ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರ‍್ಯಾಂಕಿಂಗ್‌ : ಐಐಎಸ್ಸಿ ಅತ್ಯುತ್ತಮ ವಿಶ್ವವಿದ್ಯಾಲಯ

0
391

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ದೇಶದಲ್ಲಿಯೇ ಅತ್ಯುತ್ತಮ ವಿಶ್ವವಿದ್ಯಾಲಯ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮದ್ರಾಸ್‌ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆ ಎನ್ನುವ ಕೀರ್ತಿಗೆ ಪಾತ್ರವಾಗಿವೆ.

ನವದೆಹಲಿ (ಪಿಟಿಐ): ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ದೇಶದಲ್ಲಿಯೇ ಅತ್ಯುತ್ತಮ ವಿಶ್ವವಿದ್ಯಾಲಯ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮದ್ರಾಸ್‌ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆ ಎನ್ನುವ ಕೀರ್ತಿಗೆ ಪಾತ್ರವಾಗಿವೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಉನ್ನತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ರ‍್ಯಾಂಕಿಂಗ್‌ ಪಟ್ಟಿಯನ್ನು ಏಪ್ರೀಲ್ 8 ರ ಸೋಮವಾರ ರಾಷ್ಟ್ರಪತಿ ರಾಮನಾಥ ಕೋವಿಮದ್‌ ಬಿಡುಗಡೆ ಮಾಡಿದರು.

ಒಟ್ಟಾರೆ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಐಐಟಿ ಮದ್ರಾಸ್‌ ಅಗ್ರಸ್ಥಾನದಲ್ಲಿದೆ. ಐಐಎಸ್ಸಿ ಬೆಂಗಳೂರು ಮತ್ತು ಐಐಟಿ ದೆಹಲಿ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಮೊದಲ ಹತ್ತು ಸಂಸ್ಥೆಗಳಲ್ಲಿ ಏಳು ಐಐಟಿಗಳು ಸೇರಿವೆ.

ರಾಷ್ಟ್ರೀಯ ಸಾಂಸ್ಥಿಕ ಸ್ಥಾನಮಾನ ನಿರ್ಧರಿಸುವ ಸಂಸ್ಥೆಯ (ಎನ್‌ಐಆರ್‌ಎಫ್‌) ವರದಿ ಆಧಾರದ ಮೇಲೆ ಈ ಪಟ್ಟಿ ಸಿದ್ಧಪಡಿಸಲಾಗಿದೆ.

ವಿಶ್ವವಿದ್ಯಾಲಯ ವಿಭಾಗದಲ್ಲಿ ಐಐಎಸ್ಸಿ ಮೊದಲ ಸ್ಥಾನದಲ್ಲಿದ್ದರೆ, ಜವಾಹರಲಾಲ್‌ ನೆಹರೂ ವಿಶ್ವಿದ್ಯಾಲಯ (ಜೆಎನ್‌ಯು) ಮತ್ತು ಬನಾರಸ್‌ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು) ನಂತರದ ಸ್ಥಾನಗಳಲ್ಲಿವೆ.

 ಕಾಲೇಜು ವಿಭಾಗದಲ್ಲಿ ದೆಹಲಿಯ ಮಿರಂದಾ ಹೌಸ್‌ ಉನ್ನತ ಸ್ಥಾನ ಪಡೆದಿದೆ. ಎರಡು ಮತ್ತು ಮೂರನೇ ಸ್ಥಾನವನ್ನು ಚೆನ್ನೈನ ಹಿಂದೂ ಕಾಲೇಜ್‌ ಮತ್ತು ಪ್ರೆಸಿಡೆನ್ಸಿ ಕಾಲೇಜು ಪಡೆದುಕೊಂಡಿವೆ.

 ಫಾರ್ಮಸಿ ವಿಭಾಗದಲ್ಲಿ ಜಮಿಯಾ ಹಮ್‌ದರ್ದ್‌ ಸಂಸ್ಥೆಯನ್ನು ಅತ್ಯುತ್ತಮ ವಿಶ್ವವಿದ್ಯಾಲಯ ಎಂದು ಘೋಷಿಸಲಾಗಿದೆ.

ಬೆಂಗಳೂರಿನ ಐಐಎಂ, ಕಾನೂನು ಶಾಲೆ ಅತ್ಯುತ್ತಮ

ಮ್ಯಾನೇಜಮೆಂಟ್‌ ಕಾಲೇಜುಗಳಲ್ಲಿ ಬೆಂಗಳೂರಿನ ಐಐಎಂ ಪ್ರಥಮ ಸ್ಥಾನ ಪಡೆದಿದೆ. ರ‍್ಯಾಂಕಿಂಗ್‌ ಪಟ್ಟಿಯ ಮೊದಲ ಆರು ಸ್ಥಾನಗಳನ್ನು ಐಐಎಂಗಳೇ ಪಡೆದಿವೆ. ಐಐಟಿ ದೆಹಲಿ, ಮುಂಬೈ ಮತ್ತು ರೂರ್ಕಿ ಸಂಸ್ಥೆಗಳು ಸಹ ಮೊದಲ 10 ಸ್ಥಾನಗಳಲ್ಲಿವೆ.

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಅತ್ಯುತ್ತಮ ಕಾನೂನು ಶಾಲೆ ಮತ್ತು ವೈದ್ಯಕೀಯ ಕಾಲೇಜು ಎಂದು ಪರಿಗಣಿಸಲಾಗಿದೆ.

“ಶಿಕ್ಷಣದ ಗುಣಮಟ್ಟ ಇನ್ನೂ ಆತಂಕದ ವಿಷಯವಾಗಿದೆ. ಆದರೂ, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉತ್ಕೃಷ್ಟ ಸಂಸ್ಥೆಗಳಿರುವುದು ಆಶಾದಾಯಕವಾಗಿದೆ” 
      –    ರಾಮನಾಥ ಕೋವಿಂದ್‌, ರಾಷ್ಟ್ರಪತಿ