ಮೀಟರ್ ಬಡ್ಡಿ ಬಿಡಿ: ಬಡ್ಡಿ ರಹಿತ ಸಾಲ ಪಡಿಯುವ : ‘ಬಡವರ ಬಂಧು’ ಯೋಜನೆಗೆ ಚಾಲನೆ

0
400

ಪ್ರತಿನಿತ್ಯ ಮೀಟರ್‌ ಬಡ್ಡಿ ಪಡೆದು ಸಾಲದ ಸುಳಿಯಲ್ಲಿ ಸಿಲುಕುವ ಬೀದಿಬದಿ ವ್ಯಾಪಾರಿಗಳಿಗೆ ಇನ್ನು ಮುಂದೆ ರಾಜ್ಯ ಸರ್ಕಾರವೇ ಬಡ್ಡಿ ರಹಿತ ಸಾಲ ನೀಡಲಿದೆ.ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಮಹತ್ವಾಕಾಂಕ್ಷೆಯ ‘ಬಡವರ ಬಂಧು’ ಯೋಜನೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನವೆಂಬರ್ 22 ರ ಗುರುವಾರ ಚಾಲನೆ ನೀಡಿದರು.

ಬೆಂಗಳೂರು: ಪ್ರತಿನಿತ್ಯ ಮೀಟರ್‌ ಬಡ್ಡಿ ಪಡೆದು ಸಾಲದ ಸುಳಿಯಲ್ಲಿ ಸಿಲುಕುವ ಬೀದಿಬದಿ ವ್ಯಾಪಾರಿಗಳಿಗೆ ಇನ್ನು ಮುಂದೆ ರಾಜ್ಯ ಸರ್ಕಾರವೇ ಬಡ್ಡಿ ರಹಿತ ಸಾಲ ನೀಡಲಿದೆ.

ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಮಹತ್ವಾಕಾಂಕ್ಷೆಯ ‘ಬಡವರ ಬಂಧು’ ಯೋಜನೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನವೆಂಬರ್ 22 ರ ಗುರುವಾರ ಚಾಲನೆ ನೀಡಿದರು.

ಜಿಲ್ಲಾ ಸಹಕಾರ ಕೇಂದ್ರ(ಡಿಸಿಸಿ) ಬ್ಯಾಂಕುಗಳು ಮೂಲಕ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ. ಕನಿಷ್ಠ  2 ಸಾವಿರದಿಂದ  10 ಸಾವಿರದ ವರೆಗೆ ಮೂರು ತಿಂಗಳ ಅವಧಿಗೆ ಸಾಲ ನೀಡಲಾಗುತ್ತದೆ.

ಸಾಲಗಾರರು ಬಯಸಿದರೆ ಪಿಗ್ಮಿ (ಪ್ರತಿನಿತ್ಯ ನಿರ್ದಿಷ್ಟ ಮೊತ್ತ ಪಾವತಿ) ಮೂಲಕವೂ ಸಾಲದ ಮೊತ್ತವನ್ನು ಬ್ಯಾಂಕುಗಳು ಹಿಂಪಡೆಯಬಹುದು. ಸಮರ್ಪಕವಾಗಿ ಸಾಲ ಮರುಪಾವತಿಸಿದ ಫಲಾನುಭವಿಗೆ ಸಾಲ ನವೀಕರಿಸಲು ಮತ್ತು ಶೇ 10ರಷ್ಟು ಮಿತಿ ಹೆಚ್ಚಿಸಲು (15ಸಾವಿರದವರೆಗೆ) ಅವಕಾಶ ನೀಡಲಾಗಿದೆ.

ಪ್ರತಿ ತ್ರೈಮಾಸಿಕ ಹೊರಬಾಕಿ ಆಧರಿಸಿ, ಬಡ್ಡಿ ಸಹಾಯಧನವನ್ನು ಕ್ಲೇಮ್‌ ಮಾಡಿದರೆ, ಶೇ 10ರ ಬಡ್ಡಿ
ದರದಲ್ಲಿ ಮೊತ್ತವನ್ನು ಬ್ಯಾಂಕುಗಳಿಗೆ ಸರ್ಕಾರ ಭರಿಸಲಿದೆ.