ಮಹಿಳಾ ಮೀಸಲು: ನಿರ್ಣಯವನ್ನು ಅಂಗೀಕರಿಸಿದ ಒಡಿಶಾ

0
384

ಸಂಸತ್‌ ಮತ್ತು ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ33 ಮೀಸಲಾತಿ ನೀಡುವ ಕುರಿತು ಒಡಿಶಾ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು.

ಭುವನೇಶ್ವರ(ಪಿಟಿಐ): ಸಂಸತ್‌ ಮತ್ತು ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ33 ಮೀಸಲಾತಿ ನೀಡುವ ಕುರಿತು ಒಡಿಶಾ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು.

ನವೆಂಬರ್ 20 ರ ಮಂಗಳವಾರ ರಾತ್ರಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಮಂಡಿಸಿದ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ), ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ನಿರ್ಣಯಕ್ಕೆ ಬೆಂಬಲ ಸೂಚಿಸಿವೆ.

ಇದೊಂದು ಐತಿಹಾಸಿಕ ನಿರ್ಣಯ ಎಂದು ಪಟ್ನಾಯಕ್‌ ಬಣ್ಣಿಸಿದ್ದಾರೆ.