ಮಹಾರಾಷ್ಟ್ರ, ಹರಿಯಾಣದ ವಿಧಾನಸಭೆ ಚುನಾವಣೆ ಅಕ್ಟೋಬರ್‌ 21ಕ್ಕೆ, 24ಕ್ಕೆ ಫಲಿತಾಂಶ ಪ್ರಕಟ: ಕೇಂದ್ರ ಚುನಾವಣಾ ಆಯೋಗ

0
26

ವದೆಹಲಿ: ಇನ್ನೇನು ಅವಧಿ ಮುಕ್ತಾಯಗೊಳ್ಳಲಿರುವ ಮಹಾರಾಷ್ಟ್ರ ಮತ್ತು ಹರಿಯಾಣದ ವಿಧಾನಸಭಾ ಚುನಾವಣೆಯು ಒಂದೇ ಹಂತದಲ್ಲಿ ಅಕ್ಟೋಬರ್‌ 21ರಂದು ನಡೆಯಲಿದ್ದು, 24ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣೆ ಆಯೋಗದ ಮುಖ್ಯಸ್ಥ ಸುನಿಲ್‌ ಅರೋರಾ ತಿಳಿಸಿದ್ದಾರೆ.

ನವದೆಹಲಿ: ಇನ್ನೇನು ಅವಧಿ ಮುಕ್ತಾಯಗೊಳ್ಳಲಿರುವ ಮಹಾರಾಷ್ಟ್ರ ಮತ್ತು ಹರಿಯಾಣದ ವಿಧಾನಸಭಾ ಚುನಾವಣೆಯು ಒಂದೇ ಹಂತದಲ್ಲಿ ಅಕ್ಟೋಬರ್‌ 21ರಂದು ನಡೆಯಲಿದ್ದು, 24ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣೆ ಆಯೋಗದ ಮುಖ್ಯಸ್ಥ ಸುನಿಲ್‌ ಅರೋರಾ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ದಿನಾಂಕ ಜಾರಿಯಾಗಿರುವುದರಿಂದಾಗಿ ಇಂದಿನಿಂದಲೇ ಈ ರಾಜ್ಯಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
ಹರಿಯಾಣದಲ್ಲಿ ಸುಮಾರು 1.82 ಕೋಟಿ ಮತದಾರರ ನೋಂದಣಿಯಾಗಿದ್ದು, ಮಹಾರಾಷ್ಟ್ರದಲ್ಲಿ 8.94 ಕೋಟಿ ಮತದಾರರು ಇದ್ದಾರೆ. ವಿಧಾನಸಭೆ ಚುನಾವಣೆಗಾಗಿ ಚುನಾವಣೆ ವೆಚ್ಚದ ಮೇಲೆ ನಿಗಾ ಇಡಲು ಇಬ್ಬರು ವೀಕ್ಷಕರನ್ನು ಮಹಾರಾಷ್ಟ್ರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ವಿವಿಧ ರಾಜ್ಯಗಳ ಉಪಚುನಾವಣೆ ಅ. 21ಕ್ಕೆ

ಇನ್ನುಳಿದಂತೆ ಅರುಣಾಚಲ್‌ ಪ್ರದೇಶ, ಬಿಹಾರ, ಛತ್ತೀಸ್‌ಗಢ, ಅಸ್ಸಾಂ, ಗುಜರಾತ್‌, ಹಿಮಾಚಲ ಪ್ರದೇಶ, ಕೇರಳ,ಕರ್ನಾಟಕ ಮಧ್ಯಪ್ರಧೇಶ, ಮೇಘಾಲಯ, ಒಡಿಶಾ, ಪಾಂಡಿಚೆರಿ, ಪಂಜಾಬ್‌, ರಾಜಸ್ತಾನ, ಸಿಕ್ಕಿಂ, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶದಲ್ಲಿ ಉಪಚುನಾವಣೆಯು ಅಕ್ಟೋಬರ್. 21ರಂದು ನಡೆಯಲಿದ್ದು,  ಅಕ್ಟೋಬರ್. 24ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್. 4 ಕೊನೆಯ ದಿನವಾಗಿದ್ದು, ಅಕ್ಟೋಬರ್. 7 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಚುನಾವಣಾ ಪ್ರಚಾರಗಳು ನಮ್ಮ ಮೇಲೆ ಪರಿಸರದ ಮೇಲೆ ಹಾನಿಯುಂಟು ಮಾಡುತ್ತವೆ. ಹೀಗಾಗಿ ಚುನಾವಣೆ ಪ್ರಚಾರದ ವೇಳೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಪ್ಲಾಸ್ಟಿಕ್‌ ಬಳಕೆ ಮಾಡದೆ ಪರಿಸರ ಸ್ನೇಹಿ ವಸ್ತುಗಳ ಬಳಕೆ ಮಾಡಲು ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

288 ಸದಸ್ಯರನ್ನೊಳಗೊಂಡ ಮಹಾರಾಷ್ಟ್ರ ವಿಧಾನಸಭೆ ಅವಧಿ ನವೆಂಬರ್.9ಕ್ಕೆ ಅಂತ್ಯಗೊಳ್ಳಲಿದ್ದು, 90 ಸದಸ್ಯರನ್ನೊಳಗೊಂಡ ಹರಿಯಾಣ ವಿಧಾನಸಭೆ ನವೆಂಬರ್. 2ಕ್ಕೆ ಮುಕ್ತಾಯಗೊಳ್ಳಲಿದೆ.

2014ರ ಚುನಾವಣೆಗೆ ಮಹಾರಾಷ್ಟ್ರ ಮತ್ತು ಹರಿಯಾಣದ ಚುನಾವಣೆಅ ಕ್ಟೋಬರ್. 15 ರಂದು ಮತದಾನ ನಡೆದಿತ್ತು. ಅದರಂತೆ ಜಾರ್ಖಂಡ್‌ನಲ್ಲಿ 2014ರ ಚುನಾವಣೆಗೆ ಮತದಾನ ಐದು ಹಂತಗಳಲ್ಲಿ ನವೆಂಬರ್.25 ರಿಂದ ಡಿಸೆಂಬರ್.20ರ ನಡುವೆ ನಡೆದಿತ್ತು ಮತ್ತು ಡಿ. 23ರಂದು ಫಲಿತಾಂಶ ಪ್ರಕಟವಾಗಿತ್ತು. ಎರಡು ರಾಜ್ಯಗಳಲ್ಲಿ ಬಿಜೆಪಿ ಆಳ್ವಿಕೆಯಿದ್ದು, ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. (ಏಜೆನ್ಸೀಸ್)