ಮಹತಿರ್‌ ಮೊಹಮದ್‌

0
16

ಬಾರಿಸನ್‌ ನೇಸನಲ್‌ ಪಕ್ಷದ ಆರು ದಶಕಗಳ ರಾಜಕೀಯ ನಿಯಂತ್ರಣವನ್ನು ಕಸಿದುಕೊಂಡಿರುವ ಪಾಕತಾನ್ ಹರಪನ್ 112 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚನೆಗೆ ಅಗತ್ಯವಿರುವ ಸರಳ ಬಹುಮತ ಪಡೆದಿದೆ.

ಕೌಲಾಲಂಪುರ: ಪಾಕತಾನ್ ಹರಪನ್‌ ಮುಖ್ಯಸ್ಥ ಮಹತಿರ್‌ ಮೊಹಮದ್(92) ಮಲೇಷ್ಯಾದ ಏಳನೇ ಪ್ರಧಾನ ಮಂತ್ರಿಯಾಗಿ 2018 ಮೇ 10 ರ  ಗುರುವಾರ ಅಧಿಕಾರ ಸ್ವೀಕರಿಸಲಿದ್ದಾರೆ.

ಪ್ರಧಾನಿ ನಜಿಬ್‌ ರಝಾಕ್‌ ನೇತೃತ್ವದ ಆಡಳಿತಾರೂಢ ಬಾರಿಸನ್‌ ನೇಸನಲ್‌(ನ್ಯಾಷನಲ್‌ ಫ್ರಂಟ್‌) ಪಕ್ಷ ಸಾರ್ವಜನಿಕ ಚುನಾವಣೆಯಲ್ಲಿ ಸೋಲು ಕಂಡಿದೆ. 61 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿರೋಧ ಪಕ್ಷಗಳ ಮೈತ್ರಿ ವಿರುದ್ಧ ಆಡಳಿತ ಪಕ್ಷ ಸೋಲು ಅನುಭವಿಸಿದೆ.

ಬಾರಿಸನ್‌ ನೇಸನಲ್‌ ಪಕ್ಷದ ಆರು ದಶಕಗಳ ರಾಜಕೀಯ ನಿಯಂತ್ರಣವನ್ನು ಕಸಿದುಕೊಂಡಿರುವ ಪಾಕತಾನ್ ಹರಪನ್ 112 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚನೆಗೆ ಅಗತ್ಯವಿರುವ ಸರಳ ಬಹುಮತ ಪಡೆದಿದೆ.

ಸಂಸತ್‌ನ ಎಲ್ಲ 222 ಸ್ಥಾನಗಳು ಹಾಗೂ 505 ಪ್ರಾದೇಶಿಕ ಸ್ಥಾನಗಳಿಗೆ 2018 ಮೇ 9 ರ ಬುಧವಾರ ಸಾರ್ವತ್ರಿಕ ಚುನಾವಣೆ ನಡೆದಿತ್ತು.

ದೇಶದ 8,253 ಮತಗಟ್ಟೆಗಳಲ್ಲಿ ಮತದಾನ ನಡೆಸಲು ಒಟ್ಟು 1.45 ಕೋಟಿ ಜನರು ಅರ್ಹರಾಗಿದ್ದರು.