ಮಲೇಷ್ಯಾ ದೊರೆ ಮೊಹಮ್ಮದ್‌ ವಿ ರಾಜೀನಾಮೆ

0
471

ಮಲೇಷ್ಯಾದ 15ನೇ ರಾಜ ಮೊಹಮ್ಮದ್‌ ವಿ. ಜನೇವರಿ 6 ರ ಭಾನುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಕ್ವಾಲಾಲಂಪುರ (ಎಎಫ್‌ಪಿ/ರಾಯಿಟರ್ಸ್‌): ಮಲೇಷ್ಯಾದ 15ನೇ ರಾಜ ಮೊಹಮ್ಮದ್‌ ವಿ. ಭಾನುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

1957ರಲ್ಲಿ ಬ್ರಿಟಿಷರಿಂದ ದೇಶ ಸ್ವಾತಂತ್ರ್ಯ ಪಡೆದಾಗಿನಿಂದ, ಐದು ವರ್ಷಗಳ ಆಳ್ವಿಕೆ ‍ಪೂರ್ಣಗೊಳ್ಳುವ ಮೊದಲೇ ಹುದ್ದೆ ತ್ಯಾಗ ಮಾಡಿದ ಮೊದಲ ರಾಜ ಇವರಾಗಿದ್ದಾರೆ. ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರದಲ್ಲಿ 2016ರ ಡಿಸೆಂಬರ್‌ನಲ್ಲಿ ಮೊಹಮ್ಮದ್‌ ರಾಜನಾಗಿ ಅಧಿಕಾರ ಸ್ವೀಕರಿಸಿದ್ದರು. 

‘ಜನವರಿ 6ರಿಂದ ಜಾರಿಗೆ ಬರುವಂತೆ ಮೊಹಮ್ಮದ್‌ ರಾಜೀನಾಮೆ ನೀಡಿದ್ದು, ಅದು ತಕ್ಷಣದಿಂದಲೇ ಜಾರಿಗೆ ಬಂದಿದೆ’ ಎಂದು ಅರಮನೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ರಾಜೀನಾಮೆಗೆ ರಾಜ ಯಾವುದೇ ಕಾರಣ ನೀಡಿಲ್ಲ ಮತ್ತು ಈ ಸಂಬಂಧ ಪ್ರತಿಕ್ರಿಯಿಸಲು ಅರಮನೆ ಅಧಿಕಾರಿಗಳು ನಿರಾಕರಿಸಿದ್ದಾರೆ.

49 ವರ್ಷದ ‌ಮೊಹಮ್ಮದ್‌ ನವೆಂಬರ್‌ನಿಂದ ಸುದೀರ್ಘ ವೈದ್ಯಕೀಯ ರಜೆಯಲ್ಲಿದ್ದರು. ರಷ್ಯಾದ ಮಾಜಿ ಸುಂದರಿಯೊಬ್ಬರನ್ನು ಅವರು ವಿವಾಹವಾಗಿದ್ದಾರೆ ಎಂಬ ಗಾಳಿಸುದ್ದಿ ಆಗಿನಿಂದಲೂ ಹಬ್ಬಿತ್ತು. ಮೊಹಮ್ಮದ್‌ ಕರ್ತವ್ಯಕ್ಕೆ ಹಾಜರಾದ ಒಂದು ವಾರದಲ್ಲೇ ರಾಜೀನಾಮೆ ನಿರ್ಧಾರ ಹೊರಬಿದ್ದಿದೆ.