ಮೋದಿ ಇದುವರೆಗಿನ ಬೆಸ್ಟ್‌ ಪ್ರಧಾನಿ : ಇಂಡಿಯಾ ಟುಡೆ ಸಮೀಕ್ಷೆ

0
674

ನರೇಂದ್ರ ಮೋದಿ ಅವರು ಇದುವರೆಗೆ ಭಾರತ ಕಂಡ ಅತ್ಯುತ್ತಮ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಂಗ್ಲ ನಿಯತಕಾಲಿಕೆ ‘ಇಂಡಿಯಾ ಟುಡೆ’ ನಡೆಸಿದ ಸಮೀಕ್ಷೆಯಿಂದ ಈ ಸಂಗತಿ ಸ್ಪಷ್ಟಗೊಂಡಿದೆ. ಸಮೀಕ್ಷೆಯಲ್ಲಿ ಶೇಕಡ 26 ಮತಗಳೊಂದಿಗೆ ಹಾಲಿ ಪ್ರಧಾನಿ ಮೋದಿ ಅವರು ಬೆಸ್ಟ್‌ ಪಿಎಂ ಆಗಿ ಹೊರಹೊಮ್ಮಿದ್ದಾರೆ.

ಹೊಸದಿಲ್ಲಿ: ನರೇಂದ್ರ ಮೋದಿ  ಅವರು ಇದುವರೆಗೆ ಭಾರತ ಕಂಡ ಅತ್ಯುತ್ತಮ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಆಂಗ್ಲ ನಿಯತಕಾಲಿಕೆ ‘ಇಂಡಿಯಾ ಟುಡೆ’ ನಡೆಸಿದ ಸಮೀಕ್ಷೆಯಿಂದ ಈ ಸಂಗತಿ ಸ್ಪಷ್ಟಗೊಂಡಿದೆ. ಸಮೀಕ್ಷೆಯಲ್ಲಿ ಶೇಕಡ 26 ಮತಗಳೊಂದಿಗೆ ಹಾಲಿ ಪ್ರಧಾನಿ ಮೋದಿ ಅವರು ಬೆಸ್ಟ್‌ ಪಿಎಂ ಆಗಿ ಹೊರಹೊಮ್ಮಿದ್ದಾರೆ. 

12,100 ಭಾರತೀಯರು ಪಾಲ್ಗೊಂಡಿದ್ದ ಸಮೀಕ್ಷೆಯಲ್ಲಿ ಮೋದಿ ನಂತರದ ಸ್ಥಾನದಲ್ಲಿ ಶೇಕಡ 20 ಮತಗಳೊಂದಿಗೆ ಕಾಂಗ್ರೆಸ್‌ನ ಇಂದಿರಾ ಗಾಂಧಿ ಇದ್ದಾರೆ. ಇತ್ತೀಚೆಗಷ್ಟೇ ನಿಧನಹೊಂದಿದ್ದ ಬಿಜೆಪಿಯ ಅಟಲ್‌ ಬಿಹಾರಿ ವಾಜಪೇಯಿ ಅವರು ಶೇಕಡ 12ರಷ್ಟು ಮತಗಳೊಂದಿಗೆ ಮೂರನೇ ಸ್ಥಾನ ಸಿಕ್ಕಿದೆ. ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಶೇ. 10 ಮತಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. 

ಇನ್ನುಳಿದ ಸ್ಥಾನಗಳಲ್ಲಿ ಕ್ರಮವಾಗಿ ರಾಜೀವ್ ಗಾಂಧಿ (ಶೇಕಡ 7ರಷ್ಟು ಮತ), ಲಾಲ್‌ ಬಹಾದ್ದೂರ್‌ ಶಾಸ್ತ್ರಿ , ಮನಮೋಹನ್‌ ಸಿಂಗ್‌, (ತಲಾ ಶೇ. 6ರಷ್ಟು ಮತ), ಗುಲ್ಜಾರಿಲಾಲ್‌ ನಂದಾ, ಮೊರಾರ್ಜಿ ದೇಸಾಯಿ, ಚರಣ್‌ ಸಿಂಗ್‌ (ತಲಾ ಶೇ.2ರಷ್ಟು ಮತ), ವಿ.ಪಿ.ಸಿಂಗ್‌, ಚಂದ್ರಶೇಖರ್‌, ಪಿ.ವಿ.ನರಸಿಂಹರಾವ್‌, ಎಚ್‌.ಡಿ.ದೇವೇಗೌಡ ಅವರು (ತಲಾ ಶೇ. 1ರಷ್ಟು) ಇದ್ದಾರೆ. ಐ.ಕೆ.ಗುಜ್ರಾಲ್‌ ಅವರು ಪಡೆದ ಮತಗಳ ಬಗ್ಗೆ ಸಮೀಕ್ಷೆ ಸ್ಪಷ್ಟತೆಪಡಿಸಿಲ್ಲ.