ಮೇಡಂ ಟುಸ್ಸಾಡ್ಸ್‌ ಮ್ಯೂಸಿಯನಲ್ಲಿ ಮಿಲ್ಖಾ ಸಿಂಗ್‌ ಮೇಣದ ಪ್ರತಿಮೆ

0
31

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದ ಅಥ್ಲೀಟ್‌ ಮಿಲ್ಖಾ ಸಿಂಗ್‌ ಅವರ ಮೇಣದ ಪ್ರತಿಮೆ ಇಲ್ಲಿನ ಮೇಡಂ ಟುಸ್ಸಾಡ್ಸ್‌ನಲ್ಲಿ ಅನಾವರಣಗೊಳ್ಳಲಿದೆ.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದ ಅಥ್ಲೀಟ್‌ ಮಿಲ್ಖಾ ಸಿಂಗ್‌ ಅವರ ಮೇಣದ ಪ್ರತಿಮೆ ಇಲ್ಲಿನ ಮೇಡಂ ಟುಸ್ಸಾಡ್ಸ್‌ನಲ್ಲಿ ಅನಾವರಣಗೊಳ್ಳಲಿದೆ. ಮಿಲ್ಖಾ ಸಿಂಗ್‌ 1958ರಲ್ಲಿ ಕಾರ್ಡೀಫ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. 1960ರಲ್ಲಿ ರೋಂನಲ್ಲಿ ನಡೆದ ಒಲಿಂಪಿಕ್‌ನಲ್ಲಿಯೂ ಅತ್ಯುತ್ತಮ ಸಾಮರ್ಥ್ಯ ತೋರಿ ನಾಲ್ಕನೇ ಸ್ಥಾನ ಪಡೆದಿದ್ದರು.

ಮಂಗಳವಾರ ಚಂಡೀಗಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮದೇ ಪ್ರತಿಮೆಯನ್ನು ಮಿಲ್ಖಾ ಸಿಂಗ್‌ ಅನಾವರಣಗೊಳಿಸಿದರು. ಮ್ಯೂಸಿಯಂನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಇನ್ನೂ 50 ಗಣ್ಯರ ಪ್ರತಿಮೆಗಳೂ ಇರಲಿವೆ.

ಮಿಲ್ಖಾ ಸಿಂಗ್‌ ಜೀವನ ಆಧಾರಿತ ಸಿನಿಮಾ “ಬಾಗ್ ಮಿಲ್ಕಾ ಬಾಗ್” ತುಂಬಾ ಹೆಸರು ಮಾಡಿತ್ತು. ಇಲ್ಲಿ ಫರಾನ್ ಅಕ್ತರ್ ಮಿಲ್ಕಾ ಸಿಂಗ್ ಆಗಿ ಅವರ ಜೀವನವನ್ನು ತೆರೆಯ ಮೇಲೆ ಅನಾವರಣಗೊಳಿಸಿದ್ದರು.

ಲಂಡನ್‌ ಮೂಲದ ಮೇಡಂ ಟುಸ್ಸಾಡ್ಸ್‌ ಮ್ಯೂಸಿಯಂನ ಒಟ್ಟು 23 ಶಾಖೆಗಳು ವಿಶ್ವದ ವಿವಿಧ ದೇಶಗಳಲ್ಲಿದ್ದು, ಇಲ್ಲಿನ ಕೊನಾಟ್‌ ಪ್ರದೇಶದಲ್ಲಿರುವ ರೀಗಲ್‌ ಸಿನಿಮಾ ಕಟ್ಟಡದಲ್ಲಿ ಡಿಸೆಂಬರ್‌ 01ರಂದು 24 ನೇ ಶಾಖೆಯ ಉದ್ಘಾಟನೆಯಾಗಲಿದೆ.