ಮುಂಬೈ ಶಾಲೆಗೆ ಅಬ್ದುಲ್ ಕಲಾಂ ಹೆಸರು

0
30

ಘಟ್ಕೋಪಾರ್ ಮೂಲದ ಎನ್ಎಂ ಡಬ್ಲ್ಯೂಎಸ್ ಶಾಲೆಗೆ ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಮ್ ಮೆಮೊರಿಯಲ್ ಹೈ ಸ್ಕೂಲ್ ಎಂದು ಮರು ನಾಮಕರಣ ಮಾಡಲಾಗಿದೆ

ಅ.15, 2017 ಅಬ್ದುಲ್ ಕಲಾಂ ಅವರ 87 ನೇ ಜನ್ಮದಿನವಾಗಿದ್ದು, 87 ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶಾಲೆಗೆ ಮರುನಾಮಕರಣ ಮಾಡಲಾಗಿದೆ. ನಾರ್ತ್ ಮುಂಬೈ ವೆಲ್ಫೇರ್ 3,250 ವಿದ್ಯಾರ್ಥಿಗಳಿರುವ ಶಾಲೆಯನ್ನು ಸೌತ್ ಇಂಡಿಯನ್ ಎಜುಕೇಷನ್ ಸೊಸೈಟಿ(ಎಸ್ಐಇಎಸ್) ನೊಂದಿಗೆ ವಿಲೀನಗೊಳಿಸಿದ್ದು, ಎಸ್ಐಇಎಸ್ ಶಾಲೆಯಲ್ಲಿ 25,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 
 
ಶಾಲೆಯ ಮುಂಭಾಗದಲ್ಲಿ ಅಬ್ದುಲ್ ಕಲಾಂ ಅವರ ಆಳೆತ್ತರದ ಪುತ್ಥಳಿಯನ್ನು ಅನಾವರಣ ಮಾಡುವ ಮೂಲಕ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೆ ಗೌರವ ಸಲ್ಲಿಸಿದ್ದಾರೆ.