ಮೋದಿನಾಮಿಕ್ಸ್ ಗಾಗಿ ಪ್ರಧಾನಿ ಮೋದಿಗೆ ಸಿಯೋಲ್ ಶಾಂತಿ ಪ್ರಶಸ್ತಿ!

0
883

ಭಾರತದ ಆರ್ಥಿಕತೆ ಬಲವರ್ಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆಯನ್ನು ಗುರುತಿಸಿ 2018 ನೇ ಸಾಲಿನ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕತೆ ಮೋದಿನಾಮಿಕ್ಸ್ ಎಂದೇ ಪ್ರಸಿದ್ಧಿ ಪಡೆದಿದ್ದು, ” ವಿಶ್ವದ ಶಾಂತಿ, ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸುವುದಕ್ಕೆ ನರೇಂದ್ರ ಮೋದಿ ಅವರ ಕೊಡುಗೆಗಳನ್ನು ಗುರುತಿಸಿ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಪ್ರಶಸ್ತಿ ಪತ್ರದಲ್ಲಿ ಉಲ್ಲೇಖಿಸಿದ್ದು ನೋಟು ಅಮಾನ್ಯೀಕರಣ, ಸರ್ಜಿಕಲ್ ಸ್ಟ್ರೈಕ್, ದೃಢ ಸ್ವಚ್ಛ ಆಡಳಿತ ಸೇರಿದಂತೆ ಮೋದಿ  ಸರ್ಕಾರದ ಅಭೂತಪೂರ್ವ ನಿರ್ಧಾರಗಳನ್ನು ಆಯ್ಕೆ ಸಮಿತಿ ಶ್ಲಾಘಿಸಿದೆ.  ಸಿಯೋಲ್ ಶಾಂತಿ ಪ್ರಶಸ್ತಿ ಸಾಂಸ್ಕೃತಿಕ ಪ್ರತಿಷ್ಠಾನ (ಸಿಯೋಲ್ ಪೀಸ್‌ ಪ್ರೈಜ್‌ ಕಲ್ಚರಲ್ ಫೌಂಡೇಶನ್‌) ಅಧ್ಯಕ್ಷ ಕ್ವೋನ್ ಇ-ಹ್ಯೋಕ್ ಈ ಸಂಬಂಧ ಅಧಿಕೃತ ಪ್ರಕಟಣೆ ನೀಡಿದ್ದಾರೆ.
 
ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಪಡೆಯುತ್ತಿರುವ 14 ನೆಯ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ. ಪ್ರಶಸ್ತಿ ದೊರೆತಿರುವುದರ ಬಗ್ಗೆ ಮೋದಿ ಕೃತಜ್ಞತೆ ವ್ಯಕ್ತಪಾಡಿಸಿದ್ದು, ಇದು ಭಾರತೀಯರಿಗೆ ಸಂದ ಗೌರವ, ರಿಪಬ್ಲಿಕ್ ಆಫ್ ಕೊರಿಯಾದೊಂದಿಗಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಳಿಸುವ ದೃಷ್ಟಿಯಿಂದ  ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.  ಉಭಯ ದೇಶಗಳ ನಾಯಕರಿಗೂ ಸೂಕ್ತವಾದ ಸಮಯದಲ್ಲಿ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಅವರಿಗೆ ಪ್ರದಾನ ಮಾಡಲಾಗುತ್ತದೆ ಎಂದು ಎಂಇಎ ಹೇಳಿದೆ.