ಮಿಜೋರಾಂ ರಾಜ್ಯಪಾಲ “ಕುಮ್ಮನಂ ರಾಜಶೇಖರನ್‌” ರಾಜೀನಾಮೆ

0
507

ಮಿಜೋರಾಂ ರಾಜ್ಯಪಾಲರ ಹುದ್ದೆಗೆ ಕುಮ್ಮನಂ ರಾಜಶೇಖರನ್‌ ರಾಜೀನಾಮೆ ನೀಡಿದ್ದಾರೆ.

ನವದೆಹಲಿ (ಪಿಟಿಐ): ಮಿಜೋರಾಂ ರಾಜ್ಯಪಾಲರ ಹುದ್ದೆಗೆ ಕುಮ್ಮನಂ ರಾಜಶೇಖರನ್‌ ರಾಜೀನಾಮೆ ನೀಡಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ರಾಜಶೇಖರನ್‌ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ವಕ್ತಾರರು ಮಾರ್ಚ್ 8 ಶುಕ್ರವಾರ ತಿಳಿಸಿದ್ದಾರೆ.  ಸದ್ಯ ಅಸ್ಸಾಂನ ರಾಜ್ಯಪಾಲ ಜಗದೀಶ್‌ ಮುಖಿ ಅವರಿಗೆ ಹೆಚ್ಚುವರಿಯಾಗಿ ಮಿಜೋರಾಂ ರಾಜ್ಯಪಾಲರ ಹೊಣೆ ವಹಿಸಲಾಗಿದೆ. 

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಸಾಧ್ಯತೆ: ಕುಮ್ಮನಂ ರಾಜಶೇಖರನ್‌ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಕೇರಳ ಘಟಕದ ಮಾಜಿ ಅಧ್ಯಕ್ಷರು ಆಗಿರುವ ರಾಜಶೇಖರನ್‌, ಕಾಂಗ್ರೆಸ್‌ ಸಂಸದ ಶಶಿ ತರೂರ್‌ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.