“ಮೆಹುಲ್‌ ಚೋಕ್ಸಿ” ನಾಗರಿಕ ಪೌರತ್ವ ರದ್ದು ಮಾಡುತ್ತೇವೆ: ಆಂಟಿಗುವಾ ಪ್ರಧಾನಿ

0
24

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆಭರಣ ವ್ಯಾಪಾರಿ ಮೆಹುಲ್ ಚೋಕ್ಸಿ ಪೌರತ್ವ ರದ್ದು ಮಾಡಲಾಗುವುದು ಎಂದು ಆಂಟಿಗುವಾ ಸರಕಾರ ತಿಳಿಸಿದೆ.

ಹೊಸದಿಲ್ಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆಭರಣ ವ್ಯಾಪಾರಿ ಮೆಹುಲ್ ಚೋಕ್ಸಿ ಪೌರತ್ವ ರದ್ದು ಮಾಡಲಾಗುವುದು ಎಂದು ಆಂಟಿಗುವಾ ಸರಕಾರ ತಿಳಿಸಿದೆ.

 

ಇದರೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ಸಿಕ್ಕಂತಾಗಿದೆ. 

ಪೌರತ್ವ ರದ್ದುಗೊಂಡರೆ ತಲೆಮರೆಸಿಕೊಂಡಿರುವ ವಿತ್ತ ಅಪರಾಧಿ ಮೆಹುಲ್‌ ಚೋಕ್ಸಿಯನ್ನು ಭಾರತಕ್ಕೆ ಕರೆ ತರುವುದು ಸುಲಭವಾಗಲಿದೆ. 

ಭಾರತಕ್ಕೆ ವಂಚನೆ ಮಾಡಿರುವ ಮೆಹುಲ್‌ ಚೋಕ್ಸಿಗೆ ನೀಡಿದ್ದ ನಾಗರಿಕ ಪೌರತ್ವ ರದ್ದುಪಡಿಸಲಾಗುವುದು ಎಂದು ಆಂಟಿಗುವಾ ಪ್ರಧಾನಿ ಗ್ಯಾಸ್ಟನ್‌ ಬ್ರೌನ್‌ ತಿಳಿಸಿದ್ದಾರೆ. 

ಆದರೆ ಆತನ ವಿರುದ್ಧ ಎಲ್ಲ ಆರೋಪಗಳು ಸಾಬೀತಾಗಬೇಕು. ಆರ್ಥಿಕ ಅಪರಾಧಿಗಳಿಗೆ ಆಂಟಿಗುವಾ ಎಂದೂ ಸುರಕ್ಷಿತ ತಾಣವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ಮೆಹುಲ್‌ ಚೋಕ್ಸಿಗೆ ವಾದ ಮಂಡಿಸಲು ಅವಕಾಶ ನೀಡಬೇಕು. ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಬ್ರೌನ್‌ ವಿವರಿಸಿದ್ದಾರೆ. 

ಕಾನೂನು ರೀತಿಯ ಕ್ರಮಗಳು ಪೂರ್ಣಗೊಂಡ ನಂತರ ಮೆಹುಲ್‌ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಬ್ರೌನ್‌ ತಿಳಿಸಿದ್ದಾರೆ.