ಮಹಿಳಾ ಮಿಲಿಟರಿ ಪೊಲೀಸ್​ ಪಡೆಗೆ ಮಹಿಳಾ ಯೋಧರ ನೇಮಕಾತಿಗೆ ಆನ್​ಲೈನ್​ ನೋಂದಣಿ ಪ್ರಕ್ರಿಯೆ ಆರಂಭ

0
387

ಭಾರತೀಯ ಸೇನಾಪಡೆ ಇತ್ತೀಚಿನ ದಿನಗಳಲ್ಲಿ ಹಲವು ಹೊಸತು ಕ್ರಮಗಳನ್ನು ಕೈಗೊಳ್ಳುವ ಮೂಲಕ ತನ್ನ ಬಲ ಹೆಚ್ಚಿಸಿಕೊಳ್ಳಲು ಕ್ರಮ ಕೈಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಇದೇ ಮೊದಲ ಬಾರಿ ಮಹಿಳಾ ಮಿಲಿಟರಿ ಪೊಲೀಸ್​ ಪಡೆಗೆ ಮಹಿಳಾ ಯೋಧರನ್ನು ನೇಮಿಸಿಕೊಳ್ಳಲು ಆನ್​ಲೈನ್​ ನೋಂದಣಿ ಪ್ರಕ್ರಿಯೆ ಆರಂಭಿಸಿದೆ.

ನವದೆಹಲಿ: ಭಾರತೀಯ ಸೇನಾಪಡೆ ಇತ್ತೀಚಿನ ದಿನಗಳಲ್ಲಿ ಹಲವು ಹೊಸತು ಕ್ರಮಗಳನ್ನು ಕೈಗೊಳ್ಳುವ ಮೂಲಕ ತನ್ನ ಬಲ ಹೆಚ್ಚಿಸಿಕೊಳ್ಳಲು ಕ್ರಮ ಕೈಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಇದೇ ಮೊದಲ ಬಾರಿ ಮಹಿಳಾ ಮಿಲಿಟರಿ ಪೊಲೀಸ್​ ಪಡೆಗೆ ಮಹಿಳಾ ಯೋಧರನ್ನು ನೇಮಿಸಿಕೊಳ್ಳಲು ಆನ್​ಲೈನ್​ ನೋಂದಣಿ ಪ್ರಕ್ರಿಯೆ ಆರಂಭಿಸಿದೆ.

ಈ ಸಂಬಂಧ ಏ.25ರಂದು ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ https://joinindianarmy.nic.in  ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಫೀಸರ್​ ಹುದ್ದೆಗಿಂತ ಕೆಳಗಿನ ಹುದ್ದೆಗಳಿಗಾಗಿ ಈ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರು, ಅಂಬಾಲಾ, ಲಖನೌ, ಜಬಲ್​ಪುರ್​ ಮತ್ತು ಶಿಲ್ಲಾಂಗ್​ನಲ್ಲಿ ನೇಮಕಾತಿ ರ‍್ಯಾಲಿ ನಡೆಯಲಿದೆ. ಆನ್​ಲೈನ್​ನಲ್ಲಿ ಹೆಸರು ನೋಂದಾಯಿಸಿಕೊಂಡವರಿಗೆ ಅಡ್ಮಿಟ್​ ಕಾರ್ಡ್​ ಅನ್ನು ಕಳುಹಿಸಿ, ಯಾವುದಾದರೂ ಒಂದು ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ.

ಜನರಲ್​ ಬಿಪಿನ್​ ರಾವತ್​ ಅವರ ಯೋಜನೆ
ಜನರಲ್​ ಬಿಪಿನ್​ ರಾವತ್​ ಅವರು ಸೇನಾಪಡೆ ಮುಖ್ಯಸ್ಥರಾದ ಬಳಿಕ ಇಂಥ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಿ ಯೋಜನೆ ರೂಪಿಸಿದ್ದರು. ಈ ಕುರಿತು ರಕ್ಷಣಾ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಆಮೂಲಾಗ್ರವಾಗಿ ಪರಿಶೀಲಿಸಿದ ರಕ್ಷಣಾ ಸಚಿವಾಲಯ ಇತ್ತೀಚೆಗೆ ಈ ಯೋಜನೆಗೆ ಅನುಮತಿ ನೀಡಿತ್ತು. ಇದೀಗ ಈ ನೇಮಕಾತಿ ಪ್ರಕ್ರಿಯೆಗೆ ಭಾರತೀಯ ಸೇನಾಪಡೆ ಚಾಲನೆ ನೀಡಿದೆ. (ಏಜೆನ್ಸೀಸ್​)