ಮೋಟಾರು ವಾಹನ ಕಾಯ್ದೆಯಲ್ಲಿನ ದಂಡದ ಮೊತ್ತ ಇಳಿಸಿದ ಗುಜರಾತ್ ರಾಜ್ಯ ಸರ್ಕಾರ,

0
14

ಇತ್ತೀಚೆಗಷ್ಟೇ ಅಂಗೀಕರಿಸಿರುವ ನೂತನ ಮೋಟಾರು ವಾಹನ ಕಾಯ್ದೆಯಲ್ಲಿ ನಿಗಧಿಪಡಿಸಿರುವ ದಂಡದ ಮೊತ್ತವನ್ನು ಗುಜರಾತ್‌ ಸರ್ಕಾರವು ಕಡಿಮೆಗೊಳಿಸಿದೆ.

ಗಾಂಧಿನಗರ: ಇತ್ತೀಚೆಗಷ್ಟೇ ಅಂಗೀಕರಿಸಿರುವ ನೂತನ ಮೋಟಾರು ವಾಹನ ಕಾಯ್ದೆಯಲ್ಲಿ ನಿಗಧಿಪಡಿಸಿರುವ ದಂಡದ ಮೊತ್ತವನ್ನು ಗುಜರಾತ್‌ ಸರ್ಕಾರವು ಕಡಿಮೆಗೊಳಿಸಿದೆ.

ಜುಲೈನಲ್ಲಿ ಮೋಟಾರು ವಾಹನಗಳ (ತಿದ್ದುಪಡಿ) ಮಸೂದೆ 2019 ಅನ್ನು ಸಂಸತ್ತು ಅಂಗೀಕರಿಸಿತು ಮತ್ತು ಇದರಡಿಯಲ್ಲಿ ಸೆಪ್ಟೆಂಬರ್‌ 1ರಿಂದಲೇ ದಂಡಗಳು ಜಾರಿಗೆ ಬರಬೇಕಿತ್ತು ಆದರೆ ಕೆಲವು ರಾಜ್ಯಗಳು ನೂತನ ಕಾಯ್ದೆಯಡಿ ಹೆಚ್ಚಿರುವ ದಂಡದ ಬಗ್ಗೆ ತಿಳಿದುಕೊಳ್ಳಲು ಜನರಿಗೆ ಸಮಯ ಬೇಕು ಎಂದು ಕೆಲ ರಾಜ್ಯಗಳು ವಾದಿಸಿವೆ.

ಹೊಸ ಕಾಯಿದೆಯಲ್ಲಿ ವಿಧಿಸಲಾದ ದಂಡಗಳು ಗರಿಷ್ಠ ಸೂಚನೆಯಾಗಿದ್ದು, ಸುದೀರ್ಘ ಚರ್ಚೆಯ ನಂತರ ನಮ್ಮ ಸರ್ಕಾರ ಅವುಗಳನ್ನು ಕಡಿಮೆ ಮಾಡಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಗಾಂಧಿನಗರದಲ್ಲಿ ಘೋಷಿಸಿದ್ದಾರೆ.

ನೂತನ ಕಾಯ್ದೆಯ ಪ್ರಕಾರ ಹೆಲ್ಮೆಟ್‌ ಇಲ್ಲದೆ ಪ್ರಯಾಣಿಸಿದರೆ 1000 ರೂ. ದಂಡವಿದೆ. ಆದರೆ ಗುಜರಾತ್‌ ಸರ್ಕಾರ ಮಂಗಳವಾರ 500 ರೂ.ಗಳಿಗೆ ದಂಡವನ್ನು ಅಂತಿಮಗೊಳಿಸಿದೆ. ಸೀಟ್‌ ಬೆಲ್ಟ್‌ ಧರಿಸದೆ ಪ್ರಯಾಣಿಸಿದರೂ ಕೂಡ 500 ರೂ. ದಂಡ ನಿಗಧಿ ಮಾಡಿದೆ. ಡ್ರೈವಿಂಗ್‌ ಲೈಸೆನ್ಸ್‌ ಇಲ್ಲದಿದ್ದರೆ 5000 ರೂ. ಇರುವ ದಂಡವನ್ನು ದ್ವಿಚಕ್ರವಾಹನಗಳಿಗೆ 2 ಸಾವಿರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ 3000 ನಿಗಧಿ ಮಾಡಲಾಗಿದೆ.

ದಂಡವನ್ನು ಕಡಿಮೆ ಮಾಡುವ ಮೂಲಕ ಗುಜರಾತ್ ಸರ್ಕಾರವು ಸಂಚಾರ ಉಲ್ಲಂಘಿಸುವವರಿಗೆ ಮೃದು ಧೋರಣೆಯನ್ನು ತೋರಿಸುತ್ತಿಲ್ಲ. ಹೊಸ ಕಾಯ್ದೆ ಜಾರಿಗೆ ಬರುವ ಮೊದಲು ಈಗ ವಿಧಿಸಲಾದ ದಂಡಗಳು ಇನ್ನೂ 10 ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)