ಮಸೂದ್‌ ಅಜರ್‌ಗೆ ಜಾಗತಿಕ ಉಗ್ರ ಪಟ್ಟ; ಅಮೆರಿಕ ಕರಡು ನಿರ್ಣಯ ಸಲ್ಲಿಕೆ

0
578

ಜೈಷ್ ಎ ಮೊಹಮ್ಮದ್ ಭಯೋತ್ಪಾದನಾ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಕಪ್ಪು ಪಟ್ಟಿಗೆ ಸೇರಿಸುವ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಕರಡು ನಿರ್ಣಯವನ್ನು ಅಮೆರಿಕ ಸಲ್ಲಿಸಿದೆ

ವಾಷಿಂಗ್ಟನ್‌: ಜೈಷ್ ಎ ಮೊಹಮ್ಮದ್ ಭಯೋತ್ಪಾದನಾ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಕಪ್ಪು ಪಟ್ಟಿಗೆ ಸೇರಿಸುವ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಕರಡು ನಿರ್ಣಯವನ್ನು ಅಮೆರಿಕ ಸಲ್ಲಿಸಿದೆ. 

ಅದರಲ್ಲಿ ಪುಲ್ವಾಮಾ ದಾಳಿಯನ್ನು ಖಂಡಿಸಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈಗಾಗಲೇ ಕಪ್ಪು ಪಟ್ಟಿಗೆ ಸೇರಿಸಿರುವ ಅಲ್ ಖೈದಾ ಹಾಗೂ ಇಸ್ಲಾಮಿಕ್ ಸ್ಟೇಟ್ ನಿರ್ಬಂಧದ ಜತೆ ಅಜರ್‌ನನ್ನು ಸೇರಿಸಲಾಗಿದೆ. 

ಅಜರ್‌ಗೆ ಅಂತಾರಾಷ್ಟ್ರೀಯ ಪ್ರವಾಸದ ನಿರ್ಬಂಧ ಹೇರುವುದರ ಜತೆಗೆ, ಆತನ ಆಸ್ತಿಯನ್ನು ಹಾಗೂ ಶಸ್ತ್ರಾಸ್ರಗಳನ್ನು ಮುಟ್ಟುಗೋಲು ಹಾಕಲು ಕರಡಿನಲ್ಲಿ ಉಲ್ಲೇಖಿಸಲಾಗಿದೆ. 

ಈ ಕರಡಿನ ನಿರ್ಣಾಯಕದ ಮತದಾನ ಪ್ರಕ್ರಿಯೆ ಇನ್ನೂ ಅಸ್ಪಷ್ಟವಾಗಿದೆ. 

ಫ್ರಾನ್ಸ್ ಮತ್ತು ಬ್ರಿಟನ್ ಅಜರ್ ವಿರುದ್ಧ ನಿರ್ಬಂಧ ವಿಧಿಸಲು ವಿಶ್ವಸಂಸ್ಥೆಯಲ್ಲಿ ಒತ್ತು ನೀಡಿದೆ. 

ಅಜರ್‌ನನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ನಾಲ್ಕು ಬಾರಿ ಮನವಿ ಮಾಡಲಾಗಿದ್ದು ಚೀನಾ ಪ್ರತಿ ಬಾರಿಯೂ ಇದಕ್ಕೆ ತಾಂತ್ರಿಕ ಕಾರಣಗಳನ್ನು ನೀಡಿ ತಡೆಹಿಡಿಯುತ್ತಿದ್ದು ಮತ್ತೆ 9 ತಿಂಗಳಿನಿಂದ ಈ ಪ್ರಕ್ರಿಯೆ ಮುಂದೂಡಲ್ಪಟ್ಟಿದೆ.