಿಗೆ ಶರಣಾದ ಲಲಿತ ಪ್ರಸಾದ್‌ ಎರಡನೇ ಸ್ಥಾನ ಗಳಿಸಿದರು. ದುರ್ಯೋಧನ 69ಕೆ.ಜಿ ವಿಭಾಗದಲ್ಲಿ ಸಜ್ಜದ್‌ ಜದೆಹ್‌ ಕೆಜಿಮ್‌ ಎದುರು ಸೋತರು. ರೋಹಿತ್‌ ಟೊಕಾಸ್‌ (64 ಕೆ.ಜಿ), ಮಂಜೀತ್‌ ಸಿಂಗ್‌ ಪಂಗಲ್‌ (75ಕೆ.ಜಿ) ಕಂಚಿನ ಪದಕ ಪಡೆದರು.