ಮೈಸೂರು, ಕಲಬುರ್ಗಿಗೆ ಸಿಎನ್‌ಜಿ

0
440

ಮೈಸೂರು ಹಾಗೂ ಕಲಬುರ್ಗಿ ಸೇರಿದಂತೆ ದೇಶದ 129 ಜಿಲ್ಲೆಗಳಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಪೂರೈಕೆ ಮಾಡುವ 10ನೇ ಹಂತದ ಕಾಮಗಾರಿ ಆರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 22 ರ ಗುರುವಾರ ಶಿಲಾನ್ಯಾಸ ನೆರವೇರಿಸಿದರು.

ನವದೆಹಲಿ (ಪಿಟಿಐ): ಮೈಸೂರು ಹಾಗೂ ಕಲಬುರ್ಗಿ ಸೇರಿದಂತೆ ದೇಶದ 129 ಜಿಲ್ಲೆಗಳಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಪೂರೈಕೆ ಮಾಡುವ 10ನೇ ಹಂತದ ಕಾಮಗಾರಿ ಆರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಶಿಲಾನ್ಯಾಸ ನೆರವೇರಿಸಿದರು.

3 ವರ್ಷದೊಳಗೆ ಕರ್ನಾಟಕ ಸೇರಿದಂತೆ 18 ರಾಜ್ಯಗಳಲ್ಲಿ ಅಡುಗೆ ಮನೆಗಳಿಗೆ ಪೈಪ್ ಮೂಲಕ ಗ್ಯಾಸ್ ಪೂರೈಕೆ ಮಾಡಲಾಗುತ್ತದೆ. 

10ನೇ ಹಂತ ಪೂರ್ಣಗೊಂಡ ಬಳಿಕ 400 ಜಿಲ್ಲೆಗಳಲ್ಲಿ ಇಂಧನವಾಗಿ ನೈಸರ್ಗಿಕ ಅನಿಲ ಬಳಸಿದಂತಾಗುತ್ತದೆ. ಇದು ದೇಶದ ಶೇ 70ಷ್ಟು ಜನರನ್ನು ಒಳಗೊಳ್ಳಲಿದೆ