ಮೌಂಟ್‌ ಎವರೆಸ್ಟ್‌ನಿಂದ 11 ಟನ್‌ ತ್ಯಾಜ್ಯ ಸಂಗ್ರಹ

0
21

ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನಲ್ಲಿ ಕೈಗೊಂಡಿರುವ ಎರಡು ತಿಂಗಳ ಸ್ವಚ್ಛತಾ ಕಾರ್ಯದಲ್ಲಿ 11 ಟನ್‌ ತ್ಯಾಜ್ಯ ಮತ್ತು ನಾಲ್ಕು ಶವಗಳನ್ನು ಹೊರತೆಗೆಯಲಾಗಿದೆ.

ಕಠ್ಮಂಡು (ಪಿಟಿಐ): ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನಲ್ಲಿ ಕೈಗೊಂಡಿರುವ ಎರಡು ತಿಂಗಳ ಸ್ವಚ್ಛತಾ ಕಾರ್ಯದಲ್ಲಿ 11 ಟನ್‌ ತ್ಯಾಜ್ಯ ಮತ್ತು ನಾಲ್ಕು ಶವಗಳನ್ನು ಹೊರತೆಗೆಯಲಾಗಿದೆ.

ನೇಪಾಳ ಸರ್ಕಾರ ಸ್ವಚ್ಛತಾ ಕಾರ್ಯ ಕೈಗೊಂಡಿತ್ತು.  ಶಿಖರ ಏರಲು ಬರುವ ಪರ್ವತಾರೋಹಿಗಳು ಹಿಂದಿರುಗುವಾಗ ಉಪಯೋಗಿಸಿದ ಆಮ್ಲಜನಕ ಸಿಲಿಂಡರ್‌ಗಳು, ಬ್ಯಾಟರಿಗಳು ಹರಿದ ಟೆಂಟ್​ಗಳು, ಹಗ್ಗ, ಮುರಿದ ಏಣಿಗಳು, ಕ್ಯಾನ್​ಗಳು ಮತ್ತು ಪ್ಲಾಸ್ಟಿಕ್​ ಕವರ್​ಗಳು ಈ ತ್ಯಾಜ್ಯದಲ್ಲಿ ಸೇರಿದ್ದವು.ಎವರೆಸ್ಟ್‌ ಶಿಬಿರದಿಂದ ಈ ಎಲ್ಲ ತ್ಯಾಜ್ಯವನ್ನು ಸೇನೆಯ ಹೆಲಿಕಾಪ್ಟರ್‌ಗಳಲ್ಲಿ ಕಠ್ಮಂಡುಗೆ ಕಳುಹಿಸಲಾಯಿತು.

ಕೆಲ ತ್ಯಾಜ್ಯವನ್ನು ಸರ್ಕಾರೇತರ ಸಂಸ್ಥೆ ‘ಬ್ಲೂ ವೇಸ್ಟ್‌ ಟು ವ್ಯಾಲ್ಯು’ಗೆ ನೀಡಲಾಯಿತು. ಈ ಸಂಸ್ಥೆಯು ತ್ಯಾಜ್ಯವನ್ನು ಮರುಬಳಕೆ ಮಾಡುತ್ತದೆ.
 
ಪರ್ವತದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ತ್ಯಾಜ್ಯ ಇದ್ದು, ಅದು ಹಿಮದಲ್ಲಿ ಮುಚ್ಚಿದೆ. ಬೇಸಿಗೆಯಲ್ಲಿ ಹಿಮ ಕರಗಿದಾಗ ಈ ತ್ಯಾಜ್ಯವನ್ನು ಸಂಗ್ರಹಿಸಬಹುದು ಎಂದು ನೇಪಾಳ ಪ್ರವಾಸೋದ್ಯಮ ಇಲಾಖೆಯ ಡಿಜಿ ದಂಡು ರಾಜ್​ ಘಿಮಿರೆ ತಿಳಿಸಿದ್ದಾರೆ.

ಏಪ್ರಿಲ್‌ 14ರಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು. ಮುಂದಿನ ವರ್ಷವೂ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ನೇಪಾಳ ಸೇನೆಯ ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯದ ನಿರ್ದೇಶಕ ಬಿಗ್ಯಾನ್‌ ದೇವ್‌ ಪಾಂಡೆ ತಿಳಿಸಿದ್ದಾರೆ.

# ಮೌಂಟ್ ಎವರೆಸ್ಟ್ ಶಿಖರವು ಒಟ್ಟು 8848 ಮೀಟರ್ ಎತ್ತರದಲ್ಲಿದೆ.

॑# ಕೆ2  ಶಿಖರವು ಒಟ್ಟು 8611 ಮೀಟರ್ ಎತ್ತರದಲ್ಲಿದೆ.

# ಕಾಂಚನಜುಂಗಾ ಒಟ್ಟು 8586 ಮೀಟರ್ ಎತ್ತರದಲ್ಲಿದೆ.