ಮೇ 20ಕ್ಕೆ ಮತ್ತೊಮ್ಮೆ ನೀಟ್​ ಪರೀಕ್ಷೆ: ಕೇಂದ್ರ ಸಚಿವ ಜಾವ್ಡೇಕರ್​ ಘೋಷಣೆ

0
18

ನಾನಾ ಕಾರಣಗಳಿಂದಾಗಿ ಈ ಬಾರಿಯ ನೀಟ್​ ಪರೀಕ್ಷೆಯಿಂದ ವಂಚಿತರಾಗಿದ್ದ 600 ವಿದ್ಯಾರ್ಥಿಗಳಿಗಾಗಿ ಮೇ 20ರಂದು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್​) ಮತ್ತೊಮ್ಮೆ ಏರ್ಪಡಿಸಲು ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ.

ನವದೆಹಲಿ: ನಾನಾ ಕಾರಣಗಳಿಂದಾಗಿ ಈ ಬಾರಿಯ ನೀಟ್​ ಪರೀಕ್ಷೆಯಿಂದ ವಂಚಿತರಾಗಿದ್ದ 600 ವಿದ್ಯಾರ್ಥಿಗಳಿಗಾಗಿ ಮೇ 20ರಂದು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್​) ಮತ್ತೊಮ್ಮೆ ಏರ್ಪಡಿಸಲು ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ.

ಮಾನವಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್​ ಜಾವ್ಡೇಕರ್​ ಈ ನಿರ್ಧಾರ ಪ್ರಕಟಿಸಿದ್ದಾರೆ. ಈ ಹಿಂದೆ ಮೇ 5ರಂದು ನೀಟ್​ ಪರೀಕ್ಷೆ ಆಯೋಜಿಸಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ಪರೀಕ್ಷೆ ಬರೆಯಲು ರಾಜ್ಯದ ನಾನಾ ಭಾಗಗಳಿಂದ ಹಂಪಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ರೈಲು 8 ಗಂಟೆ ವಿಳಂಬವಾಗಿ ಬೆಂಗಳೂರು ತಲುಪಿದ್ದು ಇದಕ್ಕೆ ಕಾರಣ.

ಇದರ ಜತೆಗೆ ಬೆಂಗಳೂರಿನಲ್ಲಿ ದಿಢೀರ​ನೆ ಪರೀಕ್ಷಾ ಕೇಂದ್ರವನ್ನು ಬದಲಿಸಲಾಗಿತ್ತು. ಇದರಿಂದಾಗಿ ಪೂರ್ವ ನಿಗದಿಯಂತೆ ನಿರ್ದಿಷ್ಟ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದ ವಿದ್ಯಾರ್ಥಿಗಳು ಮತ್ತೊಂದು ಪರೀಕ್ಷಾ ಕೇಂದ್ರಕ್ಕೆ ತೆರಳಲು ಸಾಕಷ್ಟು ಪರದಾಡಬೇಕಾಗಿ ಬಂದಿತ್ತು. ಈ ಎರಡೂ ಕಾರಣಗಳಿಂದಾಗಿ ಅಂದಾಜು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್​ ಪರೀಕ್ಷೆಯಿಂದ ವಂಚಿತರಾಗಿದ್ದರು.