ಮುಘಲ್‍ಸರೈ ರೈಲು ನಿಲ್ದಾಣ ಈಗ “ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್”

0
27

ಉತ್ತರಪ್ರದೇಶದ ಮುಘಲ್‍ಸರೈ ರೈಲು ನಿಲ್ದಾಣದ ಹೆಸರನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಬದಲಿಸಲಾಗಿದೆ.

ಲಖನೌ: ಉತ್ತರಪ್ರದೇಶದ ಮುಘಲ್‍ಸರೈ ರೈಲು ನಿಲ್ದಾಣದ ಹೆಸರನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಬದಲಿಸಲಾಗಿದೆ. ಆದಿತ್ಯನಾಥ ಯೋಗಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ನಂತರ ಭಾರತೀಯ ಜನಸಂಘದ ನಾಯಕರಾಗಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರನ್ನು ಮುಘಲ್‍ಸರೈ ರೈಲ್ವೆ ನಿಲ್ದಾಣಕ್ಕಿಡಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು.

ಈ ನಿಟ್ಟಿನಲ್ಲಿ ಆದಿತ್ಯನಾಥ ಯೋಗಿ ಅವರ ನೇತೃತ್ವದಲ್ಲಿ ಸೇರಿದ ಸಚಿವ ಸಂಪುಟ ಸಭೆಯಲ್ಲಿ ರೈಲ್ವೆ ನಿಲ್ದಾಣದ ಹೆಸರು ಬದಲಾವಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು.

1968 ಫೆಬ್ರುವರಿ 11ರಂದು ದೀನ್ ದಯಾಳ್ ಉಪಾಧ್ಯಾಯ ಅವರು ನಿಗೂಢವಾಗಿ ಸಾವಿಗೀಡಾಗಿದ್ದು ಮುಘಲ್‍ಸರೈ ರೈಲ್ವೆ ನಿಲ್ದಾಣದಲ್ಲಾಗಿತ್ತು.
ಈ ಹಿಂದೆ ಏಪ್ರಿಲ್ ತಿಂಗಳಲ್ಲಿ ಆಗ್ರಾ ವಿಮಾನ ನಿಲ್ದಾಣಕ್ಕೂ ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರನ್ನಿಡಲಾಗಿತ್ತು.