ಮುಂದಿನ ವರ್ಷದಿಂದ(2019) ಐಸಿಎಸ್‌ಇಗೂ ಪೂರಕ ಪರೀಕ್ಷೆ

0
769

ಐಸಿಎಸ್‌ಇ ಶಾಲೆಯ ಹತ್ತು ಮತ್ತು ಹನ್ನೆರಡನೇ ತರಗತಿ ವಿದ್ಯಾರ್ಥಿಗಳಿಗೆ 2019ರಿಂದ ಪೂರಕ ಪರೀಕ್ಷೆಯ ಅವಕಾಶ ದೊರೆಯಲಿದೆ.

ನವದೆಹಲಿ: ಐಸಿಎಸ್‌ಇ ಶಾಲೆಯ ಹತ್ತು ಮತ್ತು ಹನ್ನೆರಡನೇ ತರಗತಿ ವಿದ್ಯಾರ್ಥಿಗಳಿಗೆ 2019ರಿಂದ ಪೂರಕ ಪರೀಕ್ಷೆಯ ಅವಕಾಶ ದೊರೆಯಲಿದೆ.

ಇದುವರೆಗೆ ಈ ವ್ಯವಸ್ಥೆ ಇರಲಿಲ್ಲ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಮುಂದಿನ ವರ್ಷ ಮಂಡಳಿಯ ಪರೀಕ್ಷೆಗೆ ಹೊಸದಾಗಿಯೇ ಹಾಜರಾಗಬೇಕಾಗಿತ್ತು.

ಅಭ್ಯರ್ಥಿಗಳಿಗೆ ಕೇವಲ ಒಂದು ವಿಷಯಕ್ಕೆ ಮಾತ್ರ ಹಾಜರಾಗಲು ಅವಕಾಶವಿದೆ. ಪ್ರತಿ ವರ್ಷ ಜುಲೈ ತಿಂಗಳಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುವುದು ಮತ್ತು ಆಗಸ್ಟ್‌ ತಿಂಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.