ಮುಖ್ಯಮಂತ್ರಿ ಚಂದ್ರು, ಚಂಪಾ ಸೇರಿ 70 ಮಂದಿಗೆ ಕೆಂಪೇಗೌಡ ಪ್ರಶಸ್ತಿ

0
36

2019ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ ಪ್ರಕಟವಾಗಿದ್ದು ಮುಖ್ಯಮಂತ್ರಿ ಚಂದ್ರು, ಚಂದ್ರಶೇಖರ ಪಾಟೀಲ, ಶಿವರಾಮಯ್ಯ ಸೇರಿ 70 ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರು:2019ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ ಪ್ರಕಟವಾಗಿದ್ದು ಮುಖ್ಯಮಂತ್ರಿ ಚಂದ್ರು, ಚಂದ್ರಶೇಖರ ಪಾಟೀಲ, ಶಿವರಾಮಯ್ಯ ಸೇರಿ 70 ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸೆಪ್ಟೆಂಬರ್ 4ರಂದು ಡಾ. .ರಾಜ್​ಕುಮಾರ್ ಗಾಜಿನ ಮನೆಯಲ್ಲಿ ನಡೆಯುವ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಫಾಲಿಕೆ (ಬಿಬಿಎಂಪಿ) ಪ್ರತಿವರ್ಷ ನಿಡುವ ಈ ಪ್ರಶಸ್ತಿ ಆಯ್ಕೆಗೆ ಈ ಬಾರಿ ನಿವೃತ್ತ ನ್ಯಾಯಮೂರ್ತಿ ಸದಾಶಿವ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.
 
ಕೆಂಪೇಗೌಡ ಪ್ರಶಸ್ತಿಯು 25 ಸಾವಿರ ನಗದು ಹಾಗೂ ಕೆಂಪೇಗೌಡರ ಸ್ಮರಣಿಕೆಯನ್ನು ಹೊಂದಿರುತ್ತದೆ. 
 
ಪ್ರಶಸ್ತಿ ಪಡೆದ ಪ್ರಮುಖರ ಪಟ್ಟಿ ಹೀಗಿದೆ-
 
# ಮುಖ್ಯಮಂತ್ರಿ ಚಂದ್ರು (ಸಿನಿಮಾ)
# ಚಂಪಾ (ಸಾಹಿತ್ಯ)
# ಪ್ರೊ. ಶಿವರಾಮಯ್ಯ (ಸಾಹಿತ್ಯ)
# ಅಬ್ದುಲ್ ಬಷೀರ್ (ಸಾಹಿತ್ಯ)
# ಪ್ರೊ.ರವಿವರ್ಮ ಕುಮಾರ್ (ಕಾನೂನು)
# ಬಿಂದುರಾಣಿ (ಕ್ರೀಡೆ)
# ಶಾಂತರಾಮಮಮೂರ್ತಿ(ಕ್ರೀಡೆ)
# ಸೈಯ್ಯದ್ ಇಬಯಾಯತುಲ್ಲಾ (ಅಂಗವಿಕಲ ಕ್ರೀಡಾಪಟು)
# ಕುಮಾರಿ ಪ್ರತ್ಯಕ್ಷಾ- (ಬಾಲ ಪ್ರತಿಭೆ)
# ಪ್ರೊ. ನಾಗೇಶ್ ಬೆಟ್ಟಕೋಟೆ (ರಂಗಭೂಮಿ)
# ಮಂಜುಳಾ ಗುರುರಾಜ್ (ಸಂಗೀತ)
# ಡಿ.ರೂಪಾ (ಸರ್ಕಾರಿ ಸೇವೆ)
# ಅನುಚೇತ್​ ಮತ್ತು ತಂಡ (ಗೌರಿ ಹತ್ಯೆ ಪ್ರಕರಣ ಬೇಧಿಸಿದ್ದಕ್ಕೆ)