ಮಲೇಷ್ಯಾದ ಮಾಜಿ ಪ್ರಧಾನಿ ಬಳಿ 1900 ಕೋಟಿ ರೂ. ಗುಪ್ತ ನಿಧಿ ಪತ್ತೆ

0
25

ಹಗರಣಗಳ ಸರದಾರನೆಂದೇ ಅಧಿಕಾರವಧಿಯಲ್ಲಿ ಕುಖ್ಯಾತಿ ಗಳಿಸಿದ್ದ ಮಲೇಶಿಯಾದ ಮಾಜಿ ಪ್ರಧಾನಿ ನಜೀಬ್‌ ರಜಾಕ್‌ಗೆ ಸೇರಿದ್ದು ಎನ್ನಲಾದ ಅಪಾರ ಮೊತ್ತದ ನಗದು, ಬೆಲೆ ಬಾಳುವ ಚಿನ್ನಾಭರಣಗಳು, ಐಷಾರಾಮಿ ಹ್ಯಾಂಡ್‌ಬ್ಯಾಗ್‌ಗಳು ಸೇರಿದಂತೆ ಸುಮಾರು 1900 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಮಲೇಶಿಯಾ ಪೊಲೀಸರು ಜಪ್ತಿ ಮಾಡಿದ್ದಾರೆ.

ಕೌಲಾಲಂಪುರ: ಹಗರಣಗಳ ಸರದಾರನೆಂದೇ ಅಧಿಕಾರವಧಿಯಲ್ಲಿ ಕುಖ್ಯಾತಿ ಗಳಿಸಿದ್ದ ಮಲೇಶಿಯಾದ ಮಾಜಿ ಪ್ರಧಾನಿ ನಜೀಬ್‌ ರಜಾಕ್‌ಗೆ ಸೇರಿದ್ದು ಎನ್ನಲಾದ ಅಪಾರ ಮೊತ್ತದ ನಗದು, ಬೆಲೆ ಬಾಳುವ ಚಿನ್ನಾಭರಣಗಳು, ಐಷಾರಾಮಿ ಹ್ಯಾಂಡ್‌ಬ್ಯಾಗ್‌ಗಳು ಸೇರಿದಂತೆ ಸುಮಾರು 1900 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಮಲೇಶಿಯಾ ಪೊಲೀಸರು ಜಪ್ತಿ ಮಾಡಿದ್ದಾರೆ. 

ಹಗರಣದ ತನಿಖೆಯ ಭಾಗವಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದ ಮಲೇಶಿಯಾ ಪೊಲೀಸರು 12 ಸಾವಿರ ಚಿನ್ನಾಭರಣಗಳು, 26 ವಿವಿಧ ದೇಶಗಳ ಕರೆನ್ಸಿಗಳ ಸುಮಾರು 206 ಕೋಟಿ ರೂ. ನಗದು ತುಂಬಿದ್ದ ಚೀಲಗಳು, ಹೆಚ್ಚೂಕಡಿಮೆ 132 ಕೋಟಿ ರೂಪಾಯಿ ಮೌಲ್ಯದ 400 ವಾಚ್‌ಗಳು ಹಾಗೂ ಇನ್ನಿತರ ಐಷಾರಾಮಿ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. 

”ನನ್ನ ಪ್ರಕಾರ, ಮಲೇಶಿಯಾದ ಇತಿಹಾಸದಲ್ಲೇ ಇದೊಂದು ಅತಿ ದೊಡ್ಡ ಜಪ್ತಿ,” ಎಂದು ಕೌಲಾಲಂಪುರದ ವಾಣಿಜ್ಯ ಅಪರಾಧ ತನಿಖಾ ತಂಡದ ಮುಖ್ಯಸ್ಥರು ಬುಧವಾರ ಹೇಳಿಕೊಂಡಿದ್ದಾರೆ. 

ಪ್ರಧಾನಿಯಾಗಿದ್ದಾಗ ತಿಂಗಳಿಗೆ 5,670 ಡಾಲರ್‌ (ಸುಮಾರು 3 ಲಕ್ಷದ 89 ಸಾವಿರ ರೂ.) ವೇತನ ಪಡೆಯುತ್ತಿದ್ದ ನಜೀಬ್ ರಜಾಕ್, ಅಕಾರವಯಲ್ಲೇ ಅಪಾರ ಪ್ರಮಾಣದಲ್ಲಿ ಆಸ್ತಿ ಮಾಡಿದ ಹಿನ್ನೆಲೆಯಲ್ಲಿ ಸಹಜವಾಗಿಯೇ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಮಲೇಶಿಯಾದಲ್ಲಿ ದೀರ್ಘ ಕಾಲ ಆಡಳಿತ ನಡೆಸಿದ್ದ ರಜಾಕ್‌ ನೇತೃತ್ವದ ಸಮ್ಮಿಶ್ರ ಸರಕಾರ ಪತನಗೊಳ್ಳುವುದಕ್ಕೂ ಇದೇ ಕಾರಣ ಎನ್ನಲಾಗಿದೆ. ರಜಾಕ್‌ ನೇತೃತ್ವದ ಮೈತ್ರಿಕೂಟ ಕಳೆದ ತಿಂಗಳು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಹಾತಿರ್‌ ಮೊಹಮದ್‌ ಸಾರಥ್ಯದ ಮೈತ್ರಿಕೂಟದ ಮುಂದೆ ಮಂಡಿಯೂರಿತ್ತು.