ಮಾಲ್ಡೀವ್ಸ್​ಗೆ 1.4 ಬಿಲಿಯನ್ ಡಾಲರ್​ ನೆರವು ಘೋಷಿಸಿದ ಪ್ರಧಾನಿ ಮೋದಿ

0
589

ದ್ವೀಪರಾಷ್ಟ್ರ ಮಾಲ್ಡೀವ್ಸ್​ಗೆ 1.4 ಬಿಲಿಯನ್ ಡಾಲರ್​​ ಆರ್ಥಿಕ ನೆರವು ನೀಡುವುದಾಗಿ 2018 ಡಿಸೆಂಬರ್ 17 ರ ಸೋಮವಾರ ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಮಾಲ್ಡೀವ್ಸ್​: ದ್ವೀಪರಾಷ್ಟ್ರ ಮಾಲ್ಡೀವ್ಸ್​ಗೆ 1.4 ಬಿಲಿಯನ್ ಡಾಲರ್​​ ಆರ್ಥಿಕ ನೆರವು ನೀಡುವುದಾಗಿ  2018 ಡಿಸೆಂಬರ್ 17 ರ ಸೋಮವಾರ ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಇಂದು( ಡಿಸೆಂಬರ್ 17 ) ದೆಹಲಿಯಲ್ಲಿ ಮಾಲ್ಡೀವ್ಸ್​ ಅಧ್ಯಕ್ಷ ಇಬ್ರಾಹಿಂ ಮಹಮ್ಮದ್​ ಸೋಲಿಹ್​ ಅವರೊಂದಿಗೆ ಸಭೆ ನಡೆಸಿದ ಬಳಿಕ ಆರ್ಥಿಕ ನೆರವು ಘೋಷಣೆ ಮಾಡಿದರು. ಅದಾದ ಬಳಿಕ ಎರಡೂ ದೇಶಗಳ ನಾಯಕರು, ವೀಸಾ ಸೌಕರ್ಯ ಸೇರಿ ಒಟ್ಟು ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದರು.
ನವೆಂಬರ್​ನಲ್ಲಿ ಅಧ್ಯಕ್ಷ ಇಬ್ರಾಹಿಂ ಮಹಮ್ಮದ್​ ಸೋಲಿಹ್​ ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದರು. ಈಗ ಸೋಲಿಹ್​ ಅವರು ಮೂರು ದಿನಗಳ ದೆಹಲಿ ಪ್ರವಾಸ ಹಮ್ಮಿಕೊಂಡಿದ್ದು ಭಾನುವಾರವೇ ಭಾರತಕ್ಕೆ ಆಗಮಿಸಿದ್ದಾರೆ.

ಮಾಲ್ಡೀವ್ಸ್​ ಅಧ್ಯಕ್ಷ ಹಾಗೂ ಪ್ರಧಾನಿ ಮೋದಿಯವರ ಎರಡನೇ ಭೇಟಿ ಇದಾಗಿದ್ದು ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಅದಾದ ಬಳಿಕ ಮಾತನಾಡಿದ ಮೋದಿ, ಭಾರತ ಮಾಲ್ಡೀವ್ಸ್​ ಜತೆ ಉತ್ತಮ ವ್ಯಾಪಾರ ಸಂಬಂಧ ಹೊಂದಲು ಬಯಸುತ್ತದೆ ಎಂದು ಹೇಳಿರುವ ಪ್ರಧಾನಿ ಮೋದಿ, ಭಾರತದ ಕಂಪನಿಗಳಿಗೆ ದ್ವೀಪರಾಷ್ಟ್ರದಲ್ಲಿ ಉದ್ಯಮ ಪ್ರಾರಂಭಕ್ಕೆ ಹಲವು ಅವಕಾಶಗಳಿವೆ. ಒಂದು ಆತ್ಮೀಯ ವಾತಾವರಣದಲ್ಲಿ ನಾವಿಬ್ಬರೂ ಮಾತುಕತೆ ನಡೆಸಿದ್ದೇವೆ. ನಮ್ಮ ಎರಡೂ ದೇಶಗಳ ಸಂಬಂಧವನ್ನು ಬಲಗೊಳಿಸಲು ಶಪಥ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಈ ಹಿಂದಿನ ಅಧ್ಯಕ್ಷ ಯಮೀನ್​ ಅವರು ಸಹಿ ಹಾಕಿದ್ದ ಚೀನಾ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದದಿಂದ ನಿಧಾನವಾಗಿ ಸೋಲಿಹ್​ ನೇತೃತ್ವದ ಹೊಸ ಸರ್ಕಾರ ಹೊರಬರಲಿದೆ ಎಂದು ಮಾಜಿ ಅಧ್ಯಕ್ಷ ಮೊಹಮ್ಮದ್​ ನಶೀದ್(2002-2008) ಹೇಳಿದ್ದರು.

ಹಿಂದು ಮಹಾಸಾಗರದಲ್ಲಿ ಚೀನಾದ ಚಟುವಟಿಕೆಗಳನ್ನು ಉಲ್ಲೇಖಿಸಿ ಮೋದಿಯವರು, ಹಿಂದು ಮಹಾಸಾಗರ ಪ್ರದೇಶದಲ್ಲಿ ಸಹಕಾರ ಹೆಚ್ಚಿಸಲು ಎರಡೂ ದೇಶಗಳವರು ಒಟ್ಟಾಗಿ ಕೆಲಸ ಮಾಡುತ್ತೇವೆ. ನಮ್ಮ ದೇಶಗಳಿಗೆ ಹಾನಿಯಾಗುವ ಯಾವುದೇ ಚಟುವಟಿಕೆಗಳು ಅಲ್ಲಿ ನಡೆಯಲು ಬಿಡುವುದಿಲ್ಲ ಎಂದು ಹೇಳಿದ್ದರು. ಅದಾದ ಬಳಿಕ ಮೊಹಮ್ಮದ್​ ನಶೀದ್​ ಈ ಹೇಳಿಕೆ ನೀಡಿದ್ದರು.

ಅಲ್ಲದೆ, ಸೋಲಿಹ್​ ಕೂಡ ಹಿಂದು ಮಹಾಸಾಗರ ಪ್ರದೇಶದಲ್ಲಿ ಗಸ್ತು ಮತ್ತು ವೈಮಾನಿಕ ಕಣ್ಗಾವಲು ಮೂಲಕ ಹೆಚ್ಚಿನ ಭದ್ರತೆ ಒದಗಿಸಲು ಎರಡೂ ದೇಶಗಳು ಒಟ್ಟಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದಿದ್ದರು. (ಏಜೆನ್ಸೀಸ್​)