ಮಿಥೇನ್‌ನಿಂದ ಜಲಜನಕ ಇಂಧನ

0
26

ಮಿಥೇನ್‌ ಹಾಗೂ ವಿದ್ಯುತ್ತನ್ನು ಒಂದೇ ಹಂತದಲ್ಲಿ ಜಲಜನಕ ಇಂಧನವಾಗಿ (ಹೈಡ್ರೊಜನ್‌) ಮಾರ್ಪಡಿಸುವ ವಿಧಾನವನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಈಗಿರುವ ಇಂಧನಕ್ಕೆ ಹೋಲಿಸಿದರೆ, ಅತ್ಯಂತ ಶುದ್ಧ ಹಾಗೂ ಕಡಿಮೆ ವೆಚ್ಚದ್ದಾಗಿದೆ.

ಜಲಜನಕ ಅತ್ಯುತ್ತಮ ಇಂಧನವಾಗಿದ್ದು, ಶಕ್ತಿಯುತ ಗರಿಷ್ಠ ಸಾಂದ್ರತೆ,  ಹಸಿರುಮನೆ ಅನಿಲ ಹೊರಸೂಸುವ ಪ್ರಮಾಣವು ಶೂನ್ಯ ಮಟ್ಟದಲ್ಲಿದೆ. ಹೀಗಾಗಿ ಕೈಗಾರಿಕೆಗಳಲ್ಲಿ ಇದು ಹೆಚ್ಚು ಬಳಕೆಯಲ್ಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ವಾತಾವರಣದಲ್ಲಿರುವ ಆಮ್ಲಜನಕವನ್ನು ಬಳಸಿಕೊಂಡು ಇಂಧನವನ್ನು ಉತ್ಪಾದಿಸುತ್ತದೆ. ಇದರಿಂದ ಸಾರಿಗೆ ಕ್ಷೇತ್ರದಲ್ಲಿ ಬಳಕೆಯಲ್ಲಿರುವ ಈಗಿರುವ ಇಂಧನಕ್ಕೆ ಪರ್ಯಾಯವಾಗಿ ಬಳಸಬಹುದಾಗಿದೆ.

ಸ್ಪೇನ್‌ನ ವೆಲೇನ್ಸಿಯಾ ಪಾಲಿಟೆಕ್ನಿಕ್‌ ವಿವಿಯ ಸಂಶೋಧಕರು ನಡೆಸಿದ ಸಂಶೋಧನೆ ಪ್ರಕಾರ ಜಲಜನಕ ಇಂಧನ ಕೋಶಗಳು, ವಾಹನಗಳು ಹಾಗೂ ರಾಸಾಯನಿಕ ಕೈಗಾರಿಕೆಗಳಿಗೂ ಹೊಂದುತ್ತವೆ. ಹೊಸ ಮಾದರಿಯಲ್ಲಿ ಕೇವಲ ಒಂದು ಹಂತದಲ್ಲಿ, ಯಾವುದೇ ನಷ್ಟವಿಲ್ಲದೇ ಮಿಥೇನ್‌ನನ್ನು ಜಲಜನಕ ಇಂಧನ ಮಾರ್ಪಡಿಸಲು ಅವಕಾಶವಿದೆ.

‘ಹೈಬ್ರೀಡ್‌ ಹಾಗೂ ಇಲೆಕ್ಟ್ರಿಕ್‌ ಕಾರುಗಳ ಅಭಿವೃದ್ಧಿ ಹಾಗೂ ಮಾರುಕಟ್ಟೆ ಪ್ರವೇಶದಿಂದ ಸಾರಿಗೆ ಕ್ಷೇತ್ರದಲ್ಲಿ ಹೊರಹೊಮ್ಮುತ್ತಿರುವ ಇಂಗಾಲದ ಡೈ ಆಕ್ಸೈಡ್‌ (ಸಿಒ2) ಪ್ರಮಾಣವು ಮುಂಬರುವ ವರ್ಷದಲ್ಲಿ ಕಡಿಮೆಯಾಗಲಿದೆ’ ಎಂದು ಸುಪಿರೀಯರ್‌ ಕೌನ್ಸಿಲ್‌ ಆಫ್‌ ಸೈಟಿಂಫಿಕ್‌ ಇನ್‌ವೆಸ್ಟಿಗೇಷನ್ಸ್‌ (ಸಿಎಸ್‌ಐಸಿ) ಸಂಶೋಧಕ ಪ್ರಾಧ್ಯಾಪಕ ಜೋಸ್‌ ಮ್ಯಾನ್ಯುವೆಲ್‌ ಸೆರ್ರಾ ತಿಳಿಸಿದರು.

‘ಪೆಟ್ರೋಲ್‌ ಸ್ಟೇಷನ್‌, ಜನವಸತಿ ಕೇಂದ್ರ, ಗ್ಯಾರೇಜ್‌ಗಳಲ್ಲಿ ಇದನ್ನು ಉತ್ಪಾದಿಸಲು ಅವಕಾಶವಿದೆ’ ಎಂದು ಅವರು ತಿಳಿಸಿದರು.