ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ : ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿದ ಸೋನಿಯಾ

0
278

ಬಲಶಾಲಿ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಭಾರತದ ಸೋನಿಯಾ ಅವರು ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿ‍ಪ್‌ನ 57 ಕೆಜಿ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ನವದೆಹಲಿ (ಪಿಟಿಐ): ಬಲಶಾಲಿ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಭಾರತದ ಸೋನಿಯಾ ಅವರು ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿ‍ಪ್‌ನ 57 ಕೆಜಿ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಇಲ್ಲಿನ ಇಂದಿರಾಗಾಂಧಿ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಶನಿವಾರದ ರೋಚಕ ಬೌಟ್‌ನಲ್ಲಿ 21 ವರ್ಷದ ಸೋನಿಯಾ ಮೊರೊಕ್ಕೊದ ದೋ ತೊಜಾನಿ ಅವರನ್ನು 5–0ಯಿಂದ ಮಣಿಸಿದರು.

ಹರಿಯಾಣದ ಭಿವಾನಿ ಜಿಲ್ಲೆಯ ನಿಮ್ರಿ ಗ್ರಾಮದ ರೈತನ ಮಗಳಾದ ಸೋನಿಯಾ ಆಕ್ರಮಣದ ಜೊತೆಗೆ ರಕ್ಷಣಾತ್ಮಕ ಆಟಕ್ಕೂ ಆದ್ಯತೆ ನೀಡಿದರು. ಉತ್ತರಿಸಲಾಗದ ಎದುರಾಳಿ ಸುಲಭವಾಗಿ ಸೋಲೊಪ್ಪಿ
ಕೊಂಡರು. ಐದು ಸುತ್ತುಗಳಲ್ಲಿ ಸೋನಿಯಾ 29–28, 30–27, 30–27, 30–27, 30–27 ಪಾಯಿಂಟ್‌ಗಳನ್ನು ಕಲೆ ಹಾಕಿದರು. 2016ರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಸೋನಿಯಾ ಕಳೆದ ವರ್ಷ ನಡೆದ ಸರ್ಬಿಯಾ ಕಪ್‌ನಲ್ಲೂ ಚಿನ್ನದ ಸಾಧನೆ ಮಾಡಿದ್ದರು. ಈ ವರ್ಷ ನಡೆದಿದ್ದ ಅಹ
ಮತ್‌ ಕಾಮರ್ಟ್‌ ಬಾಕ್ಸಿಂಗ್ ಟೂರ್ನಿಯಲ್ಲಿ ಕಂಚಿನ ಪದಕ ಗಳಿಸಿದ್ದರು. ಮೊದಲ ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುತ್ತಿರುವ ಅವರು ಹಲವು ಬಾರಿ ಎದುರಾಳಿಯ ಮುಖದ ಎಡಭಾಗಕ್ಕೆ ಪಂಚ್‌ ನೀಡಿದರು. ನೇರ ಪಂಚ್‌ಗಳ ಮೂಲಕವೂ ಗಮನ ಸೆಳೆದರು.