ಮುಕೇಶ್‌ ಅಂಬಾನಿಗೆ ದಿನಕ್ಕೆ 300 ಕೋಟಿ ರೂ.ಆದಾಯ!

0
758

ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು ಕಳೆದ ಒಂದು ವರ್ಷದಿಂದೀಚೆಗೆ ಪ್ರತಿ ದಿನ 300 ಕೋಟಿ ರೂ. ಆದಾಯ ಗಳಿಸಿದ್ದಾರೆ! ಬಾರ್‌ಕ್ಲೇಸ್‌ ಹುರಾನ್‌ ಇಂಡಿಯಾ ಎಂಬ ಸಂಸ್ಥೆ ಸಿದ್ಧಪಡಿಸಿದ ಸಿರಿವಂತರ ಪಟ್ಟಿ ಈ ವಿಷಯ ತಿಳಿಸಿದೆ.

ಹೊಸದಿಲ್ಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು ಕಳೆದ ಒಂದು ವರ್ಷದಿಂದೀಚೆಗೆ ಪ್ರತಿ ದಿನ 300 ಕೋಟಿ ರೂ. ಆದಾಯ ಗಳಿಸಿದ್ದಾರೆ! ಬಾರ್‌ಕ್ಲೇಸ್‌ ಹುರಾನ್‌ ಇಂಡಿಯಾ ಎಂಬ ಸಂಸ್ಥೆ ಸಿದ್ಧಪಡಿಸಿದ ಸಿರಿವಂತರ ಪಟ್ಟಿ ಈ ವಿಷಯ ತಿಳಿಸಿದೆ. 

ಒಟ್ಟು 3,71,000 ಕೋಟಿ ರೂ. ಸಂಪತ್ತಿನೊಂದಿಗೆ ಮುಕೇಶ್‌ ಅಂಬಾನಿಯವರು ಬಾರ್‌ಕ್ಲೇಸ್‌ ಪಟ್ಟಿಯಲ್ಲಿ ಸತತ 7 ವರ್ಷಗಳಿಂದ ಭಾರತದ ನಂ.1 ಶ್ರೀಮಂತರೆನಿಸಿದ್ದಾರೆ. ಎಸ್‌ಪಿ ಹಿಂದೂಜಾ ಮತ್ತು ಕುಟುಂಬ (1,59,000 ಕೋಟಿ ರೂ.), ಎಲ್‌ಎನ್‌ ಮಿತ್ತಲ್‌ ಮತ್ತು ಕುಟುಂಬ (1,14,500 ಕೋಟಿ ರೂ.) ಮತ್ತು ಅಜೀಂ ಪ್ರೇಮ್‌ಜಿ (96,100 ಕೋಟಿ ರೂ.) ನಂತರದ ಮೂರು ಸ್ಥಾನಗಳಲ್ಲಿದ್ದಾರೆ. 

ಈ ಮೂವರ ಆದಾಯ ಒಟ್ಟುಗೂಡಿಸಿದರೂ, ಅದಕ್ಕಿಂತ ಹೆಚ್ಚು ಮುಕೇಶ್‌ ಅಂಬಾನಿಯವರದ್ದಾಗುತ್ತದೆ. 1,000 ಕೋಟಿ ರೂ.ಗೂ ಅಧಿಕ ನಿವ್ವಳ ಸಂಪತ್ತು ಇರುವ ಭಾರತೀಯರ ಪಟ್ಟಿಯನ್ನು ಸಂಸ್ಥೆ ಸಿದ್ಧಪಡಿಸಿದೆ. ಸನ್‌ ಫಾರ್ಮಾದ ದಿಲೀಪ್‌ ಸಾಂಘ್ವಿ 5ನೇ (89,700 ಕೋಟಿ ರೂ.) ಸ್ಥಾನದಲ್ಲಿದ್ದಾರೆ. 

ಉದಯ್‌ ಕೋಟಕ್‌ (78,600 ಕೋಟಿ ರೂ.), ಸೈರಸ್‌ ಎಸ್‌ ಪೂನಾವಾಲಾ (73,000 ಕೋಟಿ ರೂ.), ಗೌತಮ್‌ ಅದಾನಿ (71,200 ಕೋಟಿ ರೂ.), ಸೈರಸ್‌ ಪಲ್ಲೋನ್‌ಜಿ ಮಿಸ್ತ್ರಿ (69,400 ಕೋಟಿ ರೂ.), ಶಾಪೋರ್‌ ಪಲ್ಲೋನ್‌ಜಿ ಮಿಸ್ತ್ರಿ (69,400 ಕೋಟಿ ರೂ.) ಟಾಪ್‌ 10ನಲ್ಲಿದ್ದಾರೆ.