ಮೆಟ್ರೊ: ಇ.ಶ್ರೀಧರನ್‌ ನೇತೃತ್ವದಲ್ಲಿ ಸಮಿತಿ

0
16

ದೇಶದ ಮೆಟ್ರೊ ರೈಲು ವ್ಯವಸ್ಥೆಗೆ ಶಿಸ್ತುಬದ್ಧ ಮಾನದಂಡ ರೂಪಿಸುವ ನಿಟ್ಟಿನಲ್ಲಿ ತಜ್ಞರ ಸಮಿತಿಯ ನೇಮಕಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ.

ನವದೆಹಲಿ: ದೇಶದ ಮೆಟ್ರೊ ರೈಲು ವ್ಯವಸ್ಥೆಗೆ ಶಿಸ್ತುಬದ್ಧ ಮಾನದಂಡ ರೂಪಿಸುವ ನಿಟ್ಟಿನಲ್ಲಿ ತಜ್ಞರ ಸಮಿತಿಯ ನೇಮಕಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ.

‘ಮೆಟ್ರೊ ಮ್ಯಾನ್‌’ ಎಂದು ಖ್ಯಾತರಾದ ಇ.ಶ್ರೀಧರನ್‌ ಈ ತಜ್ಞರ ಸಮಿತಿ ನೇತೃತ್ವ ವಹಿಸಿಕೊಳ್ಳಲಿದ್ದಾರೆ.

ಸಮಿತಿ ನೇಮಕ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೇಶದಾದ್ಯಂತ ಮೆಟ್ರೊ ರೈಲು ವ್ಯವಸ್ಥೆಗೆ ಏಕರೂಪ ಮತ್ತು ಶಿಸ್ತುಬದ್ಧ ಮಾನದಂಡ ರೂಪಿಸುವ ಹೊಣೆಯನ್ನು ಸಮಿತಿಯ ಹೆಗಲೇರಲಿದೆ.

ಹೊಸ ಮೆಟ್ರೊ ಮಾರ್ಗಕ್ಕೆ ಚಾಲನೆ: ದೆಹಲಿ ಮತ್ತು ಹರಿಯಾಣ ಮಧ್ಯೆ ಸಂಪರ್ಕ ಕಲ್ಪಿಸುವ ಮುಂಡ್ಕಾ–ಬಹದ್ದೂರ್‌ಗಡ (ಸಿಟಿ ಪಾರ್ಕ್‌) ಮೆಟ್ರೊ ಸೇವೆಗೆ ಪ್ರಧಾನಿ ಮೋದಿ ಜೂನ್ 24 ರ ಭಾನುವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ನಗರ ಸಾರಿಗೆ ವ್ಯವಸ್ಥೆಯನ್ನು ಹೆಚ್ಚು ಜನಸ್ನೇಹಿ ಮತ್ತು ಶಿಸ್ತುಬದ್ಧವಾಗಿ ರೂಪಿಸುವುದು ಸರ್ಕಾರದ ಆದ್ಯತೆ ಎಂದರು.

ಮಹತ್ವಾಕಾಂಕ್ಷೆಯ ‘ಭಾರತದಲ್ಲಿ ತಯಾರಿಸಿ’ ಯೋಜನೆ ಅಡಿ ಮೆಟ್ರೊ ರೈಲು ಬೋಗಿಗಳನ್ನು ಸ್ಥಳೀಯವಾಗಿ ತಯಾರಿಸಲಾಗುವುದು ಎಂದರು.
*
ದೇಶದ ಸಾರಿಗೆ ಸಂಪರ್ಕ ವ್ಯವಸ್ಥೆ ಮತ್ತು ಅಭಿವೃದ್ಧಿ ನಡುವೆ ನೇರವಾದ ಸಂಬಂಧವಿದೆ. ಎನ್‌ಡಿಎ ಸರ್ಕಾರ ಸಂಪರ್ಕ ವ್ಯವಸ್ಥೆ ಅಭಿವೃದ್ಧಿಯನ್ನು ಆದ್ಯತೆಯ ವಿಷಯವನ್ನಾಗಿ ಪರಿಗಣಿಸಿದೆ
ನರೇಂದ್ರ ಮೋದಿ, ಪ್ರಧಾನಿ