ಮಲ್ಯರ ಬೆಂಗಳೂರು ಆಸ್ತಿ ಜಪ್ತಿಗೆ ದೆಹಲಿ ಕೋರ್ಟ್ ಆದೇಶ

0
414

ಭಾರತೀಯ ಬ್ಯಾಂಕ್​ಗಳಿಗೆ ಸಾಲ ಮರುಪಾವತಿಸದೆ ಲಂಡನ್​ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಬೆಂಗಳೂರಿನಲ್ಲಿ ಹೊಂದಿರುವ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ದೆಹಲಿ ಕೋರ್ಟ್ ಮಾರ್ಚ್ 23 ರ ಶನಿವಾರ ಆದೇಶಿಸಿದೆ.

ನವದೆಹಲಿ: ಭಾರತೀಯ ಬ್ಯಾಂಕ್​ಗಳಿಗೆ ಸಾಲ ಮರುಪಾವತಿಸದೆ ಲಂಡನ್​ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಬೆಂಗಳೂರಿನಲ್ಲಿ ಹೊಂದಿರುವ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ದೆಹಲಿ ಕೋರ್ಟ್ ಮಾರ್ಚ್ 23 ರ ಶನಿವಾರ ಆದೇಶಿಸಿದೆ.

ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಮಲ್ಯ ವಿರುದ್ಧ ಕೋರ್ಟ್ ಈ ಆದೇಶ ನೀಡಿದೆ. ಜು.10ರಂದು ಮುಂದಿನ ವಿಚಾರಣೆ ನಡೆಯಲಿದೆ. ಅಷ್ಟರೊಳಗೆ ಎಲ್ಲ ಸ್ವತ್ತುಗಳನ್ನು ವಶಕ್ಕೆ ಪಡೆಯುವಂತೆ ಕರ್ನಾಟಕ ಪೊಲೀಸರಿಗೆ ಕೋರ್ಟ್ ಸೂಚಿಸಿದೆ.

ಮಲ್ಯ ಆಸ್ತಿ ಮುಟ್ಟುಗೋಲು ಸಂಬಂಧ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದೀಪಕ್ ಶೆರಾವತ್ ಅವರಿಗೆ ಜಾರಿ ನಿರ್ದೇಶನಾಲಯ ಪರ ವಕೀಲ ಎನ್.ಕೆ. ಮತ್ತಾ ಹೆಚ್ಚಿನ ಸಮಯಾವಕಾಶ ನೀಡುವಂತೆ ಮನವಿ ಮಾಡಿದ್ದರು. ಜತೆಗೆ ಮಲ್ಯಗೆ ಸಂಬಂಧಿಸಿದ ಒಟ್ಟು 159 ಸ್ವತ್ತುಗಳ ಪಟ್ಟಿಯನ್ನು ಬೆಂಗಳೂರು ಪೊಲೀಸರು ಕೋರ್ಟ್​ಗೆ ಸಲ್ಲಿಸಿದ್ದರು. ಸ್ವತ್ತುಗಳನ್ನು ವಶಕ್ಕೆ ಪಡೆಯಲು ಸೂಕ್ತ ಆದೇಶವಿಲ್ಲ ಎಂದು ಪೊಲೀಸರು ಕೋರ್ಟ್​ಗೆ ತಿಳಿಸಿದ್ದರು. ಪ್ರಕರಣ ಸಂಬಂಧ ಹಲವು ಬಾರಿ ಸಮನ್ಸ್ ನೀಡಿದರೂ ಪ್ರತಿಕ್ರಿಯಿಸದ ಮಲ್ಯರನ್ನು ಕಳೆದ ವರ್ಷ ಜ. 4ರಂದು ಉದ್ದೇಶಪೂರ್ವಕ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿತ್ತು.