ಮಾರ್ಚ್‌ 10ಕ್ಕೆ ಪೋಲಿಯೊ ಲಸಿಕೆ

0
520

ರಾಷ್ಟ್ರೀಯ ಪೋಲಿಯೊ ಲಿಸಿಕಾ ಕಾರ್ಯಕ್ರಮ ಮಾರ್ಚ್‌ 10ರಂದು ನಡೆಯಲಿದೆ.

ಬೆಂಗಳೂರು: ರಾಷ್ಟ್ರೀಯ ಪೋಲಿಯೊ ಲಿಸಿಕಾ ಕಾರ್ಯಕ್ರಮ ಮಾರ್ಚ್‌ 10ರಂದು ನಡೆಯಲಿದೆ. 

ಲಸಿಕೆ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಫೆಬ್ರವರಿ 3ರಂದು ನಡೆಯಬೇಕಿದ್ದ   ಪಲ್ಸ್‌ ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ದೇಶಾದ್ಯಂತ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.

ದೇಶದಲ್ಲಿ ಸುಮಾರು 17 ಕೋಟಿ ಮಕ್ಕಳಿಗೆ ಏಕಕಾಲಕ್ಕೆ ಲಸಿಕೆ ಹಾಕುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ನಿಗದಿ ಪಡಿಸಿದಷ್ಟು ರಾಜ್ಯಗಳಿಗೆ ಲಸಿಕೆ ಪೂರೈಸದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಕಾರ್ಯಕ್ರಮ ಮುಂದೂಡಲಾಗಿತ್ತು. ಇದೀಗ ಮಾ. 10ಕ್ಕೆ ನಿಗದಿ ಪಡಿಸಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.