“ಮರಾಠ ಮೀಸಲಾತಿ” ಸುಗ್ರೀವಾಜ್ಞೆಗೆ ಮಹಾರಾಷ್ಟ್ರ ರಾಜ್ಯ ಸಚಿವ ಸಂಪುಟ ಅಸ್ತು

0
21

ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಮರಾಠ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವ ಉದ್ದೇಶದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಹೊರಡಿಸಲು ಮಹಾರಾಷ್ಟ್ರ ಸಚಿವ ಸಂಪುಟ ಸಭೆಯಲ್ಲಿ ಮೇ 17 ರ ಶುಕ್ರವಾರ ತೀರ್ಮಾನಿಸಲಾಗಿದೆ.

ಮುಂಬೈ : ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಮರಾಠ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವ ಉದ್ದೇಶದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಹೊರಡಿಸಲು ಮಹಾರಾಷ್ಟ್ರ ಸಚಿವ ಸಂಪುಟ ಸಭೆಯಲ್ಲಿ  ಮೇ 17 ರ  ಶುಕ್ರವಾರ ತೀರ್ಮಾನಿಸಲಾಗಿದೆ. 

ಈ ಸುಗ್ರೀವಾಜ್ಞೆಯಿಂದ ಅನನುಕೂಲ ಎದುರಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಶುಲ್ಕವನ್ನು ಮರುಪಾವತಿಸಲು ಕೂಡ ಸಂಪುಟ ನಿರ್ಣಯಿಸಿದೆ. ”ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೆ ಕಳುಹಿಸಿದ್ದೇವೆ. ಮರಾಠ ಕೋಟಾ ಅಡಿಯಲ್ಲಿ ಈಗಾಗಲೇ ಕಾಲೇಜುಗಳಿಗೆ ದಾಖಲಾಗಿರುವ ಅಭ್ಯರ್ಥಿಗಳಿಗೆ ಈ ಸುಗ್ರೀವಾಜ್ಞೆ ನೆರವಾಗಲಿದೆ. ಮೂರನೇ ಹಂತದ ದಾಖಲಾತಿ ಕೂಡ ಶೀಘ್ರವೇ ಆರಂಭವಾಗಲಿ¨,”æ ಎಂದು ಕಂದಾಯ ಸಚಿವ ಚಂದ್ರಕಾಂತ್‌ ಪಾಟೀಲ್‌ ತಿಳಿಸಿದ್ದಾರೆ. ಖಾಸಗಿ ಕಾಲೇಜುಗಳಲ್ಲಿ ಮ್ಯಾನೇಜ್‌ಮೆಂಟ್‌ ಕೋಟಾ ಅಡಿಯಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ದಾಖಲಾತಿ ಪಡೆಯಬಹುದು ಎಂದು ಅವರು ಹೇಳಿದ್ದಾರೆ. 

ಮರಾಠ ಸಮುದಾಯಕ್ಕೆ ಸ್ನಾತಕೋತ್ತರ ಕೋರ್ಸ್‌ ಪ್ರವೇಶದಲ್ಲಿ ಶೇ. 16 ಮೀಸಲಾತಿ ನೀಡಲು ಬಾಂಬೆ ಹೈಕೋರ್ಟಿನ ನಾಗ್ಪುರ ಪೀಠ ತಿರಸ್ಕರಿಸಿತ್ತು.