ಮಸೀದಿ ದಾಳಿ: ಅಸಾಲ್ಟ್​, ಸೆಮಿ-ಆಟೋಮೆಟಿಕ್ ರೈಫಲ್​ಗಳ ಮಾರಾಟ ನಿಷೇಧಿಸಿದ ನ್ಯೂಜಿಲೆಂಡ್​

0
478

ಕ್ರೈಸ್ಟ್​ಚರ್ಚ್​ 2 ಮಸೀದಿಗಳಲ್ಲಿ ಗುಂಡಿನ ದಾಳಿ ನಡೆದ ನಂತರ ಮಹತ್ವದ ತೀರ್ಮಾನ ತೆಗೆದುಕೊಂಡಿರುವ ನ್ಯೂಜಿಲೆಂಡ್​ನ ಪ್ರಧಾನ ಮಂತ್ರಿ ಜಸಿಂದಾ ಆಡ್ರೆನ್​ ಅವರು, ತಕ್ಷಣದಿಂದ ಜಾರಿಗೆ ಬರುವಂತೆ ಅಸಾಲ್ಟ್​ ಮತ್ತು ಸೆಮಿ-ಆಟೋಮೆಟಿಕ್​ ರೈಫಲ್​ಗಳ ಮಾರಾಟವನ್ನು ನಿಷೇಧಿಸಿದ್ದಾರೆ.

ವೆಲ್ಲಿಂಗ್ಟನ್​: ಕ್ರೈಸ್ಟ್​ಚರ್ಚ್​ 2 ಮಸೀದಿಗಳಲ್ಲಿ ಗುಂಡಿನ ದಾಳಿ ನಡೆದ ನಂತರ ಮಹತ್ವದ ತೀರ್ಮಾನ ತೆಗೆದುಕೊಂಡಿರುವ ನ್ಯೂಜಿಲೆಂಡ್​ನ ಪ್ರಧಾನ ಮಂತ್ರಿ ಜಸಿಂದಾ ಆಡ್ರೆನ್​ ಅವರು, ತಕ್ಷಣದಿಂದ ಜಾರಿಗೆ ಬರುವಂತೆ ಅಸಾಲ್ಟ್​ ಮತ್ತು ಸೆಮಿ-ಆಟೋಮೆಟಿಕ್​ ರೈಫಲ್​ಗಳ ಮಾರಾಟವನ್ನು ನಿಷೇಧಿಸಿದ್ದಾರೆ.

ಮಸೀದಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 50 ಜನರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಮಾಜ ಘಾತುಕ ಶಕ್ತಿಗಳಿಗೆ ಸುಲಭವಾಗಿ ಶಸ್ತ್ರಾಸ್ತ್ರಗಳು ಸಿಗದಂತೆ ನ್ಯೂಜಿಲೆಂಡ್​ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಮಿಲಿಟರಿ ಮಾದರಿಯ ಎಲ್ಲ ಸೆಮಿ ಆಟೋಮೆಟಿಕ್​ ರೈಫಲ್​ಗಳು, ಅಸಾಲ್ಟ್​ ರೈಫಲ್​ಗಳನ್ನು ನಿಷೇಧಿಸಲಾಗಿದೆ. ಜತೆಗೆ ಹೆಚ್ಚು ಸಾಮರ್ಥ್ಯದ ಮ್ಯಾಗಜೀನ್​ಗಳು ಮತ್ತು ರೈಫಲ್​ಗಳು ಹೆಚ್ಚು ವೇಗವಾಗಿ ಗುಂಡು ಹಾರಿಸಲು ನೆರವಾಗುವ ಸಾಧನಗಳ ಮಾರಾಟವನ್ನೂ ನಿಷೇಧಿಸಲಾಗಿದೆ. ಪೊಲೀಸರ ಅನುಮತಿಯಿಲ್ಲದೆ ಯಾರೂ ಇಂತಹ ಆಯುಧಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಜಸಿಂದಾ ಆಡ್ರೆನ್​ ತಿಳಿಸಿದ್ದಾರೆ.

ಪ್ರಸ್ತುತ ಈ ವಿಧದ ಆಯುಧಗಳನ್ನು ಹೊಂದಿರುವವರೂ ನಿಷೇಧದ ವ್ಯಾಪ್ತಿಗೆ ಒಳಪಡುತ್ತಾರೆ. ಆಯುಧ ಹೊಂದಿರುವವರು ಅವುಗಳನ್ನು ಸರ್ಕಾರಕ್ಕೆ ಮಾರಾಟ ಮಾಡಬಹುದು. ಶೀಘ್ರ ಆಯುಧಗಳನ್ನು ಕೊಳ್ಳಲು ಕ್ರಮ ತೆಗೆದುಕೊಳ್ಳಲಾಗುವುದು. ಅದರ ಹೊರತಾಗಿಯೂ ಇಂತಹ ಆಯುಧಗಳನ್ನು ಹೊಂದಿದ್ದರೆ ಅವರಿಗೆ 4,000 ಡಾಲರ್ ದಂಡ ಮತ್ತು ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ. (ಏಜೆನ್ಸೀಸ್​)