ಮಲಿನ ಗಾಳಿಗೆ ಲಕ್ಷ ಮಕ್ಕಳು ಬಲಿ : ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವಿರಾನ್ಮೆಂಟ್ ವರದಿ

0
43

ವಾಯು ಮಾಲಿನ್ಯಕ್ಕೆ ದೇಶದಲ್ಲಿ ಪ್ರತಿ ವರ್ಷ 1 ಲಕ್ಷ ಮಕ್ಕಳು ಬಲಿಯಾಗುತ್ತಿದ್ದು, ಇವರೆಲ್ಲರೂ 5 ವರ್ಷದೊಳಗಿನವರಾಗಿದ್ದಾರೆ. ಅಂದರೆ ದಿನಕ್ಕೆ ಸರಾಸರಿ 273ಕ್ಕೂ ಅಧಿಕ ಮಕ್ಕಳ ಮಲಿನವಾದ ವಾಯುವಿಗೆ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವಿರಾನ್ಮೆಂಟ್ ವರದಿ ನೀಡಿದೆ.

ನವದೆಹಲಿ: ವಾಯು ಮಾಲಿನ್ಯಕ್ಕೆ ದೇಶದಲ್ಲಿ ಪ್ರತಿ ವರ್ಷ 1 ಲಕ್ಷ ಮಕ್ಕಳು ಬಲಿಯಾಗುತ್ತಿದ್ದು, ಇವರೆಲ್ಲರೂ 5 ವರ್ಷದೊಳಗಿನವರಾಗಿದ್ದಾರೆ. ಅಂದರೆ ದಿನಕ್ಕೆ ಸರಾಸರಿ 273ಕ್ಕೂ ಅಧಿಕ ಮಕ್ಕಳ ಮಲಿನವಾದ ವಾಯುವಿಗೆ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವಿರಾನ್ಮೆಂಟ್ ವರದಿ ನೀಡಿದೆ.

ಈ ವರದಿ ಪ್ರಕಾರ, ಪ್ರತಿ 1 ಸಾವಿರ ಮಕ್ಕಳಲ್ಲಿ 8.5 ಗಂಡು ಹಾಗೂ 9.6 ಹೆಣ್ಣು ಮಕ್ಕಳ ಮೇಲೆ ವಾಯು ಮಾಲಿನ್ಯದ ಮಾರಣಾಂತಿಕ ಪರಿಣಾಮವಾಗುತ್ತಿದೆ. ವಿಶ್ವದಲ್ಲೇ ಅತಿ ಹೆಚ್ಚು ವಾಯು ಮಾಲಿನ್ಯದ ಅಪಾಯ ಎದುರಿಸುತ್ತಿರುವ ಭಾರತಕ್ಕೆ ಎಚ್ಚರಿಕೆಯ ಸಂದೇಶವಾಗಿದೆ.

ವಾಯು ಮಾಲಿನ್ಯ ಅಥವಾ ಕೆಟ್ಟ ಗಾಳಿ ಸೇವನೆ ಕಾರಣದಿಂದ ಸಾಯುತ್ತಿರುವವರ ಪೈಕಿ ಭಾರತದ ಒಟ್ಟು ಸಾವಿನಲ್ಲಿ ಶೇ.12.5 ವ್ಯಾಪಿಸಿದೆ. ಇದು ಆಳುವ ಸರ್ಕಾರಕ್ಕೆ ಆತಂಕಕಾರಿ ವಿಚಾರವಾಗಿದೆ. ಜಾಗತಿಕ ಹಾಗೂ ಸ್ಥಳೀಯ ಸಂಶೋಧನಾ ಸಂಸ್ಥೆಗಳ ಎಚ್ಚರಿಕೆಯ ಹೊರತಾಗಿಯೂ ಈ ಪ್ರಮಾಣ ಕುಸಿಯದಿರುವುದು ಭವಿಷ್ಯದಲ್ಲಿ ಇನ್ನಷ್ಟು ಅಪಾಯದ ಮುನ್ಸೂಚನೆ ನೀಡುತ್ತಿದೆ.

ಕಳೆದ ವರ್ಷ ಕೂಡ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಇಂತಹದೊಂದು ವರದಿ ಪ್ರಕಟವಾಗಿದ್ದನ್ನು ಕೇಂದ್ರ ಸರ್ಕಾರ ಅಲ್ಲಗಳೆದಿತ್ತು. ಆ ಪ್ರಕಾರ 2017ರೊಂದರಲ್ಲೇ ಭಾರತದಲ್ಲಿ 12 ಲಕ್ಷ ಜನರು ವಾಯು ಮಾಲಿನ್ಯಕ್ಕೆ ಬಲಿಯಾಗಿದ್ದರು.

ವಾಯು ಮಾಲಿನ್ಯದ ಅಪಾಯ

# ಜಾಗತಿಕವಾಗಿ ವಾಯು ಮಾಲಿನ್ಯದಿಂದ ಪ್ರತಿ ನಿಮಿಷಕ್ಕೆ 13 ಜನರ ಸಾವು, ಇದು ಮಲೇರಿಯಾ, ಕ್ಯಾನ್ಸರ್, ಏಡ್ಸ್​ನಂಥ ಮಾರಣಾಂತಿಕ ರೋಗಕ್ಕಿಂತ ಮೂರು ಪಟ್ಟು ಹೆಚ್ಚು.

# ಪ್ರತಿ ವರ್ಷ 70 ಲಕ್ಷಕ್ಕೂ ಅಧಿಕ ಜನ ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ. ಇವರಲ್ಲಿ ಮನೆಯಲ್ಲಿನ ವಾಯು ಮಾಲಿನ್ಯದಿಂದ ಪ್ರತಿ ವರ್ಷ 38 ಲಕ್ಷ ಜನರಿದ್ದಾರೆ.

# ಪ್ರತಿ ನಿಮಿಷಕ್ಕೆ 800 ಜನ ವಾಯು ಮಾಲಿನ್ಯದಿಂದ ಸಾವನ್ನಪು್ಪತ್ತಿದ್ದಾರೆ.

# ವಾಯು ಮಾಲಿನ್ಯದ ಕಾರಣದಿಂದ ಜನರ ವಯೋಮಾನ ಸರಾಸರಿ 20 ತಿಂಗಳು ಕಡಿಮೆಯಾಗುತ್ತಿದೆ

# ವಿಶ್ವ ಆರೋಗ್ಯ ಸಂಸ್ಥೆ ಮಾನದಂಡಕ್ಕಿಂತ ಹೆಚ್ಚು ವಾಯು ಮಾಲಿನ್ಯ ಹೊಂದಿರುವ ಪ್ರದೇಶಗಳಲ್ಲಿ ಶೇ.93ಕ್ಕೂ ಅಧಿಕ ಮಕ್ಕಳು ವಾಸಿಸುತ್ತಿದ್ದಾರೆ.

# ಕಡಿಮೆ ಹಾಗೂ ಮಧ್ಯಮ ಆದಾಯ ಹೊಂದಿರುವ ಜಗತ್ತಿನ ಶೇ.97 ನಗರಗಳು ವಾಯು ಮಾಲಿನ್ಯದ ಸಮಸ್ಯೆ ಎದುರಿಸುತ್ತಿವೆ.

# ವಾಯು ಮಾಲಿನ್ಯ ತಡೆಗೆ ತುರ್ತಾಗಿ ಜಾಗತಿಕ ಜಿಡಿಪಿಯ ಶೇ.1ರಷ್ಟನ್ನು ವಿನಿಯೋಗಿಸಬೇಕಿದೆ. ಅತಿ ಹೆಚ್ಚು ವಾಯು ಮಾಲಿನ್ಯ ಮಾಡುತ್ತಿರುವ 15 ದೇಶಗಳಲ್ಲಿ ಆರೋಗ್ಯ ರಕ್ಷಣೆಗೆ ಜಿಡಿಪಿಯ ಶೇ.4 ಹಣ ವ್ಯಯಿಸಲಾಗುತ್ತಿದೆ.

# ಹವಾಮಾನ ಬದಲಾವಣೆಗೆ ಸೂಕ್ತ ಕಾರಣ ಹುಡುಕಿ ನಿಯಂತ್ರಿಸುವ ಕೆಲಸ ಆಗುತ್ತಿಲ್ಲ

ಭಾರತದಲ್ಲಿ ವಾಯು ಮಾಲಿನ್ಯದಿಂದಾಯ ಅಪಾಯಗಳು

# 2010 -14 ರ ಅವಧಿಯಲ್ಲಿ ಹಸಿರು ಮನೆ ಅನಿಲದ ಉತ್ಪಾದನೆ ಪ್ರಮಾಣ ಶೇ 22 ಏರಿಕೆಯಾಗಿದೆ.

# 2018 ರಲ್ಲಿ ದೇಶದ 11 ರಾಜ್ಯಗಳಲ್ಲಿ ಹವಾಮಾನದ ಏರುಪೇರಿನಿಂದ 1425 ಜನ ಮರಣ ಹೊಂದಿದ್ದಾರೆ.

# ದೇಶದ 86 ಪ್ರಮುಖ ಜಲಮೂಲಗಳು ಕೂಡ ಮಲೀನವಾಗಿವೆ.

# 2019 ರಲ್ಲಿ ದೇಶದ 69,523 ಕಾಡುಗಳಿಗೆ ಬೆಂಕಿ ಬಿದ್ದಿವೆ.

“ನಿಸರ್ಗ ದೊಂದಿಗೆ ಹೊಂದಿಕೊಂಡು ಬಾಳಿದರೆ ಮಾತ್ರ ಭವಿಷ್ಯ ಉತ್ತಮವಾಗಿರಲಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಹೆಜ್ಜೆ ಇಡಲಿದೆ.”

| ನರೇಂದ್ರ ಮೋದಿ, ಪ್ರಧಾನಿ

“ಶೇ.90 ಜನರು ವಾಯು ಮಾಲಿನ್ಯದ ಪರಿಣಾಮ ಎದುರಿಸುತ್ತಿದ್ದಾರೆ. ಇದರಿಂದ ಜನರ ವಯೋಮಾನ ಹಾಗೂ ಆರ್ಥಿಕತೆ ಕುಸಿಯುತ್ತಿದೆ.”

| ಅಂಟಾನಿಯೋ ಗಟ್ಟರ್, ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ