ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ “ಪಾಲ್ ಅಲೆನ್”ವಿಧಿವಶ

0
458

ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಪಾಲ್ ಅಲೆನ್ (65) ನಿಧನರಾಗಿದ್ದಾರೆ. ಬಿಳಿ ರಕ್ತಕಣಗಳನ್ನು ಕೊಲ್ಲುವ ಕ್ಯಾನ್ಸರ್‌ಗೆ ಅಲೆನ್ ತುತ್ತಾಗಿದ್ದರು.

ಸ್ಯಾನ್‌ ಫ್ರಾನ್ಸಿಸ್ಕೊ (ಎಎಫ್‌ಪಿ): ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಪಾಲ್ ಅಲೆನ್ (65) ಅವರು 2018 ರ ಅಕ್ಟೋಬರ್ 15 ರಂದು ನಿಧನರಾಗಿದ್ದಾರೆ. ಬಿಳಿ ರಕ್ತಕಣಗಳನ್ನು ಕೊಲ್ಲುವ ಕ್ಯಾನ್ಸರ್‌ಗೆ ಅಲೆನ್ ತುತ್ತಾಗಿದ್ದರು. 

1970ರಲ್ಲಿ ಬಿಲ್‌ಗೇಟ್ಸ್‌ ಜತೆ ಸೇರಿ ಮೈಕ್ರೋಸಾಫ್ಟ್‌ ಸಂಸ್ಥೆ ಪ್ರಾರಂಭಿಸಿದ್ದರು. ಸಿಯಾಟಲ್ ಸೀ ಹಾಕ್ಸ್, ಪೋರ್ಟ್ ಲ್ಯಾಂಡ್ ಟ್ರಯಲ್ ಬ್ಲೇಜರ್ಸ್ ಕ್ರೀಡಾ ತಂಡದ ಮಾಲೀಕರಾಗಿದ್ದರು. ಉದ್ಯಮಿ, ಸಾಮಾಜಿಕ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿದ್ದರು. 

ಪಾಲ್‌ ಅಲೆನ್‌ ಬಂಡವಾಳ ಹೂಡಿರುವ ಸ್ಟ್ರಾಟೊಲಾಂಚ್‌ ಸಿಸ್ಟಂಸ್‌ ಎಂಬ ಸಂಸ್ಥೆ ವಿಶ್ವದ ಅತಿ ದೊಡ್ಡ ವಿಮಾನ ವಿನ್ಯಾಸಗೊಳಿಸಿದೆ. ಈ ವಿಮಾನ ರಾಕೆಟ್‌, ಬಾಹ್ಯಾಕಾಶ ನೌಕೆ ಉಡಾವಣೆ ಮಾಡಲಿದೆ.